Home ತನಿಕೋಡು–ಎಸ್.ಕೆ.ಬಾರ್ಡರ್‌ ನಲ್ಲಿ ಭಾರಿ ವಾಹನ ನಾಲ್ಕು ತಿಂಗಳು ನಿಷೇಧ
HomechikamagalurLatest Newsnamma chikmagalur

ತನಿಕೋಡು–ಎಸ್.ಕೆ.ಬಾರ್ಡರ್‌ ನಲ್ಲಿ ಭಾರಿ ವಾಹನ ನಾಲ್ಕು ತಿಂಗಳು ನಿಷೇಧ

Share
Share

ಶೃಂಗೇರಿ: ಶೃಂಗೇರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ತನಿಕೋಡಿನಿಂದ ಎಸ್.ಕೆ.ಬಾರ್ಡರ್‌ ತನಕ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕಿರಿದಾದ ರಸ್ತೆಯಲ್ಲಿ ತಿರುವುಗಳು, ಕಡಿದಾದ ಏರಿ, ತುಂಗಾ ನದಿಯ ದಂಡೆಯಿಂದ ಕೂಡಿದೆ. ಭಾರಿ ಮಳೆ ಸುರಿಯುತ್ತಿರುವುದರಿಂದ ರಸ್ತೆ ಕುಸಿಯುವ ಸಾಧ್ಯತೆ ಇದೆ. ಆದ್ದರಿಂದ ಭಾರಿ ವಾಹನಗಳ ಸಂಚಾರ ಸೆ.30ರ ತನಕ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಬದಲಿ ಮಾರ್ಗಗಳನ್ನು ಜಿಲ್ಲಾಧಿಕಾರಿ ಸೂಚಿಸಿದ್ದು, ಚಿಕ್ಕಮಗಳೂರು ಕಡೆಯಿಂದ ಬರುವ ವಾಹನಗಳು ಬಾಳೆಹೊನ್ನೂರು– ಮಾಗುಂಡಿ–ಕಳಸ–ಕುದುರೆಮುಖ–ಎಸ್‌.ಕೆ.ಬಾರ್ಡರ್‌ ಮಾರ್ಗದಲ್ಲಿ ಸಂಚರಿಸಬಹುದು.

ಎನ್.ಆರ್.ಪುರ ಕಡೆಯಿಂದ ಬರುವ ವಾಹನಗಳೂ ಬಾಳೆಹೊನ್ನೂರು ತಲುಪಿ ಇದೇ ಮಾರ್ಗದಲ್ಲಿ ಸಾಗಬೇಕು. ಕೊಪ್ಪ ಕಡೆಯಿಂದ ಬರುವ ವಾಹನಗಳು ಇದೇ ಬಾಳೆಹೊನ್ನೂರು ತಲುಪಿ ಮಾರ್ಗದಲ್ಲಿ ಸಂಚರಿಸಬೇಕು ಎಂದು ತಿಳಿಸಿದ್ದಾರೆ.

Heavy vehicles banned at Thanikodu-SK border for four months

Share

Leave a comment

Leave a Reply

Your email address will not be published. Required fields are marked *

Don't Miss

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಹೊಸ ವಿವಾದ

ಚಿಕ್ಕಮಗಳೂರು: ಕಾಫಿನಾಡಿನ ಧಾರ್ಮಿಕ ಕ್ಷೇತ್ರ ‘ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ’ (ದತ್ತಪೀಠ) ಆವರಣದಲ್ಲಿ ಈಗ ಮತ್ತೊಂದು ಹೊಸ ವಿವಾದ ಮುನ್ನೆಲೆಗೆ ಬಂದಿದೆ. ದತ್ತಪೀಠದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಮಾಣಿಕ್ಯಧಾರಕ್ಕೆ ತೆರಳುವ...

ರ್‍ಯಾಪಿಡ್ ಬೈಕ್-ಆಟೋ ಪರವಾನಗಿ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ರ್‍ಯಾಪಿಡ್ ಬೈಕ್ ಮತ್ತು ಆಟೋ ಪರವಾನಗಿಯನ್ನು ನಿಲ್ಲಿಸಬೇಕು ಎ ಂದು ಒತ್ತಾಯಿಸಿ ಸೋಮವಾರ ಚಿಕ್ಕಮಗಳೂರು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘವು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‌ಪಾರ್ಕ್ ವೃತ್ತದವರೆಗೆ...

Related Articles

ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಯು ದೇಶದಲ್ಲೇ ನಂ.1ನೇ ಸ್ಥಾನ

ಚಿಕ್ಕಮಗಳೂರು: ಪರಿಸರದ ಮೇಲೆ ಹಾನಿ, ಒತ್ತಡ ತಡೆಯುವ ನಿಟ್ಟಿನಲ್ಲಿ ಈವರೆಗೆ ಯಾವುದೇ ಕೈಗಾರಿಕೆ ಅಥವಾ ಕಟ್ಟಡ...

ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಪ್ರಕರಣ ದಾಖಲು

ಚಿಕ್ಕಮಗಳೂರು: ಸೈಬರ್ ಕ್ರೈಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ಶೋಷಣೆಯ ಅಶ್ಲೀಲ...

ಬಾಹ್ಯಾಕಾಶ ಕ್ಷೇತ್ರದಲ್ಲಿ ಆಲ್ದೂರಿನ ಯುವಕನ ಸಾಧನೆ

ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ ‘Pixxeಟ’ ಸ್ಟಾರ್ಟ್‌ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ...

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಪದ ಬಳಸಲು ಮನವಿ

ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲೆಯ ಅಂಗಡಿ-ಮುಂಗಟ್ಟು ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಶೇ.೬೦ರಷ್ಟು ಕನ್ನಡ ಪದಗಳ...