ಅಜ್ಜಂಪುರ: ನೊಳಂಬ ಸಂಘದವರು ಗ್ಯಾರಂಟಿ ಅಧ್ಯಕ್ಷ ಶಿವಾನಂದಸ್ವಾಮಿಗೆ ಸನ್ಮಾನ ಮಾಡದೆ ಅವಮಾನ ಮಾಡಿದ ಎಸ್.ಎಂ.ನಾಗರಾಜ್ ವರ್ತನೆ ಮತ್ತು ಮನಸ್ಥಿತಿಯನ್ನು ಸಮಾಜದ ಪ್ರತಿಯೊಬ್ಬ ಖಂಡಿಸ ಬೇಕು.
ಮಾಜಿ ಶಾಸಕ ಎಸ್.ಎಂ.ನಾಗರಾಜ್ ನೊಳಂಬ ಸಂಘವನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡಿರುವುದು ಎಲ್ಲರಿಗೂ ಗೊತ್ತು. ಇದುವರೆವಿಗೆ ಎಸ್.ಎಂ.ನಾಗರಾಜ್ ಗೆ ತುತ್ತೂರಿ ಯಾಗಿದ್ದ ಶಿವಾನಂದಸ್ವಾಮಿಗೆ ಈಗ ತಿಳಿದಿದ್ದು ತುತ್ತೂರಿ ತಿರಿಗಿಸಿ ಊದಲು ಶುರುಮಾಡಿದ್ದಾರೆ.ಏಕೆಂದರೆ ನಾನು ಜಿಲ್ಲೆಯ ಗ್ಯಾರಂಟಿ ಸಮಿತಿ ಅಧ್ಯಕ್ಷ ನನಗೆ ಸನ್ಮಾನ ಮಾಡುತ್ತಿಲ್ಲ ಎಂದು ಪತ್ರ ಬರೆದು ಅಲವತ್ತು ಕೊಂಡು ಕೆಲವರನ್ನು ಸೇರಿಸಿ ಸಭೆ ಮಾಡಿದ್ದಾರೆ.ಈಗಲಾದರು ಜ್ಞಾನೋದಯವಾಗಿದೆ.
ಶಿವಾನಂದಸ್ವಾಮಿ ಅತ್ತೂ ಕರೆದು ಸನ್ಮಾನ ಮಾಡಿಸಿಕೊಳ್ಳುವ ಕೆಳ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಅವರ ಹಿತೈಷಿಗಳ ಅನಿಸಿಕೆ.ಕಲಿತುದ್ದು ಬೀಡು ಎಂದರೆ ಬಾಯಿಗೆನು ಮಣ್ಣು ಹಾಕಿ ಕೊಳ್ಳಲ ಎಂಬಂತೆ ಆಗಿದೆ.
ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸುವ ಎಸ್.ಎಂ.ಎನ್ ತನ್ನ ಮೂಗಿನ ನೇರಕ್ಕೆ ಕಾರ್ಯಕ್ರಮ ರೂಪಿಸುವುದು ಕಳೆದ ಹತ್ತಾರು ವರ್ಷಗಳಿಂದ ನಡೆಯುತ್ತಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿರೂಪಣೆ, ಸ್ವಾಗತ, ಭಾಷಣ ಮಾಡುತ್ತಿದ್ದಾಗ ಶಿವಾನಂದಸ್ವಾಮಿಯ ಅರಿವಿಗೆ ಬರದಿರುವುದು ಗೊಸುಂಬೆತನ ಎಂದು ನಾಗರಾಜ್ ಕಡೆಯವರ ಕೂಗಾಟ.ಕೆಲವರು ಶಿವಾನಂದಸ್ವಾಮಿಗೆ ಸನ್ಮಾನ ಮಾಡಿದ್ದರೆ ಮುಗಿದು ಹೋಗುತಿತ್ತು ಎನ್ನುತ್ತಾರೆ.
ಜೊತೆಯಲ್ಲಿ ಇದ್ದಾಗ ಹಾಡಿ ಹೊಗಳುವ ಬದಲು ಉಗಿದು ಬುದ್ದಿ ಹೇಳಿದ್ದರೆ ಒಪ್ಪಬಹುದಿತ್ತು . ಶಿವಾನಂದಸ್ವಾಮಿ ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಅಲ್ಲಿ ನಡೆಯುತ್ತಿರುವುದು ಏನು ? ಇದೇ ಕತೆ ವೀರಶೈವ ಲಿಂಗಾಯಿತ ಸಮಾಜದಲ್ಲಿ ಸದಸ್ಯತ್ವ 5,000 ರೂಗೆ ಹೆಚ್ಚಳ ಮಾಡಿದಾಗ ಕೆಲವರ ವಿರೋಧದ ನಡುವೆ ನಾವು ಕಟ್ಟಿದ ಸಮಾಜದಲ್ಲಿ ಬೇರೆಯವರು ಬಂದು ಸೇರಿಕೊಳ್ಳುವುದು ಬೇಡ ಎಂದು ಬಹಿರಂಗವಾಗಿ ಹೇಳಿದ ಶಿವಾನಂದಸ್ವಾಮಿ ಸಮಾಜ ಎಂದರೆ ತಮ್ಮ ಮನೆಯ ಆಸ್ತಿ ಎಂದು ತಿಳಿದುಕೊಂಡಿರುವಾಗ ಎಸ್.ಎಮ್,ಎನ್ ಕೂಡ ಅದೇರೀತಿ ತಿಳಿದುಕೊಂಡಿರಬಹುದು.
ನಸುಗುನ್ನಿ ಬುದ್ದಿ ಬಿಟ್ಟು ನಾಗರಾಜ್ ಜೈ ಜಿಹುಜೂರ್ ಎನ್ನುವ ಬದಲು ನೀವು ತಪ್ಪು ಮಾಡುತ್ತಿರುವಿರಿ ಎಂದು ಹೇಳದೆ ಈಗ ರಾಗ ತೆಗೆದಿರುವುದನ್ನು ಮೆಚ್ಚಲೇ ಬೇಕು. ನಾಗರಾಜ್ ಮಾಡುವ ಸನ್ಮಾನ ನಾಯಿಮೊಲೆ ಹಾಲಿದ್ದಂತೆ ಅವರ ಇಂತಹ ಸಣ್ಣ ವರ್ತೆನೆಗಳು ಜನರಿಗೆ ಹೇಸಿಗೆ ಹಿಡಿಸಿ ಹಲವು ಸಲ ತೀರ್ಮಾನ ಕೊಟ್ಟಿದ್ದಾರೆ ಮತ್ತೆ,ಮತ್ತೆ ಸೋಲಿಸಿದ್ದಾರೆ. ಜನರ ಮನಸ್ಸಿನಿಂದ ಎಸ್ ಎಂ ನಾಗರಾಜ್ ಮರೆಯಾಗಿ ಬಹಳ ದಿನಗಳೆ ಕಳೆದಿವೆ.ಇಂತವರಿಂದ ಸನ್ಮಾನ ಬೇಕಾ.
ಸೊಲ್ಲಾಪುರದಲ್ಲಿ ನಡೆದ ಸಿದ್ದರಾಮ ಜಯಂತಿಯಲ್ಲಿ ನಾಗರಾಜ್ ಕುಟುಂಬ ವೇದಿಕೆಯಲ್ಲಿ ಸಂಪೂರ್ಣ ಅವರಿಸಿತ್ತು.ಅಂದು ನಿರೂಪಣೆ ಮಾಡುವಾಗ ಹಾಡಿ ಹೊಗಳಿ ಶಾಲು ಹೊದ್ದುಕೊಂಡು ಬರುವ ಬದಲು ಅಂದು ಉಗಿಯಬಹುದಿತ್ತು,ಇಲ್ಲ ಪ್ರತಿಭಟಿಸ ಬಹುದಿತ್ತು .ರವಿ ಶ್ಯಾನಭೋಗನ ಮೇಲೆ ಹಲ್ಲೆ ನಡೆದುದರ ವಿರುದ್ದ ಸಮಾಜ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಶಿವಾನಂದಸ್ವಾಮಿ ಎಲ್ಲಿ ಕುಳಿತಿದ್ದರು.?ಈಗಲಾದರು ಸಮಾಜ ಸರಿಮಾಡಲು ಹೊರಟಿರುವ ತಾವು ಯೂಟರ್ನ್ ತೆಗೆದು ಕೊಳ್ಳದೆ ಸಮಾಜ ಸರಿಮಾಡಲಿ ಎಂಬುದು ಬಹಳ ಜನರ ನಿರೀಕ್ಷೆ
ಸಮಾಜ ಕಟ್ಟುವಾಗ ವಿಶಾಲ ಮನಸ್ಸು ಎಲ್ಲರನ್ನು ಒಳಗೊಳ್ಳುವ ಹೃದಯವಂತಿಕೆ ಇರಬೇಕು. ಎಲ್ಲರೂ ನಮ್ಮವರು ಎಂಬ ಮನೋಭಾವ ಮೊದಲಿರಬೇಕು.ಮುಂದಿನ ಪೀಳಿಗೆಯವರಿಗೆ ದಾರಿ ತೋರಿಸಬೇಕು. ಇದು ನಾಗರಾಜ್ ಗೆ ಇಲ್ಲವೇ ಇಲ್ಲ ಅದೇ ನಾಗರಾಜ್ ರವರನ್ನೆ ಹಿಂಬಾಲಿಸುತ್ತಿದ್ದ ಶಿವಾನಂದಸ್ವಾಮಿಗೆ ಈಗ ಜ್ಞಾನೋದಯವಾಗಿರುವುದು ಆಶ್ಚರ್ಯ .
Is Shivanandaswamy’s tribute an insult to Nagaraj?
Leave a comment