ತರೀಕೆರೆ: ಬ್ಯಾಂಕ್ ನಿಂದ ಭೂ ಅಭಿವೃದ್ಧಿ ಸಾಲ ಪಡೆದಿದ್ದ ತಾಲ್ಲೂಕಿನ ಹೊಸಹಳ್ಳಿ ತಾಂಡ್ಯದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂ ಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
‘ಹುಣಸಘಟ್ಟ ಯುನಿಯನ್ ಬ್ಯಾಂಕ್ ಶಾಖೆಯಿಂದ ಮೂರು ವರ್ಷಗಳ ಹಿಂದೆ ₹5 ಲಕ್ಷ ಸಾಲ ಪಡೆದಿದ್ದ ಹನುಮಂತ ನಾಯ್ಕ ಕೊಳವೆಬಾವಿ ಕೊರೆಸಿ ಹೊಸದಾಗಿ ಅಡಿಕೆ ತೋಟ ಮಾಡಿದ್ದರು.
ಈಗ ಬಡ್ಡಿ ಸೇರಿ ₹7 ಲಕ್ಷವಾಗಿದ್ದು, ಒಂದು ವರ್ಷದ ಹಿಂದೆ ಬ್ಯಾಂಕ್ ಅಧಿಕಾರಿಗಳು ನೋಟಿಸ್ ನೀಡಿದ್ದರು. ಇತ್ತೀಚೆಗೆ ಮನೆಗೆ ಬಂದು ಮರುಪಾವತಿ ಮಾಡುವಂತೆ ತಿಳಿಸಿದ್ದರು. ಇದರಿಂದ ನೊಂದಿದ್ದ ಹನಮಂತ ನಾಯ್ಕ ವಿಷ ಸೇವಿಸಿದ್ದಾರೆ’ ಎಂದು ಸಂಬಂಧಿಕರು ದೂರಿದ್ದಾರೆ.
ತರೀಕೆರೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಶಿವಮೊಗ್ಗ ಮತ್ತು ಮಂಗಳೂರಿನ ಆಸ್ಪತ್ರೆಗಳಿಗೂ ಕರೆದೊಯ್ಯಲಾಗಿತ್ತು. 10 ದಿನ ಆಸ್ಪತ್ರೆಯಲ್ಲಿದ್ದ ಹನುಮಂತ ನಾಯ್ಕ ಮೃತಪಟ್ಟಿದ್ದಾರೆ ಎಂದು ತಂದೆ ಪುಟ್ಟನಾಯ್ಕ ದೂರು ನೀಡಿದ್ದಾರೆ. ಅಜ್ಜಂಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Farmer from Hosahalli Tandya commits suicide by consuming poison
Leave a comment