ಚಿಕ್ಕಮಗಳೂರು: ಕಡೂರು ಶಾಸಕರ ಪಿಎ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿದ್ದ ಸರ್ಕಾರಿ ನೌಕರ ಇಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಅಹವಾಲು ಹೇಳಿಕೊಂಡರು.
ಕಡೂರು ಕಾಂಗ್ರೆಸ್ ಶಾಸಕ ಕೆ.ಎಸ್. ಆನಂದ್ ಅವರ ಆಪ್ತ ಸಹಾಯಕ (ಪಿಎ) ಸೇರಿದಂತೆ ನಾಲ್ವರಿಂದ ಹಣಕ್ಕಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಸಾಂಖ್ಯಿಕ ನಿರೀಕ್ಷಕ ಅಧಿಕಾರಿ ಇಕ್ಸಾಲ್ ಇಂದು ದಿಢೀರ್ ಜಿಲ್ಲಾಧಿಕಾರಿಗಳ ಭೇಟಿ ಮಾಡಿದರು.
ಇಕ್ಸಾಲ್ ಅವರು ಬುಧವಾರವೇ ಚಿಕ್ಕಮಗಳೂರು ನಗರದ ವಿಜಯಪುರದ ಮನೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಅವರನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.
ಕಡೂರು ತಾಲೂಕು ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಇಕ್ಸಾಲ್, ಶಾಸಕರ ಪಿಎ ಮಂಜುನಾಥ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಕುಮಾರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಕಲ್ಲೇಶ್ ಮತ್ತು ಕಡೂರು ತಹಶೀಲ್ದಾರ್ ಪೂರ್ಣಿಮಾ ಅವರು ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಈ ನಾಲ್ವರು ಪ್ರತಿ ತಿಂಗಳು ೨೫,೦೦೦ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟು ಸತಾಯಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಇಕ್ಸಾಲ್, ಇದರಿಂದ ಬೇಸತ್ತು ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕಡೂರು ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಅಧಿಕಾರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದುಸಂಜೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಇಕ್ಬಾಲ್ ಜಿಲ್ಲಾಧಿಕಾರಿ ಎಂ.ಎಲ್‌ನಾಗರಾಜ್‌ರವರ ಹತ್ತಿರ ಡೆತ್ ನೋಟ್ ಬರೆದ ಕಾರಣತಿಳಿಸಿದರು. ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು ಇವತ್ತು ಬಂದಿದ್ದೀಯಾ ಇಷ್ಟು ದಿನ ಯಾಕೆ ಬಂದಿರಲಿಲ್ಲ ವಾರ ರಜೆ ತಗೋ, ಮೈಂಡ್ ಫ್ರೀ ಮಾಡ್ಕೊಂಡ್ ಕೆಲಸಕ್ಕೆ ಹೋಗು ಯಾರು ಏನೇ ಹೇಳಿದ್ರೂ ನಕಲಿ ಕೆಲಸ ಮಾಡಬೇಡ. ತಹಶೀಲ್ದಾರ್ ಜೊತೆ ನಾನು ಮಾತಾಡ್ತೀನಿ, ಡೋಂಟ್ ವರಿ ನಾಳೆಯಿಂದ ಕೆಲಸಕ್ಕೆ ಹೋಗು ಎಂ ಅಭಯ ನೀಡಿದರು. ಕಾಲಿಗೆ ಬೀಳಲು ಹೋದ ಇಕ್ಬಾಲ್‌ರಿಗೆ ಬುದ್ದಿ ಹೇಳಿ ಕಳುಹಿಸಿದರು.
Government employee who went missing after writing a death note found
Leave a comment