ಎನ್.ಅರ್.ಪುರ: ಹೆಚ್.ಟಿ.ರಾಜೇಂದ್ರ ನಮ್ಮನ್ನು ಅಗಲಿದ್ದಾರೆ ಕೆಲವು ವರ್ಷಗಳಿಂದ ಅನಾರೋಗ್ಯದ ಬಾಧೆ ಕಾಡುತಿತ್ತು.ಇದರ ಮಧ್ಯೆಯೂ ಸಕ್ರಿಯ ಸಾರ್ವಜನಿಕ ಬದುಕಲ್ಲಿ ತೊಡಗಿಸಿಕೊಂಡವರು.ಜಿಲ್ಲಾ ಪಂಚಾಯತಿ ಸದಸ್ಯರಾಗಿ ವಿಚಾರಗಳನ್ನು ಮಂಡಿಸಿ ಮಾತನಾಡುತ್ತಿದ್ದ ಇವರಿಗೆ ಉತ್ತಮ ಭವಿಷ್ಯ ಇದೆ ಎಂದು ತಿಳಿದವರಿಗೆ ನಿರಾಸೆ ಆಗಿದೆ.
ಸಾರ್ವಜನಿಕ ಜೀವನದಲ್ಲಿ ಎಲ್ಲೂ ರಾಜಿಯಾಗದೆ ಧ್ವನಿ ಇನ್ನಿಲ್ಲದಂತಾಗಿದೆ.ಸದಾಕಾಲವೂ ಕ್ರಿಯಾಶೀಲ ಚಟುವಟಿಕೆಯಲ್ಲಿದ್ದ ರಾಜೇಂದ್ರ ಕುವೆಂಪು, ಲಂಕೇಶ್ ತೇಜಸ್ವಿ ಇನ್ನಿತರರ ಸಾಹಿತ್ಯ ಓದಿಕೊಂಡಿದ್ದರು ಅದರಂತೆ ಬದುಕಿದ್ದರು.
ಒಳ್ಳೆಯವರಿಗೆ ಇದು ಕಾಲವಲ್ಲ ಶೃಂಗೇರಿ ಕ್ಷೇತ್ರದಿಂದ ಎರಡು ಸಾರಿ ವಿಧಾನಸಭೆಯ ಚುನಾವಣೆಗೆ ಸ್ಪರ್ಧಿಸಿದ್ದವರನ್ನು ಜನ ಕೈ ಹಿಡಿಯಲಿಲ್ಲ ಆದರೆ ರಾಜೇಂದ್ರ ವಿಮುಕರಾಗದೆ ಸಾರ್ವಜನಿಕ ಬದುಕಿನಲ್ಲಿ ಬೆಸೆದು ಹೋಗಿದ್ದರು.ಮಲೆನಾಡಿನ ಸಮಸ್ಯೆಗಳಷ್ಟೇ ಅಲ್ಲದೆ ಜಿಲ್ಲೆ, ರಾಜದ ಸಮಸ್ಯೆಗಳನ್ನು ಅರಿತುಕೊಂಡ ಧ್ವನಿ ಎತ್ತುತ್ತಿದ್ದ ಧ್ವನಿ ಇನ್ನಿಲ್ಲ ಎನ್ನುವುದೇ ಬೇಸರದ ಸಂಗತಿ.
ಪಕ್ಷಾಂತರಿಯಾಗದೆ,ಪಲಾಯನವಾದಿಯಾಗದೆ ಸಮಾಜವಾದಿಯಾಗಿ ಸರಳ ಬದುಕಿನಲ್ಲಿ ಪಯಣ ಮಾಡಿರುವ ರಾಜೇಂದ್ರರ ಬಗ್ಗೆ ಈಗ ಆಯ್ಯೋ ಎನ್ನುವುದಕ್ಕಿಂತ ಇದ್ದಾಗ ಬೆಂಬಲಿಸಿದ್ದರೆ ಗಟ್ಟಿ ಧ್ವನಿಗೆ ಬೆಂಬಲಿಸಿದ ಸಾರ್ಥಕತೆ ಉಳಿಯಿತಿತ್ತು.ಸಾವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ .ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಬಹುದಷ್ಟೆ.
Faded Thinkers H.T. Rajendra
Leave a comment