ಚಿಕ್ಕಮಗಳೂರು: ಬೆಳಗಾವಿಯುಲ್ಲಿ ವೇದಿಕೆಯಲ್ಲೇ ಎಎಸ್ಪಿ ಒಬ್ಬರ ಕಪಾಳ ಮೋಕ್ಷಕ್ಕೆ ಮುಂದಾದ ಮುಖ್ಯಮಂತ್ರಿ ಸಿದ್ದರಾಮುಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮಂಗಳವಾರ ನಗರದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಸಂವಿಧಾನ ವಿರೋಧಿ ಕಾಂಗ್ರೆಸ್‌ಗೆ ಧಿಕ್ಕಾರ, ಕಾಂಗ್ರೆಸ್ ಸರ್ಕಾರ ಗೂಂಡಾ ಸರ್ಕಾರ, ಸಿದ್ದರಾಮಯ್ಯ ಗೋ ಗೋ ಪಾಕಿಸ್ಥಾನ್, ದರ್ಪ-ದಬ್ಬಾಳಿಕೆ ತೋರುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಿ ಎನ್ನುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ಮಾತನಾಡಿ, ಪೊಲೀಸರೊಂದಿಗೆ ಅಸಭ್ಯತನ ಹಾಗೂ ಪಾಕಿಸ್ಥಾನಿ ಪ್ರೇಮಿಗಳಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಯನ್ನು ಏಕವಚನದಲ್ಲಿ ಕರೆದು ಎಎಸ್ಪಿಗೆ ಕಪಾಳಮೋಕ್ಷಕ್ಕೆ ಮುಂದಾದ ಮುಖ್ಯಮಂತ್ರಿಗಳಿಗೆ ಅಧಿಕಾರದಲ್ಲಿರಲು ನೈತಿಕತೆ ಇಲ್ಲ ಎಂದರು.
ದೇಶಾದ್ಯಂತ ಜನತೆ ಪ್ರವಾಸಿಗರ ಸಾವಿನ ದುಃಖದಿಂದ ಬಳಲುತ್ತಿರುವಾಗ ಪಾಕಿಸ್ಥಾನ ಪ್ರೇಮಿಯಂತೆ ವರ್ತಿಸಿದ ಸಿದ್ದರಾಮಯ್ಯ ನಡೆಯ ವಿರುದ್ಧ ಬಿಜೆಪಿ ಮಹಿಳಾ ಕಾರ್ಯಕರ್ತರು ಸಮಾವೇಶದಲ್ಲಿ ಕಪ್ಪುಪಟ್ಟಿ ಧಿಕ್ಕಾರ ಕೂಗಿದರು. ಇದರಿಂದ ಮುಜುಗರಕ್ಕೆ ಒಳಗಾಗಿ ಸಿಎಂ ಭದ್ರತಾ ಸಿಬ್ಬಂದಿ ಧಾರವಾಡ ಎಎಸ್ಪಿಗೆ ಕೆನ್ನೆಗೆ ಬಾರಿಸಲು ಮುಂದಾಗಿರುವುದು ನಾಚಿಕೇಡಿನ ಸಂಗತಿ ಎಂದರು.
ಸಮಾಜದ ಹಿತ ಕಾಪಾಡುವ ಪೊಲೀಸರು ಅತ್ಯಂತ ಶ್ರೇಷ್ಟ ಸೇವೆ ಸಲ್ಲಿಸುತ್ತಿದೆ. ಆದರೆ ತಮ್ಮ ಮನೆಯ ಮನೆ ಜೀತದಾಳಿನಂತೆ ಅವರನ್ನು ನಡೆಸಿಕೊಳ್ಳಲು ಮುಂದಾದ ಸಿದ್ದರಾಮಯ್ಯ ಅತಿಯಾದ ದುರಂಕಾರ, ಅಧಿಕಾರ ದರ್ಪದಿಂದ ಮೆರೆಯುತ್ತಿದ್ದಾರೆ ಎಂದರು.
ಬಿಜೆಪಿಯವರ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸುತ್ತೇವೆಂದು ಬೆದರಿಕೆ ಹಾಕಿರುವ ಸಿದ್ದರಾಮಯ್ಯ ಅವರ ಪಂಥಾಹ್ವಾನವನ್ನು ಸ್ವೀಕರಿಸಿ ಇಂದು ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಲಾಗುತ್ತಿದೆ. ತಾಕತ್ತಿದ್ದರೆ ತಡೆಯುವ ಪ್ರಯತ್ನಕ್ಕೆ ಕಾಂಗ್ರೆಸ್ಸಿಗರು ಕೈಹಾಕಲಿ ಎಂದು ಸವಾಲೆಸೆದ ಅವರು, ಕೂಡಲೇ ಪೊಲೀಸರು ಸ್ವಯಂ ಪ್ರೇರಿತವಾಗಿ ಸಿಎಂ ಮೇಲೆ ಪ್ರಕರಣ ದಾಖಲಿಸಿ ಜೈಲಿ ಗಟ್ಟುವ ಕೆಲಸ ಮಾಡಬೇಕು. ಬಿಜೆಪಿ ಕೋಟ್ಯಾಂತರ ಕಾರ್ಯಕರ್ತರಿಂದ ಗಟ್ಟಿಯಾಗಿ ಬೆಳೆದು ನಿಂತಿದೆ. ಓರ್ವ ಕಾರ್ಯಕರ್ತನನ್ನೂ ಮುಟ್ಟುವ ಶಕ್ತಿ ಕಾಂಗ್ರೆಸ್ಸಿಗಿಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ ಸಿದ್ದರಾಮಯ್ಯ ಸರ್ಕಾರ ಪ್ರತಿ ಸಂದರ್ಭ ಹಿಂದೂಗಳನ್ನು ಅಣುಕಿಸುತ್ತಿದೆ. ಅಧಿಕಾರ ದರ್ಪ, ಎಡಚಿಂತನೆಗಳಿಂದ ಅಲ್ಪಸಂಖ್ಯಾತರ ಒಲೈಕೆ ಹಾಗೂ ಮತಕ್ಕಾಗಿ ಮುಸ್ಲೀಮನಾಗಿ ಹುಟ್ಟುತ್ತೇನೆಂಬ ಹೇಳಿಕೆ ಹಾಗೂ ಕೆಜೆಹಳ್ಳಿ, ಡಿಜೆಹಳ್ಳಿ ದಾಳಿಕೋರರನ್ನು ಬ್ರದರ್ಸ್ ಎಂದು ಕರೆದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ನಿಚಬುದ್ದಿಯನ್ನು ತೋರ್ಪಡಿಸಿಕೊಂಡಿದ್ದಾರೆ ಎಂದು ದೂರಿದರು.
ಭಾರತ-ಪಾಕಿಸ್ಥಾನ ಎಂದಾಗ ಮೊಟ್ಟಮೊದಲು ಭಾರತದ ಪರವಾಗಿ ನಿಲ್ಲುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ, ಹಕ್ಕು ಹಾಗೂ ಮಣ್ಣಿನ ಋಣ ತೀರಿಸುದಂತೆ. ಆದರೆ ಮುಖ್ಯಮಂತ್ರಿ ಪಾಕಿಸ್ತಾನಿಯರ ಪರವಾಗಿ ನಿಂತಿರುವುದು ಘನತೆಗೆ ಸರಿಯಲ್ಲ. ಅಲ್ಲದೇ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ್ನು ಕಟ್ಟಿ ಹಾಕುವ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಹಲವಾರು ಹೋರಾಟದಿಂದ ಜನಿಸಿದ ಪಕ್ಷಕ್ಕೆ ನೂರು ಸಿದ್ದರಾಮಯ್ಯರ ಕುತಂತ್ರ ತಟ್ಟುವುದಿಲ್ಲ ಎಂದರು.
ಬಿಜೆಪಿ ಮುಖಂಡ ಪ್ರೇಮ್‌ಕುಮಾರ್ ಮಾತನಾಡಿ ಪಾಕಿಸ್ಥಾನದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸಿದ್ದರಾಮಯ್ಯ ಅವರನ್ನು ನಾಡಿನ ಜನತೆ ಸಂತೋಷದಿಂದ ಬೀಳ್ಕೊಟ್ಟು ಪಾಕಿಸ್ಥಾನಕ್ಕೆ ಕಳಿಸಿಕೊಡಲಿದೆ. ಆ ದೇಶದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿ ಹಾಗೂ ಅಲ್ಲಿನ ಸರ್ಕಾರವು ಪಾಕಿಸ್ಥಾನ ರತ್ನ ಎಂಬ ಬಿರುದು ಕೊಡಲಿದ್ದಾರೆ ಎಂದು ಮೂದಲಿಸಿದರು.
ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ ದಕ್ಷ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷಕ್ಕೆ ಮುಂದಾದ ಸಿಎಂ ನಡೆ ಸಮಾಜ ತಲೆತಗ್ಗಿಸುವಂಥದ್ದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ವಿಜಯ್‌ಕುಮಾ ರ್, ವಕ್ತಾರರಾದ ಹಿರೇಮಗಳೂರು ಪುಟ್ಟಸ್ವಾಮಿ, ಸಿ.ಹೆಚ್.ಲೋಕೇಶ್, ನಗರಸಭೆ ಅಧ್ಯಕ್ಷ ಸುಜಾತ ಶಿವಕುಮಾರ್, ಮುಖಂಡರುಗಳಾದ ಸೀತರಾಮ ಭರಣ್ಯ, ಜಸಂತಾ ಅನಿಲ್‌ಕುಮಾರ್, ಬಿ.ರಾಜಪ್ಪ, ನಾರಾಯಣಗೌಡ, ಹೆಚ್.ಕೆ.ಕೇಶವಮೂರ್ತಿ, ಕೋಟೆ ರಂಗನಾಥ್, ನಿಶಾಂತ್, ಸಚಿನ್‌ಗೌಡ, ಪ್ರದೀಪ್, ಚೈತ್ರ ಮತ್ತಿತರರು ಹಾಜರಿದ್ದರು.
District BJP protests against CM-DCM
Leave a comment