Home namma chikmagalur Honnabittevu Holakkella:”ಹೊನ್ನ ಬಿತ್ತೇವು ಹೊಲಕ್ಕೆಲ್ಲ” ಜಾನಪದ ಲೋಕದ ಬೃಹತ್ ಗ್ರಂಥ
namma chikmagalur

Honnabittevu Holakkella:”ಹೊನ್ನ ಬಿತ್ತೇವು ಹೊಲಕ್ಕೆಲ್ಲ” ಜಾನಪದ ಲೋಕದ ಬೃಹತ್ ಗ್ರಂಥ

Share
Share

ಮೈಸೂರು: ಶ್ರೀ ಸುತ್ತೂರು ಶ್ರೀಗಳ ಭೇಟಿ. ಮೂರನೇ ಬಾರಿಗೆ 2025ರ ಮಾರ್ಚ್ 12ರಂದು ಚಿಕ್ಕಮಗಳೂರಿನಲ್ಲಿ ಅನಾವರಣಗೊಳ್ಳಲಿದೆ “ಹೊನ್ನ ಬಿತ್ತೇವು ಹೊಲಕ್ಕೆಲ್ಲ” ಜಾನಪದ ಲೋಕದ ಬೃಹತ್ ಗ್ರಂಥ 1967ರಲ್ಲಿ ಪ್ರಪ್ರಥಮ ಜಾನಪದ ಸಾಹಿತ್ಯ ಸಮ್ಮೇಳನ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಜರುಗಿತ್ತು.

ಈ ಸಮ್ಮೇಳನಕ್ಕೆ ಮೂಲ ಪ್ರೇರಣೆ ಹಾಸನ ಜಿಲ್ಲೆ ಬೇಲೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭ. ಅಂದು ಬೇಲೂರಿನ ಸಾಹಿತ್ಯ ಸಮ್ಮೇಳನದಲ್ಲಿ ಸಮಾನ ಮನಸ್ಕರು ಸೇರಿ ಜಾನಪದ ವಿಷಯ ಕುರಿತು ಚರ್ಚಿಸುತ್ತಿರುವಾಗ, ನಾವೇಕೆ ಜಾನಪದ ವಿಷಯಕ್ಕೆ ಸಂಬಂಧಪಟ್ಟಂತೆ ಒಂದು ಸಮ್ಮೇಳನ ಮಾಡಬಾರದು ಎಂಬ ವಿಷಯ ಮುನ್ನೆಲೆಗೆ ಬಂತು, ಜಾನಪದ ವಿಷಯ ಮುನ್ನೆಲೆಗೆ ಬಂದ ಕಾರಣ , ಸಮಾನ ಮನಸ್ಕರೆಲ್ಲ ಒಟ್ಟುಗೂಡಿ ಯಾವ ಸ್ಥಳದಲ್ಲಿ ಜಾನಪದ ಸಮ್ಮೇಳನ ಮಾಡಬೇಕು ಎಂದು ಚರ್ಚಿಸಿದರು,

ಈ ಚರ್ಚೆಯ ಫಲಿತಾಂಶ ಮುಂದೆ ಬುನಾದಿಯಾಗಿದ್ದು 1967 ರಲ್ಲಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ನಡೆದ ಪ್ರಪ್ರಥಮ ಜಾನಪದ ಸಮ್ಮೇಳನ. ಈ ಸಮಾನ ಮನಸ್ಕರಲ್ಲಿ ಅತ್ಯಂತ ಪ್ರಮುಖವಾದವರು ಜಾನಪದ ಕೋಗಿಲೆ ತರೀಕೆರೆಯ ಕೆ.ಆರ್ ಲಿಂಗಪ್ಪ ಮತ್ತು ನಾಡೋಜ ಗೊರುಚ ಅವರು. ಈ ಇಬ್ಬರು ಮಹನೀಯರ ಮುಖಂಡತ್ವದಲ್ಲಿ ಸಮಾನ ಮನಸ್ಕಾರ ತಂಡ ಸೇರಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಪಟ್ಟಣದಲ್ಲಿ ಪ್ರಪ್ರಥಮ ಜಾನಪದ ಸಮ್ಮೇಳನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಿದರು.

ಜಾನಪದ ಕೋಗಿಲೆ ಕೆ. ಆರ್ ಲಿಂಗಪ್ಪ ಮತ್ತು ನಾಡೋಜ ಗೊರುಚ ಅವರ ನೇತೃತ್ವದಲ್ಲಿ ನೆಡಿದ ಈ ಸಮ್ಮೇಳನ ಪ್ರಪ್ರಥಮ ಜಾನಪದ ಸಮ್ಮೇಳನ ಎಂಬ ಹೆಗ್ಗಳಿಕೆಗೆ ಕಾರಣವಾಯ್ತು. ಅಂದು ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ದ.ರಾ ಬೇಂದ್ರೆಯವರು, ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರು ಆಗಮಿಸಿ ಈ ಸಮ್ಮೇಳನದ ಉದ್ಘಾಟನೆ ಮಾಡಿದ್ದು ಈಗ ಐತಿಹಾಸಿಕ ಚರಿತ್ರೆ ಎನ್ನಬಹುದು.

ಅ ಸಂದರ್ಭದಲ್ಲಿ ಈ ನಾಡಿನ ನೂರಾರು ಪ್ರಖ್ಯಾತ ಜಾನಪದ ವಿದ್ವಾಂಸರಿಂದ, ಸಮ್ಮೇಳನದ ಸವಿ ನೆನಪಿಗಾಗಿ ಹೊನ್ನ ಬಿತ್ತೇವು ಹೊಲಕ್ಕೆಲ್ಲ ಎಂಬ 965 ಪುಟಗಳ ಬೃಹತ್ತಾದ ಜಾನಪದ ಆಕರ ಗ್ರಂಥವನ್ನು ಸಮ್ಮೇಳನದ ಸ್ವಾಗತ ಸಮಿತಿಯ ಮೂಲಕ ಅತ್ಯಂತ ಮಹತ್ವಪೂರ್ಣ ಲೇಖನಗಳೊಂದಿಗೆ ಹೊರತರಲಾಗಿತ್ತು, ಈ ಜಾನಪದ ಆಕರ ಗ್ರಂಥದ ಫಲವೇ ಇಂದಿನ ಜಾನಪದ ವಿಶ್ವವಿದ್ಯಾಲಯ ಸಂಸ್ಥಾಪನೆಗೆ ಕಾರಣವಾಗಿದೆ. ಹಾವೇರಿಯಲ್ಲಿರುವ ಈ ಜಾನಪದ ವಿಶ್ವವಿದ್ಯಾಲಯವು ಪ್ರಪಂಚದ ಮೊಟ್ಟ ಮೊದಲ ಏಕೈಕ ಜಾನಪದ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ. ಹೊನ್ನ ಬಿತ್ತೇವು ಹೊಲಕ್ಕೆಲ್ಲ ಎಂಬ ಈ ಆಕರ ಗ್ರಂಥದ ಹೆಸರೇ ಜಾನಪದ ವಿಶ್ವವಿದ್ಯಾಲಯದ ಘೋಷವಾಕ್ಯವಾಗಿದೆ.

ತದನಂತರ 2009ನೇ ಇಸ್ವಿಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಈ ಗ್ರಂಥ ಎರಡನೇ ಮುದ್ರಣವನ್ನು ಕಂಡಿತ್ತು. ಈಗ ಈ ಪುಸ್ತಕದ ಪ್ರತಿಗಳು ಸಂಪೂರ್ಣ ಮಾರಾಟವಾಗಿರುವ ಕಾರಣ, ರಾಜ್ಯದ ಹಲವು ಕಡೆ ಈ ಮಹತ್ವಪೂರ್ಣ ಪುಸ್ತಕಕ್ಕಾಗಿ ಅತೀ ಬೇಡಿಕೆ ಇರುವುದರಿಂದ ಮೂರನೇ ಮುದ್ರಣವಾಗಿ ಹೊನ್ನ ಬಿತ್ತೇವು ಹೊಲಕ್ಕೆಲ್ಲ ಎಂಬ ಈ ಗ್ರಂಥವು 2025ರ ಮಾರ್ಚ್ 12ರಂದು ಚಿಕ್ಕಮಗಳೂರಿನಲ್ಲಿ ಅನಾವರಣಗೊಳ್ಳಲಿದೆ.

ಮತ್ತೊಮ್ಮೆ ಈ ಬೃಹತ್ ಗ್ರಂಥ ಮೂರನೇ ಮುದ್ರಣವಾಗಿ ಹೊರಹೊಮ್ಮಲು ನಾಡೋಜ ಗೊರುಚ ಸ್ಫೂರ್ತಿಯಾಗಿದ್ದಾರೆ. ಕಾರಣ, ಚಿಕ್ಕಮಗಳೂರಿನ ಇತಿಹಾಸದಲ್ಲಿಯೇ ಗೊರುಚ ಅವರು ಪ್ರಪ್ರಥಮವಾಗಿ,ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡ ಮೇಲೆ ಚಿಕ್ಕಮಗಳೂರಿನ ಪತ್ರಕರ್ತರೊಟ್ಟಿಗೆ ಸಂವಾದ ಮಾಡುವಾಗ ಈ ಗ್ರಂಥದ ಮೂರನೇ ಮುದ್ರಣದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ಪ್ರಸ್ತಾಪದ ಗೌರವಾರ್ಥ ಸುದ್ದಿರಾಜು ಪ್ರಕಾಶನ ಮೂರನೇ ಮುದ್ರಣವಾಗಿ ಈ ಪುಸ್ತಕವನ್ನು ಹೊರ ತರುತ್ತಿದೆ.

ಈಗಾಗಲೇ ಮುದ್ದಣಕ್ಕೆ ಸಂಬಂಧಪಟ್ಟಂತ ಕೆಲಸ ಕಾರ್ಯಗಳು ಬಹುತೇಕ ಮಗಿದಿವೆ . ಈ ಮೂರನೇ ಮುದ್ರಣದ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರವನ್ನು ಸುದ್ದಿ ರಾಜು ಪ್ರಕಾಶನ ಮತ್ತು ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಲಿದೆ. ಈ ಶ್ರೇಷ್ಠ ಜಾನಪದ ಗ್ರಂಥದ ಅನಾವರಣ ಕಾರ್ಯಕ್ರಮದ ಸಂಬಂಧ, ಸುತ್ತೂರಿನ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರನ್ನು ಆಹ್ವಾನಿಸಲು ಇಂದು ಶ್ರೀ ಸುತ್ತೂರು ಮಠಕ್ಕೆ ಸುದ್ದಿರಾಜು ಪ್ರಕಾಶನದ ಹಾಗೂ ನ್ಯೂಸ್ ಕಿಂಗ್ ಜಾಲತಾಣದ ಪ್ರಧಾನ ಸಂಪಾದಕರಾದ ಎನ್.ರಾಜು. ರೈತ ಮುಖಂಡ ನೀರಾವರಿ ಹೋರಾಟಗಾರರಾದ ಗುರುಶಾಂತಪ್ಪ.ಚಿಕ್ಕಮಗಳೂರು ಜಿಲ್ಲಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ರವೀಶ್ ಖ್ಯಾತನ ಬೀಡು. ಉಪಾಧ್ಯಕ್ಷರಾದ ನಟರಾಜ್ ಎಸ್ ಕೊಪ್ಪಲು ಅವರು ಇಂದು ಸುತ್ತೂರಿನ ಶ್ರೀಮಠದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಭಿನ್ನಹ ನೀಡಿದರು.

Honnabittevu Holakkella is a huge book on the world of folklore.

D. M. Manjunathaswamy

Share

Leave a comment

Leave a Reply

Your email address will not be published. Required fields are marked *

Don't Miss

ಇಬ್ಬರು ಅಮಾಯಕರನ್ನು ಬಲಿಪಡೆದಿದ್ದ ಕಾಡಾನೆ ಸೆರೆ

ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ಮಲೆನಾಡಿಗರ ನಿದ್ದೆಗೆಡಿಸಿ, ಇಬ್ಬರು ಅಮಾಯಕರನ್ನು ಬಲಿಪಡೆದಿದ್ದ ರಕ್ಕಸ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ. ಭಾನುವಾರ ಬೆಳಿಗ್ಗೆ ಮತ್ತೊಬ್ಬ ಕಾರ್ಮಿಕ ಮಹಿಳೆಯನ್ನು ಭೀಕರವಾಗಿ ಕೊಂದ...

ಆಸ್ತಿ ವಿವಾದ – ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಆಸ್ತಿ ವಿವಾದವೊಂದು ಭೀಕರ ಸ್ವರೂಪ ಪಡೆದುಕೊಂಡಿದೆ. ತಂದೆ ತಾಯಿ ಹಾಗೂ ತಂಗಿಯನ್ನು ಕಳೆದುಕೊಂಡು ಅನಾಥನಾಗಿದ್ದ ಯುವಕನೋರ್ವ ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಾಫಿನಾಡನ್ನು ಬೆಚ್ಚಿಬೀಳಿಸಿದೆ. ನಗರದ ಪುನೀತ್‌...

Related Articles

ಖಂಡ್ರೆ ಸಭೆಯಿಂದ ಕಾಡು ಪ್ರಾಣಿಗಳ “ಅನಾಹುತ” ನಿಲ್ಲಿಸಲು ಸಾಧ್ಯವೇ ?

ಅರಣ್ಯ ಸಚಿವ ಖಂಡ್ರೆ(ಕಂಡರೆ) ಆನೆ,ಹುಲಿ.ಸಿಂಹ,ಇಲಿ,ಪಲ್ಲಿಗಳು ನಡುಗುತ್ತವೆ ಎಂಬ ಭ್ರಮೆ ಯಲ್ಲಿ ಬಾಳೆ ಹೊನ್ನೂರಲ್ಲಿ ರೈತರು,ಬೆಳೆಗಾರರು ಮತ್ತು...

ಭೀಕರ ಕೊಲೆ ಆರೋಪಿಗೆ ಜೈಲು ಶಿಕ್ಷೆ-ದಂಡ

ಮೂಡಿಗೆರೆ: ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣದ ಆರೋಪಿಗೆ ಚಿಕ್ಕಮಗಳೂರಿನ ಜಿಲ್ಲಾ ಮತ್ತು...

ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಎಸ್.ಎಲ್.ಭೋಜೇಗೌಡ

ಚಿಕ್ಕಮಗಳೂರು: ದುಬೈ ವಿಮಾನ ನಿಲ್ದಾಣದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಸಿಲುಕಿದ್ದಾರೆ. ದುಬೈ ವಿಮಾನ ನಿಲ್ದಾಣದಿಂದ...

ಬಾಳೆಹೊನ್ನೂರಿನಲ್ಲಿ ನಡೆದ ಸಭೆಯಲ್ಲಿ ಅರಣ್ಯ ಸಚಿವರ ಭಾಷಣಕ್ಕೆ ಅಡ್ಡಿ

ಎನ್.ಆರ್ ಪುರ: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ...