ತರೀಕೆರೆ: ತರೀಕೆರೆ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೆಂಗಳೂರು ಆಕಾಶ ವಾಣಿ ಕಾರ್ಯಕ್ರಮ ನಿರ್ದೇಶಕರಾದ ಡಾ.ಎ.ಎಸ್.ಶಂಕರ್ ನಾರಾಯಣ್ ಆಯ್ಕೆ ಮಾಡಲಾಗಿದೆ ಸಾಹಿತ್ಯ ಪರಿಷತ್ ತಡವಾಗಿಯಾದರು ಅರ್ಹರನ್ನು ಗುರ್ತಿಸಿದ್ದಾರೆ.
ಭದ್ರಾವತಿ ಆಕಾಶವಾಣಿ ಯಲ್ಲಿ ವೃತ್ತಿ ಆರಂಭಿಸಿ ತಮ್ಮ ಕಂಚಿನ ಕಂಠದಿಂದ ಹಲವು ಪ್ರತಿಭೆಗಳನ್ನು ಎಕ್ಕಿ ತೆಗೆದಿರುವುದನ್ನು ಇಂದು ಕೂಡ ಕಲಾವಿದರು, ಹೋರಾಟಗಾರರು ಸಾಹಿತಿಗಳು, ಪತ್ರಕರ್ತರು ಮತ್ತು ವಿಶೇಷವಾಗಿ ಜಾನಪದ ಕಲಾವಿದರು ಬೆಳವಣಿಗೆಗೆ ಕಾರಣರಾಗಿದ್ದಾರೆ.
ಸಪೂರ ದೇಹ ಮೃದು ಮಾತು ಸರಳತೆಯನ್ನು ಮೈಗೂಡಿಸಿಕೊಂಡಿರುವ ಶಂಕರ್ ನಾರಾಯಣ್ ಕಾರ್ಯಕ್ರಮ ನಡೆಸಿಕೊಡುವಾಗ ಕಂಚಿನ ಕಂಠದಿಂದ ಪ್ರಶ್ನೆ ಮಾಡುವಾಗ ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ.
ಭರವಸೆ ಮೂಡಿಸುವಂತೆ ಆನೇಕ ಜಾನಪದ ಕಲಾವಿದರು ಮತ್ತು ಹಾಡುಗಾರರನ್ನು ಹುಡುಕಿ,ಹುಡುಕಿ ಆಕಾಶವಾಣಿ ಕಲಾವಿದರು ಎಂದು ಎದೆ ತಟ್ಟಿಕೊಳ್ಳುವಂತೆ ಮಾಡಿದ್ದು ಹೆಗ್ಗಳಿಕೆಯ ಕೆಲಸ.
ಕಳೆದ ಮೂವತ್ತೈದು ವರ್ಷಗಳಿಂದ ಸಾಮಾನ್ಯ ವಿಷಯಗಳಿಂದ ಹಿಡಿದು ಮಹತ್ವದ ವಿಷಯಗಳನ್ನು ತರ್ಕ ಬದ್ದವಾಗಿ ಮಂಡಿಸಿ ಆಕಾಶವಾಣಿಯನ್ನು ಆಕರ್ಷಕ ವಾಣಿಯಾಗಿಸಿದವರು.
ನವ ಮಾಧ್ಯಮಗಳು, ಪತ್ರಿಕೆಗಳ ಅಬ್ಬರದಲ್ಲಿ ಆಕಾಶವಾಣಿ ಕಥೆ ಮುಗಿಯುತ್ತದೆ ಎನ್ನುವ ದಿನಗಳಲ್ಲಿ ಹೊಸ,ಹೊಸ ಕಾರ್ಯಕ್ರಮ ಕಟ್ಟಿಕೊಟ್ಟು ಇನ್ನೂ ಆಕಾಶವಾಣಿಗೆ ಕಿವಿ ಕೊಡುವಂತಹ ಹೆಗ್ಗಳಿಕೆ ಶಂಕರ್ ನಾರಾಯಣ್ ಗೆ ಸಲ್ಲುತ್ತದೆ.
ಸುದ್ದಿ ಅಕ್ಷಯ ಪತ್ರಿಕೆ ಪ್ರಾರಂಭಿಸಿದಾಗ ತಿದ್ದಿ ತಿಡುವದರಿಂದ ಹಿಡಿದು ಕಥೆ ಕವನ ಬರೆದು ಉರಿದುಂಭಿಸಿದವರು ಅಂದಿನಿಂದ ಇಂದಿನವರೆಗೂ ಸ್ನೇಹಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುವ ಸದ್ಗುಣಗಳನ್ನು ಹೊಂದಿರುವ ಶಂಕರ್ ನಾರಾಯಣ್ ಆಯ್ಕೆ ಗೆ ಮೆಚ್ಚಲೇ ಬೇಕು.
ಪದವೀಧರರಾಗಿ ಆಕಾಶವಾಣಿ ಸೇರದವರು ಸಾಹಿತ್ಯ ಕ್ಷೇತ್ರದ ಬಗ್ಗೆ ಹೆಚ್ಚಿನ ಒಲವು ಹೊಂದಿ “ಸ್ವಾಗತ” ಎಂಬ ಕವನ ಸಂಕಲನ ತಂದಿದ್ದಾರೆ. ಜನಪ್ರಿಯ ಕವಿ ಜಿ.ಎಸ್.ಶಿವರುದ್ರಪ್ಪರವರ “ಆಕಾಶ ದೀಪ” ಭಾನುಲಿ ಕೃತಿಗಳ ಸಂಗ್ರಹ ಮಾಡಿದ್ದಾರೆ.
ಕನ್ನಡ ಭಾನುಲಿಯಲ್ಲಿ ಭಾಷಣಕಾರರ ಬಗ್ಗೆ ಅಧ್ಯಯನ ನಡೆಸಿ ಡಾಕ್ಟರೇಟ್ ಪಡೆದಿದ್ದಾರೆ. ಪ್ರಚಾರಕ್ಕೆ ಎಂದು ಆಸೆ ಪಡದ ಶಂಕರ್ ನಾರಾಯಣ್ ರನ್ನು ತಡವಾಗಿ ಗುರ್ತಿಸಿದರೂ ಕೂಡ ಅರ್ಹ ಆಯ್ಕೆ ಆಗಿರುವುದು ಸಮ್ಮೇಳನಕ್ಕೆ ಮೆರಗು ತರುವುದರಲ್ಲಿ ಅನುಮಾನ ಇಲ್ಲ. ತರೀಕೆರೆ ಸಾಹಿತ್ಯ ಪರಿಷತ್ತಿಗೆ ಅಭಿನಂದನೆಗಳು. ಸಲ್ಲದವರಿಗೆ ಸಾಹಿತ್ಯ ಸಿರಿ,ಗರಿ,ಬೆಳಕು,ಕಿಂಡಿ ಎಂಬ ಪ್ರಶಸ್ತಿಗೆ ಕಡಿವಾಣ ಹಾಕುವ ಜೊತೆಗೆ ಉತ್ತಮರನ್ನು ಬೆನ್ನು ತಟ್ಟಿ.
Dr. A.S. Shankar Narayan as the President of the Sahitya Sammelan
Leave a comment