ಚಿಕ್ಕಮಗಳೂರು: ಮಾದಕ ವಸ್ತು, ನಶಾ ಪದಾರ್ಥಗಳು ಯುವಜನತೆಯ ಆರೋಗ್ಯದ ಬದುಕನ್ನು ಅನಾರೋಗ್ಯದತ್ತ ಕೊಂಡೊಯ್ಯುವ ದುಶ್ಚಟಗಳು. ಇದರಿಂದ ಹೊರಬರಲು ವ್ಯಸನಿಗಳು ಬಹ ಳಷ್ಟು ಕಠಿಣ ಪರಿಸ್ಥಿತಿ ಎದುರಿಸಬೇಕು ಎಂದು ಶ್ರೀ ಶಕ್ತಿ ಅಸೋಸಿಯೇಷನ್ ಯೋಜನಾ ನಿರ್ದೇಶಕ ಡಾ|| ಅನೀತ್‌ಕುಮಾರ್ ಹೇಳಿದರು.
ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಎಐಟಿ ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ಧ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವ ರು ಮಾತನಾಡಿ ಭಾರತದ ಯುವಸಮೂಹ ಸದೃಢ ಆರೋಗ್ಯ ಕಾಪಾಡಬೇಕೆಂಬ ದೃಷ್ಟಿಯಿಂದ ಕೇಂದ್ರ ಸರ್ಕಾರ ಕಳೆ ದ ೨೦೨೦ರಲ್ಲಿ ನಶಾಮುಕ್ತ ಅಭಿಯಾನ ಆರಂಭಿಸಿತು. ಇದು ಬಹುತೇಕ ದೇಶದ ಎಲ್ಲಾ ರಾಜ್ಯ, ಜಿಲ್ಲಾ ಕೇಂ ದ್ರದ ಅಭಿಯಾನ ನಡೆಸಿ, ಯುವಜನತೆ ವ್ಯಸನಿಗಳಾಗದಂತೆ ಸೂಕ್ತ ಕ್ರಮ ವಹಿಸುತ್ತಿದೆ ಎಂದು ತಿಳಿಸಿದರು.
ಇತ್ತೀಚಿನ ದಿನದಲ್ಲಿ ಶಾಲಾ-ಕಾಲೇಜುಗಳ ಯುವಕರು ಅಕ್ರಮವಾಗಿ ಗಾಂಜಾ, ಹಫೀಮು ಸೇವಿಸುತ್ತಿ ದ್ದಾರೆ. ಅಲ್ಲದೇ ಪೆಟ್ರೋಲ್-ಡೀಸೆಲ್ ವಾಸನೆಯಿಂದ ಯುವಕರ ಮೆದುಳು ದಿಕ್ಕುತಪ್ಪುತ್ತಿದೆ. ಇದರಿಂದ ಅರಿ ವಿಲ್ಲದೇ ಅತ್ಯಾಚಾರ, ಕೊಲೆ ಹಾಗೂ ಕಳ್ಳತನದಂಥ ಪ್ರಕರಣಕ್ಕೆ ಸಿಲುಕಿಕೊಂಡು ಜೀವನವನ್ನೇ ಹಾಳು ಮಾ ಡಿಕೊಂಡಿದ್ದಾರೆ ಎಂದು ಎಚ್ಚರಿಸಿದರು.
ಮಾದಕ ವ್ಯಸನದಿಂದ ಅಪರಾಧ ಪ್ರಕರಣದಲ್ಲಿ ಸಿಲುಕುವ ಜೊತೆಗೆ ಶರೀರದ ಅಂಗಾಂಗಗಳ ಮೇಲೆ ಸಮಸ್ಯೆಗಳು ಎದುರಾಗಲಿದೆ. ಸ್ಥಳೀಯವಾಗಿ ಲಭಿಸುವ ತಂಬಾಕು ಪದಾರ್ಥಗಳು ಮನುಷ್ಯ ನೆಮ್ಮದಿಗೆ ಕೊ ಡಲಿಪೆಟ್ಟು ಹಿಡುತ್ತಿದೆ. ಅಲ್ಲದೇ ಮದ್ಯ ಅಂಗಡಿಗಳನ್ನು ಶಾಲಾ-ಕಾಲೇಜು, ದೇವಾಲಯ ಸಮೀಪ ತೆರೆ ಯಲು ಸರ್ಕಾರ ಅನುಮತಿರುವುದು ಖಂಡನೀಯ ಎಂದರು.
ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್ ಮಾತನಾಡಿ ಸ್ವಾಸ್ಥ್ಯ ಸಮಾಜ ನಿರ್ಮಿಸಬೇ ಕಾದ ಯುವಪ್ರಜೆಗಳು ವ್ಯಸನಗಳ ಚಟದಿಂದ ಭವಿಷ್ಯ ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಮೊದಲು ಈ ವ್ಯಸನವು ಕೇವಲ ಕಾಲೇಜುಗಳ ಸಮೀಪದಲ್ಲಿತ್ತು. ಇದೀಗ ಪ್ರೌಢಶಾಲೆ ಸಮೀಪವು ಹೆಚ್ಚಾಗುತ್ತಿರುವುದು ಆತಂಕಕಾರಿ. ಹೀಗಾಗಿ ಯುವಸಮೂಹ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಕಲಿಕೆಯ ವಯಸ್ಸಿನಲ್ಲಿ ಸ್ನೇಹಿತರೊಟ್ಟಿಗೆ ಆಕರ್ಷಣೆಗಳು ಸಹಜ. ಒಳ್ಳೆಯದು, ಕೆಟ್ಟದು ಎಂಬ ಪರಿಜ್ಞಾ ನ ವಿದ್ಯಾರ್ಥಿಗಳಲ್ಲಿ ಇರಬೇಕು. ಶಾಲಾ-ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ತೆರಳುವ ಯುವಕರು ಓದಿಗಷ್ಟೇ ಸೀಮಿತ ವಾಗಿ ಪಾಲಕರ ಸಂತೋಷಕ್ಕೆ ಪಾತ್ರವಾಗಬೇಕು. ಈ ಹೊರತಾಗಿ ಕೆಟ್ಟವರ ಸಹವಾಸದೊಂದಿಗೆ ಭವಿಷ್ಯವ ನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಸಲಹೆ ಮಾಡಿದರು.
ಪರಿವರ್ತನ ಟ್ರಸ್ಟ್ ಸಂದೇಶ್ ಮಾತನಾಡಿ ದೇಶದ ಯುವಜನತೆಯನ್ನು ನೆಲಸಮಗೊಳಿಸಿದರೆ ರಾ ಷ್ಟ್ರವನ್ನು ತಳಮಟ್ಟಕ್ಕೆ ತಳ್ಳಲು ಸಾಧ್ಯವೆಂದು ಕೆಲವರು ಮಾದಕ ವಸ್ತುಗಳ ಹಾವಳಿ ಹೆಚ್ಚಿಸಿ ದುಕೃತ್ಯವನ್ನು ಎಸಗುತ್ತಿದ್ದಾರೆ. ಹೀಗಾಗಿ ಟ್ರಸ್ಟ್ ಡಿ.೯ ರಿಂದ ನಶಾಮುಕ್ತ ಕರ್ನಾಟಕ ಅಭಿಯಾನದ ಸಂಚಾರಿ ರಥ ಆರಂಭಿಸಿ ಅನೇಕ ಜಿಲ್ಲಾ ಕೇಂದ್ರಗಳ ಮುಖಾಂತರ ಚಿಕ್ಕಮಗಳೂರಿಗೆ ಆಗಮಿಸಿದೆ ಎಂದು ತಿಳಿಸಿದರು.
ದುಶ್ಚಟಕ್ಕೆ ಒಳಗಾದವರು ಸುಮ್ಮನೆ ಕೂರುವುದಿಲ್ಲ. ಅಳುವುದು, ಕಿರುಚಾಡುವುದು ಅಥವಾ ಗಲಾಟೆಗ ಳಲ್ಲಿ ಭಾಗಿಯಾಗುತ್ತಾರೆ. ಇದರಿಂದ ವ್ಯಸನಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಭಾರತವನ್ನು ವಿಶ್ವಗು ರುವಾಗಿಸುವ ಶಕ್ತಿ ಇಂದಿನ ಯುವಜನತೆ ಮೇಲಿದೆ. ಹೀಗಾಗಿ ದೇಶವನ್ನು ಭದ್ರಗೊಳಿಸಲು ಯುವಜನತೆ ವ್ಯಸನಗಳ ಚಟಕ್ಕೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಎಐಟಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ, ಕಾಲೇಜಿನ ನಶಾಮುಕ್ತದ ಸಂಚಾಲಕ ಡಾ|| ಜಿ.ಎಂ.ಸತ್ಯನಾರಾಯಣ್ ಸ್ವಾಗತ ಭಾಷಣ ಮಾಡಿದರು. ಜೇಸಿಐ ಅಧ್ಯಕ್ಷ ತಿಲಕ್ ಹಾಗೂ ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು. ಪ್ರೊ.ಬಸವರಾಜ್ ನಿರೂಪಿಸಿದರು.
Drugs are a health-depleting substance.
Leave a comment