ವಿಧಾನ ಪರಿಷತ್ ನ ಸದಸ್ಯ ಪ್ರಾಣೇಶ್ ರವರ ಅಯ್ಕೆ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು ಪ್ರಾಣೇಶ್ ಮನೆಗೆ ವಿಧಾನಸೌಧಕ್ಕೆ ಗಾಯಿತ್ರಕ್ಕ ಎಂದು ಘೋಷಣೆ ಮೊಳಗಿತು ಪಟಾಕಿ ಸದ್ದು ಗುಡುಗಿತು ಆದರೆ ಮೂರು ತಿಂಗಳಿಂದ ಮೌನಚಾರಣೆಯೇ ಬಾಕಿ ಎನ್ನುವಂತಾಗಿದೆ.
ಹೈಕೋರ್ಟ್ ನ ಆದೇಶದಲ್ಲಿ ಮರು ಎಣಿಕೆ ನಡೆದು ಫಲಿತಾಂಶ ಗೌಪ್ಯವಾಗಿ ಇಡಲಾಗಿದೆ.ಆದರೆ ಎಣಿಕೆಗೆ ಹೋದ ಎರಡು ಪಕ್ಷದವರು ಕಿವಿಯಲ್ಲಿ ಪಿಸುಗುಟ್ಟಿದ್ದು ಪಟಾಕಿ ಸೌಂಡ್ ಗೆ ಗಾಯಿತ್ರಿ ಗೆದ್ದಾಯಿತು ಎಂಬುದು ಎಲ್ಲರಿಗೂ ತಿಳಿದು ಹೋಯಿತು.
ಕಮ್ಯುನಿಸ್ಟ್ ಮುಖಂಡರು ಕಾಂಗ್ರೆಸ್ ನ ಅನಧಿಕೃತ ವಕ್ತಾರರಾದ ರೇಣುಕ ಅರಾಧ್ಯರು ಮಾತ್ರ ಒಂದು ವಾರಗಳ ಕಾಲ ಮನೆ,ಮನೆಗೆ ಹೋಗಿ ಕಾಂಗ್ರೆಸ್ ಗೆದ್ದಾಯಿತು ಬಿಜೆಪಿ ಸೋತಾಯಿತು ಎಂದು ಹೊಸ ಗೆಟಪ್ನಲ್ಲಿ ಓಡಾಡಿದ್ದು ಬಾಕಿ ಆಯಿತು.
ಹೈಕೋರ್ಟ್ ತನಿಖೆ ಮಾಡುವಾಗಲೇ ಪ್ರಾಣೇಶ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು ಸುಪ್ರೀಂ ಕೋರ್ಟ್ ಹೈಕೋರ್ಟ್ ನಲ್ಲಿ ತನಿಖೆ ನಡೆಯಲಿ ನೋಡುವ ಎಂಬ ಸೂಚನೆ ನೀಡಿತ್ತು.ಇದರಿಂದಾಗಿ ಸುಪ್ರೀಂ ಅಂಗಳ ತಲುಪಿದ ಹೈಕೋರ್ಟ್ ಆದೇಶಕ್ಕೆ ಈಗ ಬರೀ ಡೆಟ್ ನೀಡುತ್ತಿರುವುದು ನೋಡಿದರೆ ಸದ್ಯಕ್ಕೆ ಆದೇಶ ಬರುವ ನಿರೀಕ್ಷೆ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ನವರು ಗೊಣಗುತ್ತಿದ್ದಾರೆ.
ಬಿಜೆಪಿಯವರು ಕೋರ್ಟ್ ಇದೆ ಸಾರ್ ಎನ್ನುತ್ತಿದ್ದಾರೆ.ಎರಡು ಕಡೆ ಘಾಟಾನುಘಟಿ ವಕೀಲರನ್ನುಇಟ್ಟುಕೊಂಡಿರುವುದು ಮೂಗಿಗಿಂತ ಮೂಗುತಿ ಬಲು ಭಾರ ಎನ್ನುತ್ತಿದ್ದಾರೆ.ಕುಣಿದು ಕುಪ್ಪಳಿಸಿದವರು ಮುಖ ಇಳೆಬಿಟ್ಟರೆ ಕೋರ್ಟ್ಗೆ ಹೋಗಿಬರುತ್ತಿರುವವರ ಕಾಲುನೋವಿನ ಜೊತೆಗೆ ಜೇಬು ಕಿತ್ತೇಸೆಯುತ್ತಿದ್ದಾರೆ ಎಂದು ಜನ ನಗುತ್ತಿದ್ದಾರೆ.
Dispute of High Court V/S Supreme Court Vidhan Parishad!
Leave a comment