ಚಿಕ್ಕಮಗಳೂರು :ಬಳ್ಳಾರಿ ಬಾಣಂತಿರ ಸಾವು ಮಾಸುವ ಮುನ್ನವೇ ಚಿಕ್ಕಮಗಳೂರಿನಲ್ಲೂ ಬಾಣಂತಿ ಒಬ್ಬರು ಮೃತಪಟ್ಟಿದ್ದಾರೆ. ಹೆರಿಗೆ ನಂತರ ಚಿಕಿತ್ಸೆ ಫಲಕಾರಿಯಾಗದೆ ಸವಿತ ಎಂಬ ಮಹಿಳೆ ನಗರದ ಕೆಆರ್ ಎಸ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ.
ಮೂರು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಸವಿತ ವಿಪರೀತ ನಿತ್ರಾಣಳಾಗಿದ್ದು ಆಕೆಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ನರ್ಸಿಂಗ್ ಹೋಮ್ ಗೆ ದಾಖಲು ಮಾಡಲಾಗಿತ್ತು. ಇಂದು ಆಕೆ ಮೃತಪಟ್ಟಿದ್ದಾಳೆ.
ಬಳ್ಳಾರಿ ಬಾಣಂತಿ ಸರಣಿ ಸಾವು ಮಾದರಿಯಲ್ಲೇ ಈಕೆಯೂ ಸಾವನ್ನಪ್ಪಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಹೆರಿಗೆ ನಂತರ ನೀಡಿರುವ ಡ್ರಿಪ್ ನ ದ್ರಾವಣ ಕಾರಣ ಎಂಬ ಗುಮಾನಿ ದಟ್ಟವಾಗಿದೆ.
ಬಳ್ಳಾರಿಯಲ್ಲಿ ಉಪಯೋಗಿಸಿರುವ ಕಂಪನಿಯ ಪಶ್ಚಿಮ ಭಂಗ ಫಾರ್ಮಾಸಿಟಿಕಲ್ ಡ್ರಿಪ್ ಉಪಯೋಗಿಸಿರುವುದು ಸತ್ಯ ವಾದರೆ ಮತ್ತಷ್ಟು ಬಾಣಂತಿರ ಜೀವಕ್ಕೆ ಅಪಾಯ ಒಡ್ಡುವ ಸಾಧ್ಯತೆ ಇರುವುದು ದಟ್ಟವಾಗಿದೆ. ಆದರೆ ಈ ಬಗ್ಗೆ ತನಿಖೆ ನಡೆದರೆ ಮಾತ್ರ ನಿಜಾಂಶ ಹೊರಬೀಳಲಿದೆ
Leave a comment