ಚಿಕ್ಕಮಗಳೂರು : ರಾಜ್ಯದಲ್ಲಿ ಅಬಕಾರಿಯ ಕರ್ಮ ಕಾಂಡ ಮತ್ತೆ, ಮತ್ತೆ ಅಪ್ಪಳಿಸುತ್ತಿದೆ.ಅಬಕಾರಿ ಮಂತ್ರಿ ತಿಮ್ಮಾಪುರ ಕೋಟಿ,ಕೋಟಿ ಲಂಚ ಪಡೆಯುತ್ತಿದ್ದಾರೆ ಎಂದು ಮಧ್ಯ ಮಾರಾಟ ಸಂಘದವರು ದೂರು ನೀಡಿದ್ದರು.ಅದಕ್ಕೆ ತೇಪೆ ಹಾಕಲಾಗಿದೆ. ನಿನ್ನೆ ಮಂಡ್ಯದಲ್ಲಿ ಸಿ,ಎಲ್7 ಪಡೆಯಲು ಅಧಿಕಾರಿಗಳು ನಲವತ್ತು ಲಕ್ಷ ಲಂಚ ಕೇಳಿದ್ದಾರೆ ಎಂದು ವಿಡಿಯೋ ವೈರಲ್ ಅದ ತಕ್ಷಣ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳು ಕೇಳುವವರೇ ಇಲ್ಲದಂತೆ ಆಗಿದೆ. ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಸಿ,ಎಲ್ 7ನೀಡಿರುವುದನ್ನು ನೋಡಿದರೆ ಇಲಾಖೆ ಹಣಕ್ಕಾಗಿ ಇದ್ದಂತೆ ಮತ್ತು ಕೆಲವು ಶಾಸಕರ ಒತ್ತಡದಲ್ಲಿ ಇರುವಂತೆ ಕಾಣುತ್ತದೆ.
ಸಿ,ಎಲ್ 7ನೀಡಲು ಬೇಕಾದ ನಿಯಮಗಳನ್ನು ಮೀರಿ ಅನುಮತಿ ನೀಡಿರುವುದು ಗುಟ್ಟಾಗಿ ಉಳಿದಿಲ್ಲ. ಆಸ್ಪತ್ರೆ ಪಕ್ಕ,ಪುರಸಭೆ ಲೈಸೆನ್ಸ್ ಇಲ್ಲದ ಕಟ್ಟಡಗಳು ,ರಸ್ತೆ ಬದಿಯಲ್ಲಿ ಲಾಡ್ಜಗಳಲ್ಲಿ ಶಾಪ್ ತೆರೆದಿರುವುದು ನೋಡಿದರೆ ಇಲಾಖೆ ಇದೆಯೋ ಇಲ್ಲವೋ ಎಂಬ ಅನುಮಾನ ಬರುತ್ತಿದೆ.
ಜಿಲ್ಲೆಯ ಇಬ್ಬರು ಶಾಸಕರು ಪೈಪೋಟಿಗೆ ಬಿದ್ದು ಸಿ,ಎಲ್,7 ಸಂಬಂಧಿಕರ ಪಾಲುದಾರಿಕೆ ಪಡೆದಿದ್ದಾರೆ. ಇವರುಗಳು ಬಾರ್ ಮಾಲೀಕರಿಂದ ತಿಂಗಳ ಮಾಮೂಲಿ ವಸೂಲಿ ಮಾಡುತ್ತಿದ್ದಾರೆ ಎಂದು ಮಧ್ಯ ಮಾರಾಟಗಾರರು ಶಾಪ ಹಾಕುತ್ತಿದ್ದಾರೆ.
ಗ್ರಾಹಕರಿಗೆ ಬೇಕಾ ಬಿಟ್ಟಿ ದರದಲ್ಲಿ ಮಾರಾಟ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಆದರೂ ಇಲಾಖೆ ಬದುಕಿ ಸತ್ತಂತೆ ಇದೇ ಎನ್ನುವುದಕ್ಕಿಂತ ಹಣ,ಹಣ,ಎಂದು ಕಣ್ಣ್,ಕಣ್ಣ್ ಬಿಟ್ಟುಕೊಂಡು ಹೆಚ್ಚು ಜೇಬಿಗಳಿರುವ ಪ್ಯಾಂಟ್, ಶರ್ಟ್ ಧರಿಸಿಕೊಂಡು ಇಲಾಖೆಯ ಬಾಗಿಲು ಬಂದ್ ಮಾಡಿಕೊಂಡು ವಸೂಲಿಗೆ ಇಳಿದಿದ್ದಾರೆ ಎಂಬ ವ್ಯಾಪಕ ದೂರುಗಳು ಇವೆ.
Leave a comment