ಚಿಕ್ಕಮಗಳೂರು : ನಕ್ಸಲ್ ಶರಣಾಗತಿ ಸಂಬಂಧ ಯಾವುದೇ ಪ್ರಸ್ತಾವನೆ ಜಿಲ್ಲಾಡಳಿತ ಮುಂದೆ ಬಂದಿಲ್ಲ, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಹೇಳಿದ್ದಾರೆ. ರಾಜ್ಯ ಸರ್ಕಾರದ ನಕ್ಸಲ್ ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಆರು ಜನ ಸಕ್ರಿಯ ನಕ್ಸಲರು ಶರಣಾಗತಿಗೆ ಮುಂದಾಗಿದ್ದಾರೆಂಬ ಗಂಭೀರ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ ಅವರು ಈ ಸಂಬಂಧ ನನಗೆ ಯಾವುದೇ ಮಾಹಿತಿ ಇಲ್ಲ, ಆ ರೀತಿ ಏನಾದರೂ ಇದ್ದರೇ ನಕ್ಸಲ್ ಶರಣಾಗತಿ ಕಮಿಟಿ ಇದ್ದು, ರಾಜ್ಯ ಸರ್ಕಾರದಿಂದ ಮಾಹಿತಿ ನೀಡಬೇಕು. ರಾಜ್ಯ ಸರ್ಕಾರದಿಂದ ಅಂತಹ ಯಾವುದೇ ಮಾಹಿತಿ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ನಕ್ಸಲ್ ಶರಣಾಗತಿ ಪ್ರಸ್ತಾವ ರಾಜ್ಯ ಸರ್ಕಾರದಿಂದ ನಮ್ಮ ಮುಂದೇ ಬಂದರೇ, ಕಮಿಟಿ ನಿಯಮದಂತೆ ಶರಣಾಗತಿ ಪ್ರಕ್ರಿಯೆ ಮಾಡಲಾಗುವುದು, ಈ ಹಿಂದೆ ಶರಣಾಗಿರುವ ನಕ್ಸಲರಿಗೆ ಪ್ಯಾಕೇಜ್ ಅಡಿ ಏನೇನು ಭರವಸೆ ನೀಡಲಾಗಿತ್ತು, ಅವುಗಳನ್ನು ಸಮರ್ಪಕವಾಗಿ ಈಡೇರಿಸಿಲ್ಲವೆಂಬ ಕಾರಣಕ್ಕೆ ಶರಣಾಗತಿಗೆ ವಿಳಂಬ ಮಾಡುತ್ತಿದ್ದಾರೆಂದು ಕೇಳಿ ಬರುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಸಿ ಮೀನಾ ನಾಗರಾಜ್ ನಮ್ಮ ಹಂತದಲ್ಲಿ ಏನೆಲ್ಲಾ ಸಮಸ್ಯೆ ಪರಿಹರಿಸಲು ಸಾಧ್ಯ ಅವುಗಳನ್ನು ಮಾಡಲಾಗಿದೆ. ಉಳಿದಂತೆ ಅವರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಮತ್ತು ಕಮಿಟಿ ಮುಂದೇ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
Leave a comment