ಚಿಕ್ಕಮಗಳೂರು: ಕುದುರೆಮುಖ ವನ್ಯಜೀವಿ ವಲಯದ ಸಂಸೆ ಶಾಖೆಯ ಕಳಕೊಡು ಗಸ್ತಿನ ತುಂಗಭದ್ರಾ ಮೀಸಲು ಅರಣ್ಯ ವ್ಯಾಪ್ತಿಯಲ್ಲಿನ ಭತ್ತದರಾಶಿ ಗುಡ್ಡದಲ್ಲಿ ಬೆಂಕಿ ಹಚ್ಚುತ್ತಿದ್ದ ನಾಲ್ವರನ್ನು ಕುದುರೆಮುಖ ಅರಣಾ ಇಲಾಖಾ ಸಿಬ್ಬಂದಿಗಳು ಬಂದಿಸಿದ್ದಾರೆ.
ಬಂದಿತರಾದ ಆರೋಪಿಗಳು ದೇವರಾಜ, ಗಗನ್, ರಕ್ಷಣ್, ಉಮೇಶ ಎಂದು ಗುರುತಿಸಲಾಗಿದೆ. ಆರೋಪಿಗಳು ಭತ್ತದರಾಶಿ ಗುಡ್ಡದಲ್ಲಿ ಗುಡ್ಡಕ್ಕೆ ಬೆಂಕಿ ಹಚ್ಚುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳು ಹಿಡಿದಿದ್ದಾರೆ. ಕಾರ್ಯಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ
ಶಿವರಾಮ್ ಬಾಬು ಎಂ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜೆ.ಡಿ ದಿನೇಶ್, ವಲಯ ಅರಣ್ಯಾಧಿಕಾರಿಗಳು ಚೇತನ್ ಹೆಚ್.ಪಿ ಇವರ ಮಾರ್ಗದರ್ಶನದಂತೆ ಉಪ ವಲಯ ಅರಣ್ಯಾಧಿಕಾರಿ ಹರೀಶ್ ವೀ ಸವಣೂರ, ಗಸ್ತು ವನಪಾಲಕ ಅಯ್ಯನಗೌಡ, ಶ್ರೀ ಪ್ರಸಾದ್‌ಕುಮಾರ್ ಪಿ, ಶ್ರೀ ಗೋಪಾಲ ಮಾಗುಂಡಪ್ಪ ಅಂಬಿಗೇರ, ಶ್ರೀ ನಿತೀಶ್ ಅರಣ್ಯ ವೀಕ್ಷಕರು ಹಾಗೂ ಶ್ರೀ ಗಣೇಶ್ ಕೆ.ಎಸ್, ಶ್ರೀ ಪ್ರದೀಪ, ಶ್ರೀ ಪ್ರಶಾಂತ, ಶ್ರೀ ವಿಜಯಕುಮಾರ್ ಕಳ್ಳ ಬೇಟೆ ನಿಯಂತ್ರಣ ಕಾವಲುಗಾರರು ಪಾಲ್ಗೊಂಡಿರುತ್ತಾರೆ. ಆರೋಪಿಗಳನ್ನು ವನ್ಯಜೀವಿ ಸಂಕರಣಾ ಕಾಯ್ದೆ 1972 ಕಾಯ್ದೆಯಡಿ ಬಂದಿಸಿ, ಮೂಡಿಗೆರೆ ಜೆ.ಎಮ್.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
Four arrested for setting fire to a hill in a reserved forest
Leave a comment