ಮೂಡಿಗೆರೆ: ಮೂಡಿಗೆರೆ ಶಾಸಕಿ ನಯನಮೋಟಮ್ಮ ಕೇಸರಿ ಶಾಲು ಧರಿಸಿ ಹಿಂದು ಮಹಸಭಾ ಗಣಪತಿ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಮತ್ತು ಬಿಜೆಪಿ ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಜೊತೆಗೆ ವೇದಿಕೆಯಲ್ಲಿ ಇರುವುದರ ಬಗ್ಗೆ ಆಡಳಿತ ಪಕ್ಷ ಕಾಂಗ್ರೆಸ್ ಗೆ ಇರುಸು ಮುರುಸು ತಂದಿರುವುದರ ಜೊತೆಗೆ ಸಾರ್ವಜನಿಕವಾಗಿ ಟ್ರೋಲ್ ಆಗುತ್ತಿದ್ದಾರೆ.
ನಯನಮೋಟಮ್ಮ ಅಲಿಯಾಸ್ ನಯನ ಕಮಲಮ್ಮ ಎಂದು ಕಾಂಗ್ರೆಸ್ ನವರು ಕರೆಯುತ್ತಿದ್ದಾರೆ.ನಾನು ಹಿಂದೆ ಬಾಂಬೆಯಲ್ಲಿ ಗಣಪತಿ ಹಬ್ಬಗಳನ್ನು ನೋಡಿ ಪ್ರೇರಣೆ ಆಗಿದೆ ಮಗಳು ಹುಟ್ಟಿದಾಗ ಮತ್ತು ಇತರ ಸಂದರ್ಭದಲ್ಲಿ ಗಣಪತಿ ದೇವಾಲಯಕ್ಕೆ ಹೋದಾಗಿನ ಅನುಭವ ಹಂಚಿಕೊಂಡಿರುವ ನಯನ ರಾಜಕೀಯವಾಗಿ ಹೊಸ ದಾರಿ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ತೆಗೆದುಕೊಳ್ಳುವಾಗ ಬಿಜೆಪಿ, ದಳ ಎಂದು ನೋಡುವ ಈಗ ಗಣಪತಿ ಉತ್ಸವ ಆಚರಿಸುವ ಎಂದು ಹೇಳಿರುವುದರ ಬಗ್ಗೆ ಕಾಂಗ್ರೆಸ್ ನಲ್ಲಿ ತೀವ್ರ ಸಂಚಲನದ ಜೊತೆಗೆ ಅಸಮಾಧಾನ ಉಂಟಾಗಿದೆ.
ಕಾಂಗ್ರೆಸ್ ನ ಹಿರಿಯ ಮುಖಂಡರು ನಾವು ತಪ್ಪು ಮಾಡಿದೆವು ಎನ್ನುತ್ತಾ ಅತಿ ಬುದ್ಧಿವಂತಿಕೆ ಒಳ್ಳೆಯದಲ್ಲ ಎನ್ನುತ್ತಿದ್ದಾರೆ.
ಕಾಂಗ್ರೆಸ್ ನವರಿಗೆ ನಯಾ ಪೈಸೆಯಷ್ಟು ಬೆಲೆ ಇಲ್ಲ. ಕಾರ್ಯಕರ್ತರನ್ನು ಗುರುತಿಸುತ್ತಿಲ್ಲ.ಹಿರಿಯರಿಗೆ ಗೌರವವಿಲ್ಲ ಕಾಂಗ್ರೆಸ್ ಸಿದ್ದಾಂತ ಗಾಳಿಗೆ ತೂರಲಾಗಿದೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನನ್ನ ಗಾಡಫಾದರ್ ಎನ್ನುವ ನಯನ ಡಿ.ಕೆ.ರೀತಿಯಲ್ಲಿ ಉಡಾಪೆಯಿಂದ ವರ್ತಿಸುತ್ತಾರೆ ಎಂದು ಸಾಮಾನ್ಯ ಜನರಿಂದ ಹಿಡಿದು ಮುಖಂಡರವರೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮೂಡಿಗೆರೆ ರಾಜಕಾರಣಕ್ಕೆ ಹೊಸ ರೆಕ್ಕೆ, ಪುಕ್ಕಗಳು ಬರುತ್ತಿವೆ.ನಯನ ಬಗ್ಗೆ ಡಿ.ಕೆ.ಶಿವಕುಮಾರ್ ಕೂಡ ಅಸಮಾಧಾನ ವ್ಯಕ್ತಪಡಿಸಿರುವುದನ್ನು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ.ನಯನ ಮಾತ್ರ ಯಾರು ಏನೇ ಹೇಳಿದರು ನನ್ನ ಆಡಳಿತ ನಾನು ಮಾಡುವೆ ಎನ್ನುತ್ತಿದ್ದಾರೆ. ಇದಕ್ಕೆ ಕೇವಲ ಇನ್ನೂರು ಚಿಲ್ಲರೆ ಮತಗಳಲ್ಲಿ ಗೆದ್ದು ಈ ರೀತಿ ನಡವಳಿಕೆ ತೋರಿಸುವ ನಯನ ಮುಂದೆ ದಾರಿ ಯಾವುದಯ್ಯ ಎನ್ನುತ್ತಿರಬೇಕು ಎಂದು ಕುಹಕವಾಡುತ್ತಿರುವುದು ಮಾತ್ರ ಸತ್ಯ. ರಾಜಕೀಯದ ನವರಂಗಿ ಆಟಕ್ಕೆ ಕೊನೆ ಮೊದಲಿಲ್ಲಾ ಎನ್ನ ಬೇಕಾಗಿದೆ.
ಉವಾಚ: ಕಾಂಗ್ರೆಸ್ ನ ಮಾಜಿ ಅಧ್ಯಕ್ಷರೊಬ್ಬರು ಮಾತನಾಡುತ್ತಾ ಅಕಸ್ಮಾತ್ತಾಗಿ ಜಿಲ್ಲೆಯ ಐದು ಕ್ಷೇತ್ರದಲ್ಲಿ ಗೆದ್ದಿದ್ದೇವೆ ಈಗ ಚುನಾವಣೆ ನಡೆದರೆ ಮೊದಲು ಮೂಡಿಗೆರೆ ಸೋಲುತ್ತೇವೆ ನಂತರ ಉಳಿದ ಕ್ಷೇತ್ರಗಳು ಅಷ್ಟೇ ಎಂದು ಎರಡು ವರ್ಷ ಮೊದಲು ಭವಿಷ್ಯ ಹೇಳುತ್ತಿದ್ದಾರೆ.
Is Nayana Motamma alias Nayana Kamalamma?
Leave a comment