Home namma chikmagalur ತರೀಕೆರೆ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಪತ್ತೆ…?
namma chikmagalurHomeLatest NewsTarikere

ತರೀಕೆರೆ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಪತ್ತೆ…?

Share
Share

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆಯ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶದ ಸುಮಾರು 10,100 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇರುವುದು ಪತ್ತೆಯಾಗಿದೆ. ಈ ಕುರಿತಂತೆ ಬೆಂಗಳೂರಿನ ಖಾಸಗಿ ಕಂಪನಿಯೊಂದು, ಕೇಂದ್ರ ಅರಣ್ಯ ಇಲಾಖೆಗೆ ಪತ್ರ ಬರೆದಿದೆ.

ತಾನು ಗುರುತಿಸಿರುವ ಪ್ರದೇಶದಲ್ಲಿ ಚಿನ್ನವಿರುವುದು ದೃಢಪಟ್ಟಿದೆ. ಆದರೆ, ಆ ಪ್ರದೇಶದ ಒಂದು ಟನ್ ಮಣ್ಣಿನಲ್ಲಿ ಎಷ್ಟು ಗ್ರಾಂ ಚಿನ್ನ ಬರಬಹುದು ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಅಲ್ಲಿ ಕೆಲವು ಪರೀಕ್ಷೆಗಳನ್ನು ನಡೆಸುವ ಅವಶ್ಯಕತೆಯಿದೆ. ಅದಕ್ಕಾಗಿ, ಆ 10,100 ಎಕರೆಯಲ್ಲಿ ಕನಿಷ್ಟ 1,000 ಕಡೆಗಳಲ್ಲಿ ಡ್ರಿಲ್ಲಿಂಗ್ ಅಥವಾ ಬೋರ್ ವೆಲ್ ಕೊರೆಯಬೇಕಿದ್ದು ಅದಕ್ಕಾಗಿ ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದೆ.

ಇದಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿದರೆ, ಕೋಲಾರದ ಕೆಜಿಎಫ್, ರಾಯಚೂರಿನ ಹಟ್ಟಿ ಚಿನ್ನದ ಗಣಿಯ ನಂತರ ರಾಜ್ಯದಲ್ಲಿ ಮತ್ತೊಂದು ದೊಡ್ಡ ಚಿನ್ನದ ಗಣಿಗಾರಿಕೆ ಅರಂಭವಾದಂತಾಗುತ್ತದೆ. ತಾನು ಗುರುತಿಸಿರುವ 10,100 ಎಕರೆ ಜಾಗದಲ್ಲಿ 5,600 ಎಕರೆ ಜಾಗವು ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುತ್ತದೆ.

ಆ ಇಡೀ 10,100 ಎಕರೆಯಲ್ಲಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಮೇಲ್ನೋಟಕ್ಕೆ ಹಲವಾರು ಆಧಾರಗಳು ಸಿಕ್ಕಿದ್ದು, ಅದನ್ನು ನಿಖರವಾಗಿ ತಿಳಿಯಲು ತಮಗೆ ಡ್ರಿಲ್ಲಿಂಗ್ ಗೆ ಅವಕಾಶ ಕಲ್ಪಿಸಬೇಕು ಎಂದು ಕಂಪನಿ ಕೋರಿದೆ. ಬೆಂಗಳೂರು ಮೂಲದ ಔರಮ್ ಜಿಯೋ ಎಕ್ಸ್ ಪ್ಲೋರೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿ ಈ ಸಂಬಂಧ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ.

ಕೇಂದ್ರ ಖನಿಜ ಇಲಾಖೆ ನಿಕ್ಷೇಪಗಳಿಗಾಗಿ ಭೂಮಿಯ ಪರೀಕ್ಷೆ ನಡೆಸಲು ಹಾಗೂ ಅಗತ್ಯವಿದ್ದ ಕಡೆ ಸಣ್ಣ ಪ್ರಮಾಣದ ಉತ್ಖನನ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ತರೀಕೆರೆಯ ಸುಮಾರು 10,100 ಎಕರೆ ಭೂಭಾಗದಲ್ಲಿ ಚಿನ್ನದ ನಿಕ್ಷೇಪವಿದೆ. ಆ ಬಗ್ಗೆ ಮತ್ತಷ್ಟು ನಿಖರವಾಗಿ ಸಂಶೋಧನೆಯನ್ನು ನಡೆಸುವ ಅವಶ್ಯಕತೆಯಿದೆ.

ಆ 10,100 ಎಕರೆ ಭೂಭಾಗದಲ್ಲಿ 5,600 ಎಕರೆ ಭೂಮಿಯು ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಕ್ಕೆ ಸೇರುತ್ತದೆ. ಉಳಿದ ಭೂಮಿಯಲ್ಲಿ 3,600 ಎಕರೆ ಪಪ್ರದೇಶವು ಕೃಷಿ ಭೂಮಿ. ಈ ಭೂಮಿಯು ಕಲ್ಲು ಬಂಡೆಗಳನ್ನು ಹೊಂದಿರುವುದರಿಂದ ಇಲ್ಲಿ ಸರಿಯಾಗಿ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಈ ಪ್ರದೇಶಗಳಲ್ಲಿ ಡ್ರಿಲ್ಲಿಂಗ್ ನಡೆಸಬೇಕಿದೆ. ಆ ಹಿನ್ನೆಲೆಯಲ್ಲಿ ನಮಗೆ 10,000 ಎಕರೆ ಪ್ರದೇಶಗಳಲ್ಲಿ ಡ್ರಿಲ್ಲಿಂಗ್ ನಡೆಸಲು ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಕಂಪನಿಯು ವಿವರಿಸಿದೆ.

ಈ ಹಿಂದೆ ಇದೇ ಕಂಪನಿ ಕರ್ನಾಟಕದ ಸಿಂಗನಮನೆ, ತಂಬಡಿಹಳ್ಳಿ, ಗೋಣಿಬಿಡ್ಡು ಹಾಗೂ ಹೊನ್ನುಹಟ್ಟಿಗಳಲ್ಲಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಗುರುತು ಮಾಡಿತ್ತು. ಅಲ್ಲಿನ ಪ್ರತಿ ಟನ್ ಮಣ್ಣಿನಲ್ಲಿ 19ರಿಂದ 80 ಗ್ರಾಂ. ಚಿನ್ನ ಸಿಗುತ್ತದೆ ಎಂದು ಹೇಳಿತ್ತು. ಅವೆಲ್ಲವೂ ದೃಢಪಟ್ಟಿವೆ ಎಂದು ಈಗ ಸರ್ಕಾರಕ್ಕೆ ಬರೆದಿರುವ ಪತ್ರದ ಜತೆಗೆ ಕಂಪನಿಯು ಸಲ್ಲಿಸಿರುವ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ, ಈಗ ತರೀಕೆರೆಯಲ್ಲಿ ತನಗೆ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಟ್ಟರೆ 10,100 ಎಕರೆ ಭೂಭಾಗದಲ್ಲಿ 1,000 ಕಡೆ ಬೋರ್ ವೆಲ್‌ಗಳನ್ನು ಹಾಕಬೇಕಾಗುತ್ತದೆ ಎಂದು ಸರ್ಕಾರಕ್ಕೆ ಪತ್ರದ ಮುಖೇನ ಔರಮ್ ಕಂಪನಿ ತಿಳಿಸಿದೆ.

ತರೀಕೆರೆ ಪ್ರಾಂತ್ಯದ ಅರಣ್ಯ ಭಾಗವು, ಪಶ್ಚಿಮ ಘಟ್ಟಗಳಿಗೆ ಸೇರಿದ್ದಾಗಿದ್ದು ಅಲ್ಲಿ ಚಿರತೆಗಳು, ಕರಡಿಗಳು ಹಾಗೂ ಹಲವು ಅಪರೂಪದ ಜೀವಿಗಳ ಆಶ್ರಯ ತಾಣವಾಗಿದೆ. ಹೀಗಾಗಿ, ಕಂಪನಿ ಸಲ್ಲಿಸಿರುವ ಮನವಿಗೆ ಕೇಂದ್ರ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಅಜ್ಜಂಪುರ ತಾಲ್ಲೂಕಿನ ಹಣ್ಣೆ ಗುಡ್ಡದಲ್ಲಿ ಇಪ್ಪತ್ತು ವರ್ಷಗಳ ಹಿಂದೆಯೇ ಚಿನ್ನದ ನಿಕ್ಷೇಪ ಇದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಶೋಧನೆ ಮಾಡಿದ್ದವು .ಈ ಬಗ್ಗೆ ಅಜ್ಜಂಪುರದ ಜನತಾದಳದ ಮುಖಂಡ ಎಸ್.ಶಿವಾನಂದ್ ಬಹಳಷ್ಟು ಪತ್ರ ವ್ಯವಹಾರ ನಡೆಸಿದ್ದರು.ಆದರೆ ಚಿನ್ನ ಇರುವ ಬಗ್ಗೆ ಮಾಹಿತಿ ದೊರೆತರೂ ಇನ್ನಷ್ಟು ಕಾಲಾವಧಿ ಬೇಕು ಎಂದು ತಿಳಿದಿದ್ದರಿಂದ ಸಂಶೋಧನೆಯ ಪ್ರಯತ್ನ ಕೈ ಬಿಡಲಾಗಿತ್ತು ಈಗಾ ಹಣ್ಣೆಗುಡ್ಡದಲ್ಲೂ ಪ್ರಯತ್ನ ನಡೆಸಬಹುದು ಎನ್ನಲಾಗಿದೆ.

Gold deposits discovered in Tarikere forest area…?

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...