ಚಿಕ್ಕಮಗಳೂರು: ಸಮಾಜ ವಿದ್ರೋಹಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಅಶಾಂತಿಗೆ ಕಾರಣವಾಗಿದ್ದ ಜಿಲ್ಲೆ ನಾಲ್ವರನ್ನು ಗಡಿಪಾರುಗೊಳಿಸಿ ಜಿಲ್ಲಾಧಿಕಾರಿಗಳು ಜಿಲ್ಲೆಯಿಂದ ಆದೇಶ ಹೊರಡಿಸಿದ್ದಾರೆ.
ಫೈಜುಲ್ಲಾ ಷರೀಫ್ ಚಾಲಕ ಕೆಲಸ, ಇಂದಿರಾನಗರ, ಹಿಳುವಳ್ಳಿ, ನರಸಿಂಹರಾಜಪುರ ತಾಲ್ಲೂಕ್.
ಕೆ.ವಿ. ಪ್ರದೀಪ್ ಕೃಷಿ ಕೆಲಸ, ವಾಸ ಮೇಗರ ಮಕ್ಕಿ, ನರಸಿಂಹರಾಜಪುರ ತಾಲ್ಲೂಕ್
ಮನೋರಂಜನ್ ಕೃಷಿ ಕೆಲಸ, ವಾಸ ನೇಮ ನಹಳ್ಳಿ, ನರಸಿಂಹರಾಜಪುರ ತಾಲ್ಲೂಕ್
ಮೌಂಟ್ ಬ್ಯಾಟನ್ ಆರೋಗ್ಯ ಸ್ವಾಮಿ ಎಂ.ಸಿ. ಹಳ್ಳಿ, ತರೀಕೆರೆ ತಾಲ್ಲೂಕ್ ಈ ನಾಲ್ವರನ್ನು ಗಡಿಪಾರುಗೊಳಿಸಲಾಗಿದೆ.
ಇನ್ನು ಮುಂದೆಯೂ ಸಹ ಸಮಾಜದಲ್ಲಿ ಕಾನೂನು ಬಾಹಿರ ಕೃತ್ಯಗಳನ್ನೆಸಗುವುದು, ನೈತಿಕ ಪೊಲೀಸ್ ಗಿರಿ, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ವದಂತಿಗಳನ್ನು ಸೃಷ್ಟಿಸಿ ಹರಡುವುದು ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡಿ, ಸಾರ್ವಜನಿಕ ಶಾಂತಿಗೆ ಭಂಗ ತರುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ಮೇಲೆ ಜಿಲ್ಲೆಯಿಂದ ಗಡಿಪಾರು ಮಾಡಲು ಸೂಕ್ತ ಕಾನೂನುಕ್ರಮ ವಹಿಸಲಾಗುವುದುಎಂದು ಪೋಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
Four deported from Chikkamagaluru district
Leave a comment