ಚಿಕ್ಕಮಗಳೂರು: : ಕಾಫಿನಾಡಿನಲ್ಲಿ ಮುಸುಕುಧಾರಿ ಕಳ್ಳರ ಗ್ಯಾಂಗ್ವೊಂದು ಭೀತಿ ಹುಟ್ಟಿಸಿದ್ದು, ನಗರದಲ್ಲಿ ಆಯುಧಗಳ ಸಮೇತ ೬ ಮಂದಿ ಕಳ್ಳರ ತಂಡ ಓಡಾಟ ನಡೆಸಿರುವುದು ಬೆಳಕಿಗೆ ಬಂದಿದೆ.
ಮಧ್ಯರಾತ್ರಿ ೨ ಗಂಟೆಯಿಂದ ೩.೩೦ರ ನಡುವೆ ಬೈಪಾಸ್ ರಸ್ತೆ ದಂಟರಮಕ್ಕಿ ಹಾಗೂ ಸುತ್ತಮುತ್ತಲಿನ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದ ಕಳ್ಳರ ಗ್ಯಾಂಗ್ ರಾಮಕೃಷ್ಣ ಕಾಲೇಜು ಸಮೀಪದ ಮನೆಯೊಂದರಲ್ಲಿ ದರೋಡೆಗೆ ಯತ್ನಿಸಿದೆ.
ಕಳ್ಳರು ಮನೆಗಳಿಗೆ ಟಾರ್ಚ್ ಹಾಕಿ ನೋಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮುಸುಕುಧಾರಿ ಕಳ್ಳರ ಓಡಾಟದ ದೃಶ್ಯಗಳು ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದ್ದು, ನಗರ ನಿವಾಸಿಗಳು ಆತಂಕದಲ್ಲಿದ್ದಾರೆ.
ಸದ್ಯ ಜನರಲ್ಲಿ ಆತಂಕ ಸೃಷ್ಟಿಸಿರುವ ಮುಸುಕುಧಾರಿ ಕಳ್ಳರ ಗ್ಯಾಂಗ್ನ್ನು ಹೆಡೆಮುರಿ ಕಟ್ಟುವಂತೆ ಜನರು ಒತ್ತಾಯಿಸುತ್ತಿದ್ದಾರೆ.
Gang of masked thieves roams the city
Leave a comment