ಚಿಕ್ಕಮಗಳೂರು : ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಕಥೆವ್ಯಥೆ ಎಲ್ಲರಿಗೂ ಗೊತ್ತು ಮನೆಯೊಂದು ಮೂರು ಬಾಗಿಲು ಆಗಿದೆ ಆದರೆ ಚಿಕ್ಕಮಗಳೂರು ಬಿಜೆಪಿಯಲ್ಲಿ ಅಂತಹ ಪರಿಸ್ಥಿತಿ ಇಲ್ಲ ಆದರೂ ವಿರೋಧ ಪಕ್ಷವಾಗಿ ಒಗ್ಗಟ್ಟಿನ ಪ್ರದರ್ಶನ ಕಾಣುತ್ತಿಲ್ಲ ಎಂದು ಕಾರ್ಯಕರ್ತರು ಗೊಣಗುತ್ತಾ ತಿರುಗುವುದು ಎಲ್ಲರಿಗೂ ಗೊತ್ತು.
ಚಿಕ್ಕಮಗಳೂರು ಜಿಲ್ಲಾ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ದೇವರಾಜ್ ಶೆಟ್ಟಿ ಅತ್ಯಂತ ಚುರುಕಾಗಿ ಓಡಾಟ ಮಾಡುತ್ತಿದ್ದಾರೆ ಪಕ್ಷ ಕಟ್ಟಬೇಕೆಂಬ ಹಂಬಲ ,ಆಸೆ ಇದೆ ಆದರೆ ಆಡಳಿತ ಪಕ್ಷದ ವಿರುದ್ಧ ಹೋರಾಟ ರೂಪಿಸುವಲ್ಲಿ ಎಡುವುತ್ತಿದ್ದಾರೆ ಎಂದು ಬಿಜೆಪಿಯ ಕಾರ್ಯಕರ್ತರು ಮುಖಂಡರು ಹೇಳಿಕೊಂಡು ಓಡಾಡುತ್ತಿರೋದು ಸುಳ್ಳೇನಲ್ಲಾ
ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಅವರಿಗೆ ಇತಿ ಮಿತಿ ಇದೆ ಆದರೆ ಬೆಂಕಿ ಚೆಂಡು ಸಿ,ಟಿ, ರವಿ ಜಿಲ್ಲೆಯಲ್ಲಿ ಸೈಲೆಂಟ್ ರಾಜ್ಯದಲ್ಲಿ ವೈಲೆಂಟ್ ಆಗಿದ್ದಾರೆ ಎಂದರೆ ರಾಜ್ಯ ನಾಯಕ ಎನ್ನಿಸಿಕೊಳ್ಳಬೇಕೆಂಬ ಆಸೆ ಇರಬಹುದು. ಖಾಸಗಿಯಾಗಿ ಸಿಕ್ಕಾಗ ಇನ್ನೂ ಎರಡು ವರ್ಷ ಜಿಲ್ಲೆಯಲ್ಲಿ ಮಾತನಾಡುವುದಿಲ್ಲ ಏಕೆಂದರೆ ಸೋತು ಹತಾಶರಾಗಿದ್ದಾರೆ ಎನ್ನುತ್ತಾರೆಂದೆ ಜಾರಿಕೊಳ್ಳುತ್ತಿದ್ದಾರೆ.
ವಿಧಾನ ಸಭಾ ಚುನಾವಣೆಯಲ್ಲಿ ಐದು ಕ್ಷೇತ್ರದಲ್ಲಿ ಪರಾಭವ ಗೊಂಡಿರುವ ಬಿಜೆಪಿ ಕಾದು ನೋಡುವಾ ತಂತ್ರದಲ್ಲಿ ಇರಬಹುದು. ವಿಧಾನ ಸಭಾ ಚುನಾವಣೆಯಲ್ಲಿ ಸೋತರು ಲೋಕಸಭಾ ಚುನಾವಣೆಯಲ್ಲಿ ಫೀನಿಕ್ಸ್ ನಂತೆ ಐದು ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿರುವ ಬಿಜೆಪಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿ ಹೋರಾಟ ರೂಪಿಸಿಲ್ಲ ಎಂಬ ದೂರಿದೆ.
ಬಿಜೆಪಿ ಜಿಲ್ಲಾ ಅಧ್ಯಕ್ಷರು ನೀಟಾಗಿ ಡ್ರೆಸ್ ಮಾಡಿಕೊಂಡು ನಗು,ನಗುತ್ತಾ ಎಲ್ಲರಿಗೂ ಮಾತನಾಡಿಸುವ ಕಲೆಗಾರಿಕೆ ಇದ್ದರು ಪಕ್ಷ ಸರಿಯಾದ ಹೋರಾಟ ಮಾಡುತ್ತಿಲ್ಲ ಎಂದು ಕಾರ್ಯಕರ್ತರು ಗೊಣಗುತ್ತಾ ಇರುವುದು ಗುಟ್ಟಾಗಿ ಉಳಿದಿಲ್ಲ, ಕಾಂಗ್ರೆಸ್ ನವರು ಅಭಿವೃದ್ಧಿ ಕೆಲಸವಿರಲಿ ಸಾಮಾನ್ಯ ಕೆಲಸವನ್ನು ಮಾಡದಿರುವ ಸಂದರ್ಭದಲ್ಲಿ ಬಿಜೆಪಿಯ ಮೌನ ರಹದಾರಿ ಮಾಡಿದಂತೆ ಆಗಿದೆ ಎಂದು ಅಸಮಾಧಾನ ಇರುವುದು ಮಾತ್ರ ನಿಜ.
Leave a comment