ಚಿಕ್ಕಮಗಳೂರು :
ಸಾಲು-ಸಾಲು ರಜೆ ಹಿನ್ನೆಲೆಯಲ್ಲಿ ಕಾಫಿನಾಡಲ್ಲಿ ಪ್ರವಾಸಿಗರ ಜಾತ್ರೆಯೇ ನೆರೆದಿದೆ. ಗಿರಿಶ್ರೇಣಿಯಲ್ಲಂತೂ ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ಟ್ರಾಫಿಕ್ ಜಾಮ್ ಆಗಿದೆ.
ಮುಳ್ಳಯ್ಯನಗಿರಿ, ಐ.ಡಿ ಪೀಠದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನಗಳ ದಟ್ಟಣೆಯಿಂದಾಗಿ ಮುಳ್ಳಯ್ಯನಗಿರಿ ಯಲ್ಲಿ ಪ್ರವಾಸಿಗರು ಪರದಾಡ್ತಿದ್ದಾರೆ
ಮುಂದೆ ಸಾಗಲು ಆಗದೆ ಗಂಟೆ ಗಟ್ಟಲೇ ನಿಂತಲ್ಲೇ ನಿಂತು ಪ್ರವಾಸಿಗರು ಹೈರಾಣಾಗಿದ್ದಾರೆ.
ಸೂಕ್ಷ್ಮ ಪ್ರದೇಶವಾಗಿರುವ ಬೆಟ್ಟಗಳ ಸಾಲಿನಲ್ಲಿ ಪರಿಶೀಲನೆ ನಡೆಸಿರುವ ಜೀಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಡೆಂಜರ್ ಪ್ಲೇಸ್ ಎಂದು ಗುರುತಿಸಿದ್ದರೂ ಪ್ರವಾಸಿಗರು ಬರುವುದು ಕಡಿಮೆ ಆಗಿಲ್ಲ, ಅತಿಯಾದ ವಾಹನ ದಟ್ಟಣೆಗೆ ಪರಿಸರ ಪ್ರೇಮಿಗಳು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಮುಳ್ಳಯ್ಯನಗಿರಿ ಭಾಗಕ್ಕೆ ನಿಗಧಿತ ಟೂರಿಸ್ಟ್ ಬಿಡುವಂತೆ ಮನವಿ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸತತವಾಗಿ ರಜೆಗಳು ಇರುವುದರಿಂದ ಚಿಕ್ಕಮಗಳೂರು ತಾಲೂಕಿನ ಪಶ್ಚಿಮ ಘಟ್ಟಗಳ ತಪ್ಪಲಿನ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿವೆ. ಇದನ್ನು ನೋಡಿದರೆ ಬೆಂಗಳೂರು ಟ್ರಾಫಿಕ್ ಅನ್ನು ಮೀರಿಸುವಂತೆ ವಾಹನ ದಟ್ಟಣೆ ಏರ್ಪಟ್ಟಿದೆ.
Leave a comment