ಚಿಕ್ಕಮಗಳೂರು : ಕಾಡಾನೆ ಸಮಸ್ಯೆ ಸೇರಿದಂತೆ ಸಾರ್ವಜನಿಕರಿಗೆ ಸ್ಪಂದಿಸದ ಜಿಲ್ಲಾಡಳಿತ ಬದುಕಿದೆಯೇ ಉಸ್ತುವಾರಿ ಸಚಿವರು ಕಾಟಚಾರಕ್ಕೆ ಜಿಲ್ಲೆಗೆ ಬಂದು ಹೋಗುತ್ತಿದ್ದಾರೆ, ಜಿಲ್ಲಾಧಿಕಾರಿ ಟೈಮ್ ಪಾಸ್ಗಾಗಿ ಜಿಲ್ಲೆಯಲ್ಲಿ ಇದ್ದಾರೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ ಕಲ್ಮರುಡಪ್ಪ ವಾಗ್ದಾಳಿ ನಡೆಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಮೀನಾ ನಾಗರಾಜ್ ವಿರುದ್ಧ ಕೆಂಡಮಂಡಲರಾದರು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಂಬಂಧಿ ಎಂಬ ಅಹಂಕಾರದಿಂದ ಬೇಜವಾಬ್ದಾರಿ ರೀತಿಯಲ್ಲಿ ವರ್ತಿಸುತ್ತಿದ್ದು, 3500ಕ್ಕೂ ಹೆಚ್ಚು ಸಾರ್ವಜನಿಕರ ಕಡತಗಳನ್ನು ವಿಲೇವಾರಿ ಮಾಡದೆ, ಜನರಿಗೆ ಸ್ಪಂದಿಸದೆ ಸಮಸ್ಯೆಗಳನ್ನು ಇನ್ನೂ ಜಟಿಲಗೊಳಿಸುತ್ತಿದ್ದಾರೆ. ಜಿಲ್ಲೆಯ ಶಾಸಕರುಗಳು ನಮಗೂ ಸಮಸ್ಯೆಗಳಿಗೂ ಸಂಬಂಧವೇ ಇಲ್ಲ ಎಂಬಂತೆ, ವರ್ತಿಸುತ್ತಿದ್ದಾರೆ ಕಾಟಾಚಾರಕ್ಕೆ ಭೇಟಿ ಕೊಟ್ಟ ಶಾಸಕ ತಮ್ಮಯ್ಯ ಸ್ಥಳಕ್ಕೆ ಹೋಗಿ ಬಂದರು, ಕಾಡಾನೆಗಳು ಇರುವ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಉಡಾಫೆ ಉತ್ತರ ಕೊಡುತ್ತಿದ್ದು ಡಿಎಫ್ಓ ಆಗಲಿ, ಅರಣ್ಯ ಅಧಿಕಾರಿಗಳು ಸಮಸ್ಯೆ ಬಗೆಹರಿಸಿಲ್ಲ ಎಂದು ಅವರು ಆರೋಪಿಸಿದರು.
ಆನೆಗಳು ಬೀಡು ಬಿಟ್ಟಿರುವ ಗ್ರಾಮಗಳಲ್ಲಿ ನೂರಾರು ಎಕರೆ ಅಡಿಕೆ, ಬಾಳೆ, ಭತ್ತ, ಶುಂಠಿ ಫಸಲು ಸಂಪೂರ್ಣ ನಾಶವಾಗಿದ್ದು, ಆನೆಗಳು ಬೆಳೆಗಳನ್ನು ತಿನ್ನುವುದೇ ಅಲ್ಲದೆ ತುಳಿದು ಕೂಡ ನಾಶಪಡಿಸಿವೆ. ಆದರೆ ಜಿಲ್ಲಾಡಳಿತ ರೈತರ ಜೊತೆ ಯಾವುದೇ ಸಭೆಯನ್ನು ನಡೆಸಿಲ್ಲ, ಅಹವಾಲು ಸ್ವೀಕರಿಸಿಲ್ಲ, ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಜಿಲ್ಲೆಗೆ ಮಂತ್ರಿಯೋ ಇಲ್ಲ ಅವರ ತೋಟಕ್ಕೆ ಮಂತ್ರಿಯೋ ಎಂದು ಜಿಲ್ಲೆಯ ಜನರು ಪ್ರಶ್ನಿಸುತ್ತಿದ್ದಾರೆ, ಇಂತಹ ಮಂತ್ರಿ ನಮಗೆ ಬೇಕಾ..?. ಎಂದು ಕಲ್ಮಡಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು “ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ವಿರುದ್ಧ ಗೋ ಬ್ಯಾಕ್ ಡಿಸಿ ಚಳುವಳಿ” ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಆನೆಯ ಹಾಗೂ ಇತರ ಸಮಸ್ಯೆಗಳ ಬಗ್ಗೆ ಬಿಜೆಪಿ ವಿಳಂಬವಾಗಿ ಪ್ರತಿಕ್ರಿಯಿಸುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಲ್ಮರಪ್ಪ, ನಾವು ಯಾವುದೇ ಹೋರಾಟದಲ್ಲಿ ಹಿಂದೆ ಬಿದ್ದಿಲ್ಲ ಆದರೆ ಜಿಲ್ಲಾಡಳಿತಕ್ಕೆ ಸಮಯಾವಕಾಶ ನೀಡಿದ್ದೆವು ಆದರೆ ಎಚ್ಚೆತ್ತುಕೊಳ್ಳದ ಆಡಳಿತಕ್ಕೆ ತುರುಕು ಮುಟ್ಟಿಸಲು ಮುಂದಿನ ದಿನಗಳು ಹೋರಾಟದ ದಿನಗಳಾಗಿರುತ್ತವೆ. ಅಲ್ಲದೆ ನಾವು ಯಾವುದೇ ಹೊಂದಾಣಿಕೆಯ ರಾಜಕೀಯ ಮಾಡುವುದಿಲ್ಲ, ಮಾಡಿಲ್ಲ ಅದರ ಅವಶ್ಯಕತೆಯೂ ನಮಗಿಲ್ಲ ಎಂದು ಕಲ್ಮರುಡಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Leave a comment