ಚಿಕ್ಕಮಗಳೂರು : ಕಾಫಿನಾಡಲ್ಲಿ ಇಂದಿನಿಂದ ದತ್ತಮಾಲಾ ಅಭಿಮಾನದ ಸಂಭ್ರಮ ಕಳೆ ಕಟ್ಟಲಿದೆ, ದತ್ತಜಯಂತಿ ಹಿನ್ನೆಲೆ ದತ್ತಭಕ್ತರಿಂದ ಇಂದು ಮಾಲಾಧಾರಣೆ ನಡೆಯಿತು. ಚಿಕ್ಕಮಗಳೂರು ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ನೂರಾರು ಭಕ್ತರು ಮಾಲಾಧಾರಣೆ ಮಾಡಿದರು
ಮಾಜಿ ಸಚಿವ ಸಿ.ಟಿ.ರವಿ ಕೂಡಾ ಮಾಲೆ ಧರಿಸಿದರು, ಸಿ.ಟಿ.ರವಿ ಜೊತೆ ಭಜರಂಗದಳ ಮುಖಂಡ ರಘು ಸಖಲೇಶಪುರ ಸಹಾ ಮಾಲಾಧಾರಣೆ ಮಾಡಿದರು,
100ಕ್ಕೂ ಹೆಚ್ಚು ದತ್ತಭಕ್ತರು ಇಂದಿನಿಂದ ಧಾರ್ಮಿಕ ವಿಧಿ ವಿಧಾನಗಳಲ್ಲಿ ತೊಡಗಲಿದ್ದಾರೆ, ಚಿಕ್ಕಮಗಳೂರು ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಯಲ್ಲೂ ಸಾವಿರಾರು ದತ್ತಭಕ್ತರಿಂದ ಇಂದೇ ಮಾಲಾಧಾರಣೆ ನಡೆಯಲಿದೆ, ಇಂದಿನಿಂದ 9 ದಿನಗಳ ಕಾಲ ವೃತ ಆಚರಿಸಲಿರುವ ದತ್ತಭಕ್ತರು ಭಜನೆ ಕೀರ್ತನೆಯಲ್ಲಿ ತೊಡಗಲಿದ್ದಾರೆ.
ಇದೇ ಡಿಸೆಂಬರ್ 14 ರಂದು ದತ್ತಪೀಠದಲ್ಲಿ ಭಕ್ತರು ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಡಿಸೆಂಬರ್ 12 ರಂದು ಅನಸೂಯ ಜಯಂತಿ ಹಾಗೂ 13 ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಈ ಬಾರಿಯ ದತ್ತ ಜಯಂತಿಯಲ್ಲಿ 25 ಸಾವಿರಕ್ಕೂ ಅಧಿಕ ಭಕ್ತರಿಂದ ದತ್ತಪೀಠದಲ್ಲಿ ಪಾದುಕೆ ದರ್ಶನ ಪಡೆಯುವ ನಿರೀಕ್ಷೆ ಇದೆ. ಈ ನಡುವೆ ಇಂದಿನಿಂದ 9 ದಿನಗಳ ಕಾಲ ಕಾಫಿನಾಡು ಬೂದಿ ಮುಚ್ಚಿದ ಕೆಂಡವಾಗಲಿರಲಿದೆ. ಆದ್ದರಿಂದ 9 ದಿನಗಳ ಕಾಲ ಜಿಲ್ಲಾದ್ಯಂತ ಖಾಕಿ ಹೈ ಅಲರ್ಟ್ ಆಗಿದೆ. ಚಿಕ್ಕಮಗಳೂರು ತಾಲೂಕಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸುತ್ತಮುತ್ತ ವ್ಯಾಪಕ ಬಂದೋಬಸ್ತ್ ಕಲ್ಪಿಸಲಾಗಿದೆ.
Leave a comment