ಚಿಕ್ಕಮಗಳೂರು : ಮುಂದಿನ ದತ್ತ ಜಯಂತಿ ವೇಳೆಗೆ ಹಿಂದುಪರ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ರೂಪಿಸುವ ಸಂಕಲ್ಪ ದೊಂದಿಗೆ ಈ ಬಾರಿಯ ದತ್ತ ಜಯಂತಿ ಬೆಳ್ಳಿ ಮಹೋತ್ಸವ ಅದ್ದೂರಿ ಕಂಡಿದೆ. ವಿಘಟನೆಗೊಂಡಿದ್ದ ಹಿಂದೂಪರ ಸಂಘಟನೆಗಳು ಏಕ್ ಐ ತೋ ಸೇ ಐ ಎಂಬ ಘೋಷವಾಕ್ಯದೊಂದಿಗೆ ಒಗ್ಗೂಡಿ ಸಂಘಟನಾತ್ಮನಾಗಿ ಹೋರಾಟಕ್ಕೆ ಸಜ್ಜು ಗೊಳ್ಳುವ ಸೂಚನೆ ಸ್ಪಷ್ಟವಾಗಿ ಗೋಚರಿಸಿದೆ..
ಮುಂದಿನ ದಿನಗಳಲ್ಲಿ ಹಿಂದು ಸಂಘಟನೆಗಳು ಒಗ್ಗಟ್ಟನ್ನು ಪ್ರದರ್ಶಿಸುವ ಸುಳಿವಿನ ಸಂಕೇತವನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೀಡಿದ್ದಾರೆ. ಈ ಮೂಲಕ ಹಿಂದೂ ಸಂಘಟನೆಗಳು ವಿಭಜನೆಯಾಗಿ ಹೋರಾಟ ಮಾಡುವ ಬದಲು ನಾವೆಲ್ಲರೂ ಒಂದೇ… ಉದ್ದೇಶವು ಒಂದೇ ಎನ್ನುವ ಸಂದೇಶವನ್ನು ಮೂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಿಂದೂ-ಹಿಂದುತ್ವ ಎರಡೂ ಅಪಾಯದಲ್ಲಿದೆ ಹಿಂದು ಸಮಾಜದ ಸಂಘಟನೆಗಳು ಒಂದಾಗಬೇಕೆಂದು ಕರೆ ನೀಡಿದ್ದಾರೆ. ತಾಲೂಕಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷದ್ ನೇತೃತ್ವದಲ್ಲಿ ನಡೆದ ದತ್ತ ಜಯಂತಿಯ ಕೊನೆಯ ದಿನವಾದ ಇಂದು ದತ್ತಪೀಠದಲ್ಲಿನ ಹೋಮದಲ್ಲಿ ಭಾಗಿಯಾಗಿ ಮಾತನಾಡಿದರು. ಮುಂದಿನ ವರ್ಷದಿಂದ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷದ್ ದತ್ತ ಜಯಂತಿಗೆ ಶ್ರೀರಾಮಸೇನೆ ಕೈಜೋಡಿಸಲಿದೆ ಎಂದರು. ಹೋರಾಟದ ಹಾದಿ ಬೇರೆಯಾದರೂ ಉದ್ದೇಶ ಒಂದೇ ಆಗಿತ್ತು. ಇಡೀ ದೇಶದಲ್ಲಿ ಹಿಂದೂ ಹಾಗೂ ಹಿಂದುತ್ವ ಅಪಾಯದಲ್ಲಿದೆ. ಕರ್ನಾಟಕದಲ್ಲಿ ಹಿಂದುಗಳ ಮೇಲೆ ದಾಳಿ ಹಾಗೂ ದೊಡ್ಡ ಪ್ರಮಾಣದ ಆಕ್ರಮಣ ನಡೆಯುತ್ತಿದೆ. ಇಂದು ಹಾಗೂ ಹಿಂದೂ ಸಂಘಟನೆಗಳು ಒಂದಾಗಬೇಕಾದ ಅಗತ್ಯ ಹಾಗೂ ಅನಿವಾರ್ಯತೆ ಬಂದಿದೆ. ಹಾಗಾಗಿ, ಎಲ್ಲಾ ಹಿಂದೂಗಳು ಹಾಗೂ ಹಿಂದೂ ಸಂಘಟನೆಗಳು ಒಂದಾಗಬೇಕೆಂದು ಕರೆ ನೀಡಿದ್ದಾರೆ. ಸದ್ಯದ ವಾತಾವರಣದಲ್ಲಿ ಸೌಹಾರ್ಧ ಅನ್ನೋ ಶಬ್ಧಕ್ಕೆ ಅರ್ಥ ಇಲ್ಲ.ಮಸೀದಿ ಒಳಗೆ ಪೂಜೆಗೆ ಅವಕಾಶ ಮಾಡಿಕೊಟ್ಟರೆ ಅದು ಸೌಹಾರ್ದ, ದತ್ತಪೀಠದಲ್ಲಿ ಮಾತ್ರ ಮುಸ್ಲಿಮರಿಗೆ ಉರುಸ್, ನಮಾಜ್ ಮಾಡೋಕೆ ಅವಕಾಶ ಕೊಟ್ಟರೆ ಅದು ಸೌಹಾರ್ದ ಅಲ್ಲ, ಸಂಘರ್ಷ ಎಂದರು. ಮುಸ್ಲಿಮರ ಮಸೀದಿ, ಕ್ರಿಶ್ಚಿಯನ್ನರ ಚರ್ಚಿನಲ್ಲಿ ಪೂಜೆ, ಹೋಮ-ಹವನ, ಆರತಿಗೆ ಅವಕಾಶ ಕೊಟ್ಟರೆ ಆಗ ಸೌಹಾರ್ದ ಮನೆಮಾಡಲಿದೆ. ಕೇವಲ ಹಿಂದೂಗಳ ಮೇಲೆ ನಿಮ್ಮ ಸೌಹಾರ್ದದ ಕೈ ಇಡೋದು ಇನ್ಮುಂದೆ ನಡೆಯಲ್ಲ. ಮುಂದಿನ ವರ್ಷದಿಂದ ದತ್ತಪೀಠದಲ್ಲಿ ಮುಸ್ಲಿಮರು ಮಾಡುವ ಉರುಸ್, ನಮಾಜ್ ನಾಗೇನಹಳ್ಳಿಗೆ ಸ್ಥಳಾಂತರವಾದರೆ ಮಾತ್ರ ಸೌಹಾರ್ದ ನೆಲೆಸಲಿದೆ. ಪಟೇತೋ ಕಾಟೇಂಗೆ, ಏಕ್ ಹೈ ತೋ ಸೇಫ್ ಹೈ ಎಂಬಂತೆ ಎಲ್ಲಾ ಹಿಂದೂ ಸಂಘಟನೆಗಳು ಒಂದಾಗಬೇಕು.ಒಗ್ಗಟ್ಟಿನ ಶಕ್ತಿಯಿಂದ ಹಿಂದೂ ವಿರೋಧಿಗಳ ವಿರುದ್ಧ ಹೋರಾಟ, ಅಗತ್ಯ-ಅನಿವಾರ್ಯವಾಗಿದೆ.ದೇಶದಲ್ಲೇ ಕರ್ನಾಟಕದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಹಿಂದೂ-ಹಿಂದುತ್ವ ಅಪಾಯದಲ್ಲಿ ಇದ್ದಾನೆ. ಹಿಂದೂ ಮೇಲೆ ದೊಡ್ಡ ಪ್ರಮಾಣದಲ್ಲಿ ಆಕ್ರಮಣ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಪ್ರಮೋದ್ ಮುತಾಲಿಕ್, ಹಿಂದೂ ಸಮಾಜದ ಜೊತೆ ಹಿಂದೂ ಸಂಘಟನೆಗಳು ಒಟ್ಟಾಗಬೇಕು. ಮೋಹನ್ ಭಾಗವತ್, ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿ ಕರೆ ಕೊಟ್ಟಿದ್ದಕ್ಕೆ ನಾವೆಲ್ಲಾ ಒಂದಾಗಿದ್ದೇವೆ. ದತ್ತಪೀಠ ಸಂಪೂರ್ಣ ಹಿಂದುಗಳ ಪೀಠ ಆಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಮುಂದಿನ ವರ್ಷದಿಂದ ದತ್ತಪೀಠ ಮುಖ್ಯ ಹೋರಾಟದ ರೂಪುರೇಷೆಯ ಹಾದಿ ಕೂಡ ಬದಲಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
Leave a comment