Home Latest News follow RBI directives on debt recovery: ಸಂಸ್ಥೆಗಳು ಸಾಲ ವಸೂಲಾತಿಗೆ ಆರ್‌ಬಿಐ ನಿರ್ದೇಶನ ಅನುಸರಿಸಿ
Latest NewsHome

follow RBI directives on debt recovery: ಸಂಸ್ಥೆಗಳು ಸಾಲ ವಸೂಲಾತಿಗೆ ಆರ್‌ಬಿಐ ನಿರ್ದೇಶನ ಅನುಸರಿಸಿ

Share
Share

ಚಿಕ್ಕಮಗಳೂರು: ಹಣಕಾಸು ಸಂಸ್ಥೆಗಳಲ್ಲಿ ಸಾಲದ ಕಂತು ಕಟ್ಟಲು ತಪ್ಪಿದ ಗ್ರಾಹಕರೊಂದಿಗೆ ವ್ಯವಹರಿಸಲು ಕಡ್ಡಾಯವಾಗಿ ಆರ್‌ಬಿಐ ನಿರ್ದೇಶನಗಳನ್ನು ಅನುಸರಿಸಬೇಕು ಹಾಗೂ ಹಣಕಾಸು ಸಂಸ್ಥೆಯಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿಯನ್ನು ಗೌರವಯುತವಾಗಿ ನೋಡಿಕೊಳ್ಳಬೇಕು ಎಂದು ಎಸ್‌ಪಿ ವಿಕ್ರಮ ಅಮಟೆ ಸೂಚನೆ ನೀಡಿದರು.

ನಗರದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿ ಮಾತನಾಡಿದ ಅವರು, ಸಂಸ್ಥೆಯ ವ್ಯವಹಾರದ ಪದ್ಧತಿಗಳು ಗ್ರಾಹಕ ಸ್ನೇಹಿ ಮತ್ತು ನ್ಯಾಯಸಮ್ಮತವಾಗಿರಬೇಕು. ಗ್ರಾಹಕರು ಮರುಪಾವತಿ ಮಾಡಲು ಕಷ್ಟದಲ್ಲಿದ್ದರೆ ಸಂಸ್ಥೆಯು ತಮ್ಮ ಆಡಳಿತ ಮಂಡಳಿಯಿAದ ಅನುಮೋದನೆ ಪಡೆದ ಸಾಲದ ಮರುಪಾವತಿಯನ್ನು ಪುನರ್‌ರಚಿಸುವ ವ್ಯವಸ್ಥೆ ಇರಬೇಕು ಎಂದು ತಿಳಿಸಿದರು.

ಯಾವುದೇ ಸಂಸ್ಥೆಯು ಹೊಸ ಸಿಬ್ಬಂದಿ ನೇಮಿಸಿಕೊಳ್ಳುವಾಗ ಅವರು ಹಿಂದೆ ಕೆಲಸ ಮಾಡಿರುವ ಸಂಸ್ಥೆಯೊAದಿಗೆ ಪರಿಶೀಲಿಸಿಕೊಳ್ಳಬೇಕು ಹಾಗೂ ಅವರ ಪೂರ್ವಚಾರಿತ್ರö್ಯವನ್ನು ಪರಿಶೀಲಿಸಬೇಕು. ಅವರು ಹಿಂದೆ ಕೆಲಸ ಮಾಡಿದ ಕಿರುಹಣಕಾಸು ಸಂಸ್ಥೆಯು ಕೊಟ್ಟ ಬಿಡುಗಡೆ ಪತ್ರವನ್ನು ಪಡೆಯಬೇಕು. ಒಂದು ಪಕ್ಷ ಅದನ್ನು ಹಿಂದಿನ ಸಂಸ್ಥೆಯು ಕೊಟ್ಟಿರದಿದ್ದರೆ ೨೦ ದಿನಗಳ ಅವಕಾಶ ಕೊಡಬೇಕು. ಬೇರೆ ಹಣಕಾಸು ಸಂಸ್ಥೆಯಿAದ ಬಂದವರನ್ನು ಶಾಖಾ ವ್ಯವಸ್ಥಾಪಕರು ಕನಿಷ್ಠ ಪಕ್ಷ ಒಂದು ವರ್ಷದವರೆಗೆ ಅವರು ಹಿಂದೆ ಕೆಲಸ ಮಾಡಿದ ಪ್ರದೇಶಕ್ಕೆ ನೇಮಿಸಬಾರದು ಎಂದು ಸೂಚಿಸಿದರು.

ಗ್ರಾಹಕರ ಬೇಡಿಕೆ, ಅಪೇಕ್ಷೆ, ಹಕ್ಕು ಹಾಗೂ ಜವಾಬ್ದಾರಿಗಳ ಬಗ್ಗೆ ಅವರಿಗಿರುವ ತಿಳಿವಳಿಕೆ ಮಟ್ಟವನ್ನು ತಿಳಿದುಕೊಳ್ಳುವ ಹಾಗೂ, ಅರಿವು ಮೂಡಿಸುವ ಸ್ವತಂತ್ರವಾದ ವ್ಯವಸ್ಥೆ ಇರಬೇಕು. ಈ ವ್ಯವಸ್ಥೆ ನಿರಂತರವಾಗಿ ನಡೆಯುತ್ತಿರಬೇಕು ಹಾಗೂ ಪರೀಕ್ಷಿಸುತ್ತಿರಬೇಕು. ಸಂಸ್ಥೆಯಲ್ಲಿ ಗ್ರಾಹಕರ ಕುಂದುಕೊರತೆಗಳನ್ನು ನೋಡಿಕೊಳ್ಳುವಂತೆ ಒಬ್ಬ ಅಧಿಕಾರಿಯನ್ನು ನೇಮಿಸಬೇಕು ಹಾಗೂ ಅವರ ವಿಳಾಸ ಮತ್ತು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಗ್ರಾಹಕರಿಗೆ ಸರಳವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಕಿರುಹಣಕಾಸಿನ ಸಂಸ್ಥೆಗಳು ಆರ್‌ಬಿಐ ಮಾರ್ಗದರ್ಶನದಂತೆ ಎಲ್ಲಾ ಅರ್ಹ ಗ್ರಾಹಕರಿಗೆ ತಮ್ಮ ಸೇವೆಗಳನ್ನು ಒದಗಿಸಲು ಶ್ರಮಿಸಬೇಕು. ಆರ್‌ಬಿಐ ನಿಯೋಜಿತ ನಡಾವಳಿಯಂತೆ ಗ್ರಾಹಕರಿಗೆ ನೀಡುವ ಎಲ್ಲ ಸಾಲಗಳ ಮತ್ತು ಸೇವೆಗಳ ಷರತ್ತುಗಳನ್ನು ಹಾಗೂ ನಿಬಂಧನೆಗಳನ್ನು ಸಾಲ ವಿತರಿಸುವ ಮೊದಲೇ ದಾಖಲೆಗಳ ಮೂಲಕ ವಿವರಿಸಬೇಕು ಎಂದು ಹೇಳಿದರು.

ಗ್ರಾಹಕರು ಭರಿಸಬೇಕಾದ ಬಡ್ಡಿ ಮತ್ತು ಇತರೆ ವೆಚ್ಚಗಳನ್ನು ಒಳಗೊಂಡ ಸಾಲಿಯಾನ ದರ ಮತ್ತು ಸಮಾನ ಮಾಸಿಕ ದರವನ್ನು ಶಾಖೆಯಲ್ಲಿ ಪ್ರದರ್ಶಿಸಬೇಕು. ಗ್ರಾಹಕರು ಭರಿಸಬೇಕಾದ ಬಡ್ಡಿಯ ದರ ಹಾಗೂ ಭದ್ರತಾ ಠೇವಣಿಯ ಬಗ್ಗೆ ಆರ್‌ಬಿಐ ಮಾರ್ಗಸೂಚಿಗಳನ್ನು ಅನುಸರಿಸಬೇಕು. ವ್ಯವಹಾರಕ್ಕೆ ಅಗತ್ಯವಿರುವ ಗ್ರಾಹಕರ ವೈಯಕ್ತಿಕ ದಾಖಲೆ ಪತ್ರಗಳನ್ನು (ಕೆವೈಸಿ) ಮಾತ್ರ ಪಡೆಯಬೇಕು. ಗ್ರಾಹಕರಿಗೆ ಸಾಲ ಮರುಪಾವತಿಯ ಶಕ್ತಿಯ ಅನುಗುಣವಾಗಿ ಕೂಲಂಕಶವಾಗಿ ಪರಿಶೀಲಿಸಿ, ಸರಿಯಾದ ಸಾಲದ ಮೊತ್ತವನ್ನು ಮಂಜೂರು ಮಾಡಬೇಕು ಎಂದು ತಿಳಿಸಿದರು.

ಗ್ರಾಹಕರು ಬೇರೆ ಯವುದಾದರೂ ಎರಡು ಸಂಸ್ಥೆಗಳಿAದ ಸಾಲ ಪಡೆದಿದ್ದರೆ ಮೂರನೆ ಸಂಸ್ಥೆ ಅಂಥವರಿಗೆ ಸಾಲ ನೀಡಬಾರದು. ಸಿಬ್ಬಂದಿ ಗ್ರಾಹಕರೊಂದಿಗೆ ವ್ಯವಹರಿಸುವಾಗ ಸಂಸ್ಥೆಯ ನಿಯಮಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸೌಜನ್ಯ ಹಾಗೂ ಗೌರವಪೂರ್ವಕವಾಗಿ ಗ್ರಾಹಕರೊಂದಿಗೆ ವರ್ತಿಸಬೇಕು. ಗ್ರಾಹಕರ ಸಂಸ್ಕೃತಿಯ ಸೂಕ್ಷö್ಮತೆಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.

ಯಾವುದೇ ಪರಿಸ್ಥಿತಿಯಲ್ಲಿಯೂ ಗ್ರಾಹಕರೊಂದಿಗೆ ಘರ್ಷಣೆಗೆ ಆಸ್ಪದ ಕೊಡುವ ಅಥವಾ ಬೆದರಿಕೆ ಒಡ್ಡುವ ಕೆಲಸ ಮಾಡಬಾರದು. ಆರ್‌ಬಿಐ ಮಾರ್ಗದರ್ಶನದನ್ವಯ ಸೂಕ್ತವಲ್ಲದ ಸಮಯದಲ್ಲಿ ಗ್ರಾಹಕರನ್ನು ಸಂಪರ್ಕ ಮಾಡುವುದಾಗಲಿ ಅಥವಾ ಸಾಲ ವಸೂಲಾತಿ ಮಾಡಬಾರದು. ಗ್ರಾಹಕರು ಪ್ರತಿಯೊಂದು ಕಂತು ಪಾವತಿ ಮಾಡಿದಾದ ಸಂಸ್ಥೆಯಿAದ ನಿರ್ಧರಿಸಿದ ಸೂಕ್ತ ರಿಶೀದಿ ಪತ್ರವನ್ನು ನೀಡಬೇಕು ಎಂದು ಸೂಚನೆ ನೀಡಿದರು.

ಗ್ರಾಹಕರು ತಮ್ಮ ಸಾಲವನ್ನು ಮರುಪಾವತಿ ಮಾಡದೇ ಇದ್ದಲ್ಲಿ ಸಂಸ್ಥೆಯು ಅನುಮೋದಿಸಿದ ನಿಯಮಾನುಸಾರ ಸೂಕ್ಷö್ಮತೆಯಿಂದ ಕಾರ್ಯನಿರ್ವಹಿಸಬೇಕು. ಗ್ರಾಹಕರು ಮರುಪಾವತಿಯ ತೊಂದರೆಯಲ್ಲಿದ್ದರೆ ಸಂಸ್ಥೆಯು ಅನುಮೋದಿಸಿದ ಸಾಲ ಮರುಪಾವತಿಯ ಪುನರಚನೆ ನಿಯಮಾವಳಿ ಅನುಸರಿಸಬೇಕು. ಜೊತೆಗೆ ಗ್ರಾಹಕರಿಂದ ಪಡೆದ ಮಾಹಿತಿಯನ್ನು ಗೌಪ್ಯವಾಗಿಡಬೇಕು ಎಂದರು.

Financial institutions to follow RBI directives on debt recovery

 

Share

Leave a comment

Leave a Reply

Your email address will not be published. Required fields are marked *

Don't Miss

ಸರ್ವಜ್ಞರ ತ್ರಿಪದಿಗಳು ಸಮಾಜದ ಅಂಕುಡೊಂಕು ತಿದ್ದುವ ಚಿಕಿತ್ಸಕ ಶಕ್ತಿಗಳು

ಚಿಕ್ಕಮಗಳೂರು: ಕನ್ನಡದ ಮಹಾನ್ ಸಂತ, ಕವಿ ಮತ್ತು ದಾರ್ಶನಿಕ ಸರ್ವಜ್ಞರ ತ್ರಿಪದಿಗಳು ಕೇವಲ ಸಾಹಿತ್ಯವಲ್ಲ, ಅವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಚಿಕಿತ್ಸಕ ಶಕ್ತಿಯಾಗಿವೆ ಎಂದು ಭಾರತ ಸರ್ಕಾರದ ರಾಜ್ಯ ಪರಿಸರ ಮೌಲ್ಯಮಾಪನ...

ರಸ್ತೆ ಅಪಘಾತದಲ್ಲಿ ಬೈಕ್ ಸಾವಾರನ ಸಾವು

ಎನ್. ಆರ್ ಪುರ: ಬಾಳೆಹೊನ್ನೂರು ಸಮೀಪದ ಮಸೀದಿಕೆರೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಮೃತರನ್ನು 21 ವರ್ಷದ ಗೋಕುಲ್ ಎಂದು...

Related Articles

ನಯನ ಔಟ್ -ಇಕ್ಕಟ್ಟಿನಲ್ಲಿ ತಮ್ಮಯ್ಯ ? ರಾಜೇಗೌಡ-ಆನಂದ್ ಸೇಫ್-ಶ್ರೀನಿವಾಸ್ ಗೆ ತ್ರೀ ಶಂಕು ಸ್ಥಿತಿ ?

ಚಿಕ್ಕಮಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಮೂರು ಬಣವಾಗಿರುವುದು ಸ್ಪಷ್ಟವಾಗಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಬಣ ,ಇನ್ನೊಂದು...

ಚಿಕ್ಕಮಗಳೂರು ನಗರ ಸಮೀಪಕ್ಕೆ ಬಂದ ಕಾಡಾನೆಗಳು

ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಾಡಾನೆಗಳು ಚಿಕ್ಕಮಗಳೂರು ನಗರದಿಂದ ಕೇವಲ 5 ಕಿಮೀ ದೂರದ...

ಹೆಗ್ಗುಡ್ಲು ಸರ್ಕಾರಿ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ

ಚಿಕ್ಕಮಗಳೂರು:  ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಸರ್ಕಾರಿ ಶಾಲೆಯಲ್ಲಿ  ಭೀಕರ ಅಗ್ನಿ ಅವಘಡ ಸಂಭವಿಸಿದೆ. ಶಾಲೆಯ ಬಿಸಿಯೂಟದ...

ಸಂಸ್ಕೃತಿ, ಸಾಹಿತ್ಯ, ಕಲೆಯಿಂದ ಸುಸಂಸ್ಕೃತ ಸಮುದಾಯ ಕಟ್ಟಲು ಸಾಧ್ಯ

ಚಿಕ್ಕಮಗಳೂರು: ಸಂಸ್ಕೃತಿ, ಸಾಹಿತ್ಯ, ಕಲೆಯ ಮೂಲಕ ಮಾತ್ರ ಸುಸಂಸ್ಕೃತ ಸಮುದಾಯವನ್ನು ಕಟ್ಟಬಹುದು ಎಂದು ಬಸವತತ್ವ ಪೀಠಾಧ್ಯಕ್ಷರಾದ...