ಚಿಕ್ಕಮಗಳೂರು : ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಮಟ್ಟದ ಚುನಾವಣೆ ಮುಗಿದು ಶಾಸಕರುಗಳ ಮೂಗಿನ ನೇರಕ್ಕೆ ಪದಾಧಿಕಾರಿಗಳ ಅಯ್ಕೆ ನಡೆಯುತ್ತಿದೆ.ಸೇವೆ,ಸ್ಥಾನಮಾನ ಜೇಷ್ಠತೆಗಿಂತ ತಮ್ಮ ತಾಳಕ್ಕೆ ಕುಣಿಯುವವರನ್ನು ಅಧ್ಯಕ್ಷ ಮತ್ತು ಪದಾಧಿಕಾರಿಗಳಾಗಿ ನೇಮಿಸಿ ಚಪ್ಪಾಳೆ ತಟ್ಟಿಸಿಕೊಳ್ಳುತ್ತಿದ್ದಾರೆ.
ಪ್ರಸ್ತುತ ಜಿಲ್ಲಾ ಮಟ್ಟದಲ್ಲಿ 66 ಸ್ಥಾನಗಳಿಗೆ ಚುನಾವಣೆ ಭರ್ಜರಿಯಾಗಿ ನಡೆಯುತ್ತಿದೆ.
ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹೆಣ,ಹೆಂಡ ಹಂಚುವುದು ಸಾಮಾನ್ಯ ಆದರೆ ನೌಕರರ ಚುನಾವಣೆಯಲ್ಲಿ ಕುರಿ,ಕೋಳಿ,ವಿಸ್ಕಿ,ಬ್ರಾಂಡಿ ಮತ್ತು ಹಣ ಸದ್ದು ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಮತಚಲಾಯಿಸುವ ನೌಕರರಿಗೆ ಅರಕಲಗೂಡು, ಮಂಡ್ಯ ಮತ್ತು ಮಳವಳ್ಳಿಯಿಂದ ಕುರಿ ತಂದು ಬಾಡೂಟವನ್ನು ಭಾನುವಾರ ಕೆಲವು ಕಡೆ ನೂರಾರು ನೌಕರರಿಗೆ ಕುಡಿಸಿ ಉಣಬಡಿಸಿ ರಣಕೇಕೆ ಹಾಕುತ್ತಿರುವುದನ್ನು ಪಾರ್ಟಿಗೆ ಹೋಗದ ನೌಕರರು ಹೇಳುತ್ತಿರುವುದು ಸುಳ್ಳೇನಲ್ಲಾ.
ಇನ್ನು ಚುನಾವಣೆ ನಡೆಯುವುದು 16ನೇ ತಾರೀಖು ,ಅದರ ಹಿಂದಿನ ದಿನ ಹಣ ಹಂಚಲು ಕೂಡ ಸ್ಪರ್ಧಾಳುಗಳು ತಯಾರಿ ನಡೆಸಿದ್ದಾರೆ ಎಂಬ ಮಾಹಿತಿಯಿದೆ. ಇದಕ್ಕಾಗಿ ಹಲವು ರಾಜಕೀಯ ಪಕ್ಷದವರ ನೆರವು ಕೂಡ ಇದೆ.ಒಟ್ಟಾರೆ ನೌಕರರ ಸಂಘದ ಚುನಾವಣೆಗಳು ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದಂತೆ ನಡೆಸುತ್ತಿರುವುದರ ಬಗ್ಗೆ ನೌಕರರನ್ನು ಪ್ರಶ್ನೆಸಿದರೆ ನಾವೇ ಅಲ್ವಾ ಸಾರ್ ಎಲ್ಲಾ ಚುನಾವಣೆ ನಡೆಸುವುದು ಎಂದು ಮಾರ್ಮಿಕವಾಗಿ ಉತ್ತರಿಸುವುದನ್ನು ನೋಡಿದರೆ ಹೌದು,ಹೌದು ಎನ್ನಿಸುತ್ತದೆ.
ನಾಮಪತ್ರ ಪರಿಶೀಲನೆ ಮುಗಿದಿದ್ದು ಹಲವು ಇಲಾಖೆಗಳಲ್ಲಿ ಅವಿರೋಧವಾಗಿ ಅಯ್ಕೆಯಾಗಿದೆ ಎಂದು ತಿಳಿದುಬಂದಿದೆ. ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿ ಬಸವರಾಜಪ್ಪ ಚುನಾವಣೆ ನಡೆಸಿಕೊಡುತ್ತಿದ್ದಾರೆ.
Leave a comment