ಚಿಕ್ಕಮಗಳೂರು: ಜಿಲ್ಲಾ ಕೃಷಿ ಪರಿಕರಗಳ ಮಾರಾಟ ಸಂಘದ ವತಿಯಿಂದ ಜಿಲ್ಲೆಯಲ್ಲಿ ಸೌಹಾಧ ಬ್ಯಾಂಕ್ ಸ್ಥಾಪನೆ ಮಾಡಲು ಅಗತ್ಯವಾಗಿ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಸಂಘದ ರಾಜ್ಯಾಧ್ಯಕ್ಷ ಬಸವನಗೌಡ ಮಾಲಿ ಪಾಟೀಲ್ ಭರವಸೆ ನೀಡಿದರು.
ಅವರು ಮಂಗಳವಾರ ಎಐಟಿ ಕಾಲೇಜು ವೃತ್ತದಲ್ಲಿ ಇರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘ ಏರ್ಪಡಿಸಿದ್ದ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ರೈತರಿಗೆ ಕೃಷಿ ಇಲಾಖೆ ಸಹಯೋಗದಲ್ಲಿದೊರೆಯುವ ಹಲವಾರು ಸಾಮಾಜಿಕ ಕಾರ್ಯಗಳ ಜೊತೆಗೆ ಲಭ್ಯವಿರುವ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿರುವುದಾಗಿಅವರು ಹೇಳಿ ವಿದ್ಯಾರ್ಥಿಯುವಜನರಿಗಾಗಿಟಾಟಾ, ಇನ್ಫೋಸಿಸ್, ಟೋಯಾಟಾ ಮುಂತಾದ ಪ್ರಸಿದ್ಧ ಕಂಪೆನಿಗಳಿಂದ ಉದ್ಯೋಗ ಮೇಳ ನೆಡೆಸುವಂತೆಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದಜಿಲ್ಲಾಧ್ಯಕ್ಷಕೆ.ಆರ್‌ಯೋಗೀಶ್ ಮಾತನಾಡಿರೈತರ ಒಳಿತಿಗಾಗಿ ಸಾಮಾಜಿಕ, ಸ್ವತಂತ್ರ ಹೋರಾಟಗಾರರಿಗೆ, ಯೋಧರಿಗೆ, ಸಮಾಜದಲ್ಲಿಆರ್ಥಿಕ ಸಂಕಷ್ಟದಲ್ಲಿರುವ ಬಡವರಿಗೆಜಿಲ್ಲಾ ಸಂಘದ ವತಿಯಿಂದಆರ್ಥಿಕ ನೆರವು ನೀಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಸಂಘದ ಸರ್ವ ಸದಸ್ಯರ ಸಭೆಕರೆದುಚರ್ಚಿಸಿ ವಿವಿದೋದ್ದೇಶಸೌಹಾರ್ಧ ಬ್ಯಾಂಕ್ ಸ್ಥಾಪಿಸಲು ನಿರ್ಧರಿಸುವುದಾಗಿ ಭರವಸೆ ನೀಡಿದರು.
ಕೃಷಿ ಇಲಾಖೆಯಜಂಟಿ ನಿರ್ದೇಶಕಡಾ. ತಿರುಮಲೇಶ್ ಮಾತನಾಡಿಹಾಲು ಉತ್ಪಾಧಕರ ಸಹಕಾರ ಸಂಘ, ಮಾವು ಬೆಳೆಗಾರರ ಸಂಘ, ಕಾಫೀ ಬೆಳೆಗಾರರ ಸಂಘ ಮುಂತಾದ ಸಂಘಗಳು ಶೂನ್ಯದಿಂದಆರಂಭವಾಗಿಕೋಟ್ಯಾಂತರರೂ ವಹಿವಾಟು ನೆಡೆಸುತ್ತಿರುವುದನ್ನುಕಾಣುತ್ತಿದ್ದು. ಇದೇ ಮಾದರಿಯಲ್ಲಿಕೃಷಿ ಪರಿಕರ ಮಾರಾಟಗಾರರ ಸಂಘ ಸೌಹಾರ್ಧ ಬ್ಯಾಂಕ್ ಸ್ಥಾಪಿಸುವ ಮೂಲಕ ಆರ್ಥಿಕ ಸದೃಢರಾಗಬೇಕೆಂದುಕರೆ ನೀಡಿದರು.
ಈ ಸಂದರ್ಭದಲ್ಲಿರಾಜ್ಯಉಪಾಧ್ಯಕ್ಷಡಾ. ಮಹಾಬಲ, ಮೈಸೂರು ಕಾರ್ಯದರ್ಶಿ ಮಾಲತೇಶ್, ಬಳ್ಳಾರಿ ತಿಮ್ಮೇಗೌಡ, ಜಿಲ್ಲಾ ಉಪಾಧ್ಯಕ್ಷರುಗಳಾದ ಉದಯ್ ಪೈ, ಟಿ.ಡಿತಿಮ್ಮಯ್ಯ, ಖಜಾಂಚಿ ಶ್ರೀಕಾಂತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಿ.ಮನೂಪ್‌ಉಪಸ್ಥಿತರಿದ್ದರು.
Establishment of Souhadha Bank in the district
Leave a comment