Home namma chikmagalur chikamagalur ಸಿಡಿಎ ಅಧ್ಯಕ್ಷರಾಗಿ ಎಚ್‌.ಪಿ. ಮಂಜೇಗೌಡ ನೇಮಕ
chikamagalurHomeLatest Newsnamma chikmagalur

ಸಿಡಿಎ ಅಧ್ಯಕ್ಷರಾಗಿ ಎಚ್‌.ಪಿ. ಮಂಜೇಗೌಡ ನೇಮಕ

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಸಿಡಿಎ) ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ. ಮಂಜೇಗೌಡ ಅವರನ್ನು ನಾಮನಿರ್ದೇಶನ ಮಾಡಿ ನಗರಾಭಿವೃದ್ಧಿ ಇಲಾಖೆ ಮಂಗಳವಾರ ಆದೇಶಿಸಿದ್ದು, ಶುಕ್ರವಾರ ಬೆಳಗ್ಗೆ 10.30ಕ್ಕೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂತ ನಂತರ ಕಾಂಗ್ರೆಸ್‌ ಮುಖಂಡ ನಯೋಜ್ ಅವರನ್ನು ಸಿಡಿಎ ಅಧ್ಯಕ್ಷನಾಗಿ ನೇಮಕ ಮಾಡಲಾಗಿತ್. ಇದೀಗ ಮುಂದಿನ ಅವಧಿಗೆ ಮಂಜೇಗೌಡ ಅವರನ್ನು ನೇಮಕ ಮಾಡಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಹಲವು ವರ್ಷದಿಂದ ಕಾಂಗ್ರೆಸ್‌ ಪಕ್ಷಕ್ಕಾಗಿ ಶ್ರಮಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಜೇಗೌಡ ಅವರನ್ನು ನೇಮಕ ಮಾಡಲಾಗಿದೆ.

ಸಿಡಿಎ ಅಧ್ಯಕ್ಷ ಸ್ಥಾನಕ್ಕೆ ಮಂಜೇಗೌಡ ಅವರೊಂದಿಗೆ ಪರಿಶಿಷ್ಟ ವರ್ಗದ ಹಿರೇ ಮಂಗಳೂರಿನ ರಾಮಚಂದ್ರ ಆಕಾಂಕ್ಷಿಯಾಗಿದ್ದರು. ಅಂತಿಮವಾಗಿ ಮಂಜೇಗೌಡರಿಗೆ ಅದೃಷ್ಟ ಲಭಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ತಮ್ಮಯ್ಯ ಪರವಾಗಿ ಈ ಇಬ್ಬರು ನಾಯಕರು ಅವಿರತವಾಗಿ ಶ್ರಮಿಸಿದ್ದರು.

ಈ ಕುರಿತು ಮಾತನಾಡಿರುವ ಎಚ್‌.ಪಿ. ಮಂಜೇಗೌಡ, ಕಾಂಗ್ರೆಸ್‌ನಲ್ಲಿ ಇಷ್ಟು ವರ್ಷದ ಸೇವೆ ಪರಿಗಣಿಸಿ ಸಿಡಿಎ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹಿರೇಮಂಗಳೂರು ರಾಮಚಂದ್ರ ಅವರ ಸೇವೆಯನ್ನು ಪಕ್ಷ ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

H.P. Manjegowda appointed as CDA Chairman

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...