Home ದುರ್ಗಾಂಭ ದೇವಿ ಜಾತ್ರೆ ವಾರವೆಲ್ಲಾ ಘಮ,ಘಮ
HomeLatest Newsnamma chikmagalurTarikere

ದುರ್ಗಾಂಭ ದೇವಿ ಜಾತ್ರೆ ವಾರವೆಲ್ಲಾ ಘಮ,ಘಮ

Share
Share

ತರೀಕೆರೆ: ಜನವರಿ 25 ರಿಂದ ಫೆಬ್ರವರಿ 3 ರ ತನಕ ಅಂತರಘಟ್ಟೆ ದುರ್ಗಾಂಭ ದೇವಿಯ ಜಾತ್ರೆ ಪ್ರಯುಕ್ತ ತರೀಕೆರೆ, ಕಡೂರು, ಬೀರೂರು, ಅಜ್ಜಂಪುರ, ಶಿವನಿ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಘಮ,ಘಮ ಎನ್ನಿಸುವ ಭಾರೀ ಭೋಜನ .

ಹಬ್ಬದ ವಿಶೇಷ ಏನೆಂದರೆ ದೇವಿಗೆ ಹರಕೆ ಅರ್ಪಿಸುವ ಭಕ್ತರು ಕುರಿ,ಕೋಳಿ, ಭೋಜನ ಇರುತ್ತದೆ. ಬಂಧು,ಬಳಗ,ಅತಿಥಿಗಳು ಸ್ನೇಹಿತರನ್ನು ಕರೆದು ಊಟ ಬಡಿಸುವ ಪರಿ ವರ್ಣನೆ ಮಾಡಲು ಸಾಧ್ಯವಿಲ್ಲ.

ಪರಿಚಯ ಇರಲಿ ಬಿಡಲಿ ಪ್ರತಿಯೊಂದು ಮನೆಯವರು ಅತಿಥಿಗಳನ್ನು ಕರೆದು ಸತ್ಕರಿಸುವುದು ನೋಡಿದರೆ ಮನುಷ್ಯ ಸಂಬಂಧ ಎಂತಹ ಮಹತ್ವ ಎನ್ನಿಸುತ್ತದೆ. ಬಹುತೇಕ ಹಿಂದುಳಿದ ಮತ್ತು ದಲಿತರ ಹಬ್ಬ ಆದರೆ ಮೇಲ್ವರ್ಗದ ಜನರು ಕೂಡ ಇದರಲ್ಲಿ ಪಾಲ್ಗೊಳ್ಳುತ್ತಾರೆ.

ಯಾವುದೇ ಮನೆಗೆ ಹೋಗಲಿ ಮೊದಲು ಊಟ ಮಾಡಿ ಎಂದು ಕರೆಯುವುದು ವಾಡಿಕೆ.ಮಾಂಸ ಭೋಜನ ,ಸಿಹಿ ಊಟ ಕೂಡ ಇರುತ್ತದೆ.ಜಾತಿ,ಮತದ ಸೊಂಕು ಅಪ್ಪಿ ತಪ್ಪಿ ಇರುವುದಿಲ್ಲ ಪರಿಚಯ ಇರಲಿ,ಬಿಡಲಿ ಅಷ್ಟೊಂದು ಅಕ್ಕರೆ ಪ್ರೀತಿ ವಿಶ್ವಾಸ ಮತ್ತು ಆತ್ಮೀಯ ಸತ್ಕಾರಕ್ಕೆ ಆದ್ಯತೆ.

ಜನವರಿ ತಿಂಗಳ ಕೊನೆಯ ವಾರದಲ್ಲಿ ಕಡೂರು, ಬೀರೂರು, ತರೀಕೆರೆ ಮತ್ತು ಅಜ್ಜಂಪುರದ ಮೈದಾನದಲ್ಲಿ ಕುರಿಗಳ ಹಿಂಡು ಹಿಂಡಾಗಿ ಇರುತ್ತವೆ. ಅವುಗಳ ಖರೀದಿ ಭರಾಟೆ ಜೋರು ಇರುತ್ತದೆ. ಹತ್ತು ಸಾವಿರದಿಂದ ಐವತ್ತು ಸಾವಿರಗಳವರಗೆ ಬೆಲೆಯ ಕುರಿ ಟಗರುಗಳ ಖರೀದಿಸುವ ಜನ ಒಂದು ಕುಟುಂಬದವರು ಎರಡು,ಮೂರು, ಕುರಿ ಖರೀದಿ ಮಾಡಿದರೆ ಇನ್ನೂ ಕೆಲವರು ಮೂರು ನಾಲ್ಕು ಕುಟುಂಬದ ವರು ಸೇರಿ ಕುರಿ ಖರೀದಿ ಮಾಡಿ ಪಾಲು ಹಾಕಿ ಕೊಳ್ಳುತ್ತಾರೆ.

ಹದಿನೈದು ದಿನಗಳಲ್ಲಿ ನೂರಾರು ಕೋಟಿ ವೆಚ್ಚ ಮಾಡಿ ಸಂತೃಪ್ತಿಯಿಂದ ಘಮ,ಘಮ ಭೋಜನ ಸವಿಯುವುದು ಜಾತ್ರೆಯ ವಿಶೇಷ. ದೇವಿಯ ರಥೋತ್ಸವಕ್ಕೆ ಹೋರಿ( ಎತ್ತುಗಳು) ಹೊಸ ಗಾಡಿ ಖರೀದಿಸಿ ಶೃಂಗಾರ ಮಾಡಿ ಮನೆ ಮಂದಿಯೆಲ್ಲಾ ಹೋಗಿ ದರ್ಶನ ಪಡೆಯುವ ವಾಡಿಕೆ ಇದೆ.

ಮನೆಗಳಿಗೆ ಸುಣ್ಣ, ಬಣ್ಣ ಬಳಿದು ಕೇರಿಯ ತುಂಬಾ ವಿದ್ಯುತ್ ಅಲಂಕಾರ ಮಾಡುವುದು ಕೂಡ ವಿಶೇಷ. ದೇವಿಯ ಹಬ್ಬ ಅನಾದಿಕಾಲದಿಂದಲೂ ನಡೆದಿದೆ. ಇದನ್ನು ಉಳಿಸಿ ಬೆಳೆಸುತ್ತಿರುವುದು ಸಂಬಂಧ, ಸ್ನೇಹ ,ನೆಂಟರು,ಇಷ್ಟರನ್ನು ಒಂದಡೆ ಸೇರಿಸುವ ಬಾಂಧವ್ಯ ದ ಹಬ್ಬವನ್ನು ಇತ್ತೀಚಿನ ದಿನಗಳಲ್ಲಿ ವೈಭವದಿಂದ ಆಚರಣೆ ಮಾಡುತ್ತಿರುವುದು ವಿಶೇಷ ಎನ್ನಲಾಗುತ್ತದೆ.

ಬಡವ ಶ್ರೀಮಂತ ಎಂಬ ಭೇದ ಭಾವ ಇಲ್ಲದೆ ಇವ ನಮ್ಮವ,ಇವ ನಮ್ಮವ ಎನ್ನುವ ಸಂಸ್ಕೃತಿಗಳ ಸಡಗರ ತುಂಬಿದ ಹಬ್ಬಗಳನ್ನು ನೋಡಿಯಾದರು ದ್ವೇಷ, ಅಸೂಯೆ ಮರೆಯಾಗಲಿ.

Durgambha Devi Fair is a week of heat heat

Share

Leave a comment

Leave a Reply

Your email address will not be published. Required fields are marked *

Don't Miss

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ-ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ ೧೮ ರಿಂದ ಪ್ರಾರಂಭವಾಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು. ಜಿ.ಪಂ.ನ ಅಬ್ದುಲ್...

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗೆ ಕೊರತೆ ಇಲ್ಲ

ಚಿಕ್ಕಮಗಳೂರು, ಮಾ.೧೩: ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ ವಿತರಕರು ಗ್ರಾಹಕರ ಮನೆಬಾಗಿಲಿಗೆ ಸರಬರಾಜು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ...

Related Articles

ವಿದ್ಯುತ್ ಸ್ಪರ್ಶಕ್ಕೆ ಯುವಕನ ಧಾರುಣ ಸಾವು

ಅಜ್ಜಂಪುರ: ವಿದ್ಯುತ್ ಸ್ಪರ್ಶದಿಂದ ಪ್ರವೀಣ್ ಎಂಬ ಯುವಕ ಮೃತಪಟ್ಟಿದ್ದಾನೆ ಸೊಕ್ಕೆ ಪರಮೇಶಣ್ಣ ಅವರ ಮಗ. ಹೆಬ್ಬೂರು...

ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಮನಸೋಇಚ್ಛೆ ಹಲ್ಲೆ

ಮೂಡಿಗೆರೆ:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ...

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ 25ಕ್ಕೂ ಹೆಚ್ಚುಕಡೆ ಬೆಂಕಿ

ಚಿಕ್ಕಮಗಳೂರು: ಬಿಸಿಲ ಬೇಗೆಗೆ ಅಪರೂಪದ ಶೋಲಾ ಹುಲ್ಲುಗಾವಲು  ಹೊತ್ತಿ ಉರಿಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ...

3.50 ಕೋಟಿ ರೂ ವೆಚ್ಚದ ವಿವಿಧ ರಸ್ತೆಗಳ ಲೋಕಾರ್ಪಣೆ

ಚಿಕ್ಕಮಗಳೂರು:  ಬಡವರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ...