ಚಿಕ್ಕಮಗಳೂರು: ಭಾರತದಲ್ಲಿ ದಲಿತ ಸಮುದಾಯವೇ ಕಾಂಗ್ರೆಸ್‌ಗೆ ದೊಡ್ಡಶಕ್ತಿ. ಜಗತ್ತಿನಲ್ಲಿ ಸೂರ್ಯ-ಚಂದ್ರ ಹಾಗೂ ದಲಿತ ಸಮಾಜ ಇರುವವರೆಗೆ ಕಾಂಗ್ರೆಸ್ ಪಕ್ಷ ಅಲುಗಾಡಿಸಲಾ ಗದು. ಒಂದು ವೇಳೆ ಪರಿಶಿಷ್ಟ ಸಮಾಜ ಇಲ್ಲವಾದರೆ ಪಕ್ಷವು ನಶಿಸಲಿದೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಆರ್.ಧರ್ಮಸೇನಾ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಎಸ್ಸಿ ಘಟಕದಿಂದ ಬುಧವಾರ ಆಯೋಜಿಸಿದ್ಧ ಕಾರ್ಯ ಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ ವಿ.ಪಕ್ಷಗಳ ಮಾತು ಹಾಗೂ ಮಂಕುಬೂದಿಗೆ ಬೆರ ಗಾಗದೇ ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು ಎಂದರು.
ದೇಶದಲ್ಲಿ ಅತಿಹೆಚ್ಚು ದಲಿತ ಸಮಾಜ ದೌರ್ಜನ್ಯ, ಶೋಷಣೆಗೆ ಒಳಗಾಗುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವ ಸ್ಥೆಯಲ್ಲಿ ಪ್ರಶ್ನಿಸುವ ಗುಣ ಬೆಳೆಸಿಕೊಂಡಾಗ ಬಹುಸಂಖ್ಯಾತ ದಲಿತರು ಮುಂಚೂಣಿಗೆ ಬರಲು ಸಾಧ್ಯವಾಗ ಲಿದೆ. ಆ ನಿಟ್ಟಿನಲ್ಲಿ ಮುಂದಿನ ಚುನಾವಣೆಗಳಲ್ಲಿ ಜನಾಂಗ ಕಾಂಗ್ರೆಸ್‌ನತ್ತ ಒಲವು ಹೊಂದಬೇಕು ಎಂದು ಹೇಳಿದರು.
ರಾಷ್ಟ್ರದ ಪ್ರಥಮ ಪ್ರಜೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಅವಮಾನಿಸಿರುವ ವಕೀಲನನ್ನು ಬಿಜೆಪಿ ಪರೋಕ್ಷವಾಗಿ ಬೆಂಬಲಿಸುತ್ತಿದೆ. ಅದೇ ರಾಜ್ಯದಲ್ಲಿ ಉಪಮುಖ್ಯಮಂತ್ರಿಗಳು ಶಾಸಕರಿಗೆ ಕರಿಟೋಪಿ ಎಂದಾ ಕ್ಷಣ ರಾಷ್ಟ್ರಭಕ್ತಿ ಉಕ್ಕಿ ಹರಿಯುತ್ತಿದೆ. ಆದರೆ ನ್ಯಾಯಾಧೀಶರ ವಿಚಾರದಲ್ಲಿ ಮಾತನಾಡುವುದಿಲ್ಲ ಯಾಕೆ ಎಂ ದು ಪ್ರಶ್ನಿಸಿದರು.
ದೇಶದಲ್ಲಿ ಬಿಜೆಪಿ, ಅಧಿಕಾರಕ್ಕಾಗಿ ಇವಿಎಂ ಮೂಲಕ ಮತಗಳ್ಳತನ ಮಾಡಿದೆ. ಈ ವಿರುದ್ಧ ರಾಹುಲ್ ಗಾಂಧಿ ಬೃಹತ್‌ಮಟ್ಟದಲ್ಲಿ ಚಳುವಳಿ ರೂಪಿಸಿ ಸತ್ಯಾಸತ್ಯತೆ ಜನರ ಮುಂದಿಡಲು ಪ್ರಯತ್ನಿಸುತ್ತಿದ್ದಾರೆ. ಮತ ಗಳ್ಳನದಲ್ಲಿ ಚುನಾವಣೆ ಆಯೋಗ, ಅಧಿಕಾರಿ ವೃಂದ ಹಾಗೂ ರಾಜಕೀಯ ಕುತಂತ್ರಗಳು ನಡೆದಿದ್ದು ಜನತೆ ಧೈರ್ಯದಿಂದ ರಾಹುಲ್‌ಗಾಂಧಿಯವರ ಕೈಬಲಪಡಿಸಬೇಕು ಎಂದರು.
ಪರಿಶಿಷ್ಟ ಒಗ್ಗೂಡಿಸಲು ಹಾಗೂ ಪಕ್ಷ ಸಂಘಟಿಸಲು ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರು, ಮುಖಂ ಡರುಗಳು ಪ್ರತಿ ತಾಲ್ಲೂಕಿನಲ್ಲಿ ಮತಗಳ್ಳತನದ ಸಹಿ ಸಂಗ್ರಹ ಅಭಿಯಾನ ನಡೆಸಿ ಜನರಲ್ಲಿ ಜಾಗೃತಿ ಮೂಡಿ ಸಬೇಕು. ಆ ಸಹಿ ಸಂಗ್ರಹವು ದೆಹಲಿಗೆ ರವಾನಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|| ಕೆ.ಪಿ.ಅಂಶುಮಂತ್ ಮಾತನಾಡಿ ಅಂಬೇಡ್ಕರ್ ಸಂವಿಧಾನದಡಿ ಕಾಂಗ್ರೆ ಸ್ ಪಕ್ಷ ಕಟಿಬದ್ಧವಾಗುವ ಜೊತೆಗೆ ಗೌರವಿಸುವ ಕೆಲಸ ಮಾಡಿದೆ. ಹಿಂದಿನ ಯುಪಿಎ ಸರ್ಕಾರದಲ್ಲಿ ನಿರು ದ್ಯೋಗರಿಗೆ ಉದ್ಯೋಗ, ಆರೋಗ್ಯ ಸವಲತ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಪರಿಣಾಮ ಇಂದು ರಾಷ್ಟ್ರ ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದರು.
ಜಿಲ್ಲೆಯಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿ ವಿಚಾರದಲ್ಲಿ ಸ್ಥಳೀಯರಿಗೆ ಸಮಸ್ಯೆಯಿದೆ. ಈ ಬಗ್ಗೆ ಐದು ಕ್ಷೇತ್ರದ ಶಾಸಕರು, ಉಸ್ತುವಾರಿ ಸಚಿವರು ಸಂಬಂಧಿಸಿದ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ. ರಾ ಜ್ಯದ ಕೆಲವು ಜಿಲ್ಲೆಗಳಲ್ಲಿ ನಿವೇಶನ ಕೊಡುವ ವ್ಯವಸ್ಥೆ ಕಲ್ಪಿಸಿದ್ದು ಇನ್ನುಳಿದಂತೆ ಜಿಲ್ಲೆಗಳಿಗೆ ತಾಂತ್ರಿಕ ದೋಷ ದಿಂದ ಹಿನ್ನೆಡೆಯಾಗಿದ್ದು ಸದ್ಯದಲ್ಲೇ ಬಗೆಹರಿಸಿ, ಮೂಲನಿವಾಸಿಗೆ ಭೂಮಿ ಒದಗಿಸಲಾಗುವುದು ಎಂದರು.
ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮೂಲ ಕಾರಣವೇ ದಲಿತ ಸಮುದಾಯ. ಹೀಗಾಗಿ ಆ ಸಮುದಾಯಕ್ಕೆ ಸಮಾನತೆ, ಅವಕಾಶ ಹಾಗೂ ಅಧಿ ಕಾರ ನೀಡಬೇಕು. ಆಗ ಮಾತ್ರ ಕಾರ್ಯಕರ್ತರು ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಉತ್ಸಾಹಕರಾಗಿ ಕೆಲಸ ಮಾಡುತ್ತಾರೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಎಂ.ಮಲ್ಲೇಶ್ ವಹಿಸಿದ್ದರು. ಈ ಸಭೆ ಯಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ, ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು, ಮುಖಂಡರುಗಳಾದ ತನೋಜ್‌ನಾಯ್ಡು, ಹಿರೇ ಮಗಳೂರು ರಾಮಚಂದ್ರ, ಲಕ್ಷ್ಮಣ್, ವಿವಿಧ ತಾಲ್ಲೂಕು, ಹೋಬಳಿ ಅಧ್ಯಕ್ಷರು ಉಪಸ್ಥಿತರಿದ್ದರು.
Dalit community is a big strength for Congress
Leave a comment