ಚಿಕ್ಕಮಗಳೂರು : ಸಖರಾಯಪಟ್ಟಣದ ಸಮೀಪದ ಗುಂಡಸಾಗರದ ಗಂಗಮ್ಮ(90) ಈಗಲೂ ಬದುಕಿದ್ದಾರೆ. ಆಸ್ತಿ ಲಪಾಟಯಿಸಲು ನಕಲಿ ಮರಣ ಪತ್ರ ಸೃಷ್ಟಿಸಿ ಗಂಗಮ್ಮರನ್ನು ಜೀವಂತ ಸಾಯಿಸಿದ್ದಾರೆ. ರಾಮೇಗೌಡ, ಗುಡ್ಡಪ್ಪ ಮತ್ತು ಶಿವನಂಜಪ್ಪ ಎಂಬ ಮೂರು ಜನ ಅಣ್ಣ ತಮ್ಮಂದಿರು ಮರಣ ಹೊಂದಿದ್ದಾರೆ ಆದರೆ ಆಸ್ತಿ ವಿಭಾಗ ಮಾಡಿಕೊಂಡಿರುವುದಿಲ್ಲ. ಹೀಗಾಗಿ ಆಸ್ತಿ ಹಕ್ಕುಗಳು ರಾಮೇಗೌಡರ ಪತ್ನಿ ಗಂಗಮ್ಮ ಹೆಸರಿಗೆ ಬಂದಿದೆ.
ಈ ವಿಷಯ ಗೊತ್ತಿದ್ದ ಗುಡ್ಡಪ್ಪನ ಚಾಲ್ತಿ ಸೊಸೆ ಹೇಮಾವತಿ ಎಂಬುವಳ ಕಣ್ಣು ಆಸ್ತಿ ಲಪಾಟಯಿಸಲು ಖತರ್ ನಾಕ್ ಪ್ಲಾನ್ ಮಾಡಿ ದಳ್ಳಾಳಿಗಳ ಮೂಲಕ ಕಂದಾಯ ಇಲಾಖೆಯ ಕದ ತಟ್ಟಿದ್ದಾಳೆ. ಪಳಗಿರುವ ಕಂದಾಯ ಅಧಿಕಾರಿ ಜಿತೇಂದ್ರ ನಾಯಕ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಾದ ವಿರೇಶ್ ಹಾಗೂ ರಘರಾಮ್ ಕೈ ಜೋಡಿಸಿದ್ದಾರೆ.
ಗಂಗಮ್ಮ ಮರಣ ಹೊಂದಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸುವುದರ ಜೊತೆಗೆ ನಕಲಿ ವಂಶವೃಕ್ಷ ಮಾಡಿಕೊಟ್ಟಿದ್ದಾರೆ ಆದರೆ ಆದೇ ಹೇಮಾವತಿ ಮನೆಯಲ್ಲಿ ಈಗಲೂ ಗಂಗಮ್ಮ ಬದುಕಿದ್ದಾರೆ. ಈ ಬಗ್ಗೆ ಇಲಾಖೆ ಗಮನಕ್ಕೆ ಬಂದ ಮೇಲೆ ಸ್ವಯಂ ದೂರು ದಾಖಲಿಸಿಕೊಂಡು ಯಥಾಸ್ಥಿತಿಯಲ್ಲಿ ಇಡಲಾಗಿದೆ ಆದರೆ ಯಾರ ಮೇಲೂ ಕ್ರಮಕೈಗೊಂಡಿಲ್ಲದಿರುದು ಸಂಶಯಮೂಡಿಸುತ್ತದೆ. ನಕಲಿ ದಾಖಲೆ ನೀಡಿ ಹೇಮಾವತಿ 5,32 ಗುಂಟೆ ಜಮೀನು ತನ್ನ ಹೆಸರಿಗೆ ಮಾಡಿಸಿಕೊಂಡು ಗಂಗಮ್ಮ ಮೊಮ್ಮಗ ಕುಪ್ಪಾಳದ ಉಮೇಶ್ ಹೆಸರಿಗೆ ಮೂರು ಎಕರೆ ಜಮೀನನ್ನು ನಕಲಿ ದಾಖಲೆಗಳ ಮೂಲಕ ದಾನಪತ್ರ ಮಾಡಿಸಿಕೊಡಲಾಗಿದೆ.
ಜಿತೇಂದ್ರ ಎಂಬ ಕಂದಾಯ ಅಧಿಕಾರಿ ಹಲವು ವರ್ಷಗಳಿಂದ ಸಖರಾಯಪಟ್ಟಣದಲ್ಲಿ ಪಟ್ಟಾಗಿ ಕುಳಿತಿರುವುದಲ್ಲದೆ ತಿನ್ನಬಾರದ ಕಡೆಯಲ್ಲಿ ತಿನ್ನುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಇದ್ದರು ಯಾರಿಗೂ ಕೇರ್ ಮಾಡದೆ ನಕಲಿ ದಂಧೆ ಮುಂದುವರೆಸಿದ್ದಾನೆ ಎಂದು ರೈತ ಸಂಘದ ಜಲ್ಲಾ ಅಧ್ಯಕ್ಷ ಗುರುಶಾಂತಪ್ಪ ದೂರಿದ್ದಾರೆ.
ಇವನ ಗುರು ನಕಲಿ ಸಾಗುವಳಿ ಚೀಟಿ ನೀಡಿ ಅಮಾನತು ಆಗಿದ್ದ ಉಮೇಶ್ ಈತನನ್ನು ಮೀರಿಸುವ ಜಿತೇಂದ್ರ ಹಳ್ಳಿಕೆರೆ ಕಾವಲ್ ನ 1600 ಎಕರೆಗಳಷ್ಟು ನಕಲಿ ಸಾಗುವಳಿ ನೀಡುವಲ್ಲಿ ಪ್ರಮುಖ ಪಾತ್ರದಾರಿ ಆದರೆ ಇವನ ಮೇಲೆ ಯಾವ ಕ್ರಮ ಆಗದಿರುವುದೆ ಬದುಕಿದವರನ್ನು ಸಾಯಿಸಿ, ಸತ್ತವರನ್ನು ಬದುಕಿಸುವಷ್ಟು ಚಾಲ್ತಿ ದಂಧೆಗೆ ರಹದಾರಿ ಮಾಡಿಕೊಂಡಿದ್ದಾನೆ ಎಂದು ಗುರುಶಾಂತಪ್ಪ ಆರೋಪಿಸಿದ್ದಾರೆ. ಈಗಲಾದರೂ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
Leave a comment