ಚಿಕ್ಕಮಗಳೂರು: ನಗರದ ಬಾಲಮಂದಿರದಲ್ಲಿ ವಾಸವಿದ್ದ ಈರ್ವರು ಅಪ್ರಾಪ್ತ ಬಾಲಕಿಯರನ್ನು ಪುಸಲಾಯಿಸಿ ಹಾಸನಕ್ಕೆ ಕರೆದೊಯ್ದು ಬಾಡಿಗೆ ಮನೆಯೊಂದ ರಲ್ಲಿ ಇರಿಸಿ ಹದಿನೈದು ಮಂದಿಯನ್ನು ಲೈಂಗಿಕ ದೌರ್ಜನ್ಯ ಎಸಗಲು ಅನುವು ಮಾಡಿಕೊಟ್ಟಿದ್ದ ನಾಲ್ವರಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ಪೋಕ್ಸೋ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಕಳೆದ 2023ರ ಸೆಪ್ಟೆಂಬರ್ ಹದಿನೇಳರಂದು ನಗರದ ಸರ್ಕಾರಿ ಬಾಲ ಕಿಯರ ಬಾಲಮಂದಿರದಿಂದ ಈರ್ವರು ಬಾಲಕಿಯರು ಕಾಣೆಯಾ ಗಿದ್ದಾರೆ ಎಂಬ ದೂರಿನ ಹಿನ್ನೆಲೆ ಯಲ್ಲಿ ತನಿಖೆ ಆರಂಭಿಸಿದ ಡಿವೈ ಎಸ್‌ಪಿ ಶೈಲೇಂದ್ರ ಅವರು ಮಹಿಳಾ ಠಾಣೆಯಎಎಸ್‌ಐ ಸೋಮಶೇಖರ್ ಮತ್ತಿತರೆ ತಂಡದ ಮೂಲಕ ಕಾಣೆ ಯಾದ ಬಾಲಕಿಯರನ್ನು ಹಾಸನದ ಮನೆಯೊಂದರಲ್ಲಿ ಪತ್ತೆಹಚ್ಚಿದ್ದರು.
ಬಾಲಕಿಯರ ವಿಚಾರಣೆಯ ವೇಳೆ ನಗರದ ಫರ್ಜಾನ, ಪ್ರಶಾಂತ್, ಲಕ್ಷ್ಮೀ ಮತ್ತು ದಿನೇಶ್ ಎಂಬುವವರುಗಳು ತಮ್ಮನ್ನು ಪುಸಲಾಯಿಸಿ ಹಾಸನಕ್ಕೆ ಕರೆದೊಯ್ದು ಬಾಡಿಗೆ ಮನೆಯಲ್ಲಿರಿಸಿ ಹದಿನೈದು ಮಂದಿಯಿಂದ ಲೈಂಗಿಕ ದೌರ್ಜನ್ಯ ನಡೆಸಿದರೆಂಬುದನ್ನು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರಲ್ಲದೆ.
ದೌರ್ಜನ್ಯ ನಡೆಸಿದ ಹದಿನೈದು ಮಂದಿಯನ್ನು ಕೂಡ ವಶಕ್ಕೆ ಪಡೆ ದಿದ್ದು, ನಂತರ ಮಹಿಳಾ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನಗರದ ಪೋಕೋ ನ್ಯಾಯಾಲಯದ ನ್ಯಾಯಾಧೀಶ ರಾಘವೇಂದ್ರ ಗುರು ಪ್ರಸಾದ್ ಕುಲಕರ್ಣಿ ಅವರು, ಫರ್ಜಾನ, ಪ್ರಶಾಂತ್, ಲಕ್ಷ್ಮೀ ಮತ್ತು ದಿನೇಶ್ ಎಂಬುವವರ ಮೇಲಿನ ಆರೋಪ ಸಾಬೀತಾಗಿದೆ ಎಂದು ಪರಿಗಣಿಸಿ ನಾಲ್ವರಿಗೂ ತಲಾ ಹತ್ತು ವರ್ಷಗಳ ಕಠಿಣಶಿಕ್ಷೆ ಹಾಗು ಮೊದಲ ಈರ್ವರಿಗೆ ತಲಾ ಮೂವತ್ತೆರಡು ಸಿದ್ದಾರೆ.
ಸಾವಿರ ರೂ.ದಂಡ ಉಳಿದ ಈರ್ವರಿಗೆ ತಲಾ ಮೂವತ್ತೈಯ್ದು ಸಾವಿರ. ದಂಡ ವಿಧಿಸಿ ನಿನ್ನೆ ತೀರ್ಪು ಪ್ರಕಟಿ ಉಳಿದ ಹದಿನೈದು ಮಂದಿಯ ಮೇಲಿನ ಆರೋಪ ಸಾಬೀತಾಗಿಲ್ಲ ಎಂದು ಅವರುಗಳನ್ನು ಪ್ರಕರಣ ದಿಂದ ಖುಲಾಸೆ ಮಾಡಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕರಾದಲೋಹಿತಾಚಾರ್ ಮತ್ತು ಬಿ.ಭರತ್ ಕುಮಾರ್ ಅವರು ಗಳು ವಾದ ಮಂಡಿಸಿದ್ದರು.
Four sentenced to rigorous imprisonment by POCSO court
Leave a comment