ಚಿಕ್ಕಮಗಳೂರು : ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಆಡಿರುವ ಹೇಳಿಕೆಯಿಂದಾಗಿ ಸಮುದಾಯದ ಜನರ ಭಾವನೆಗಳಿಗೆ ಭಾರೀ ನೋವುಂಟಾಗಿದೆ. ಸಮುದಾಯದ ನಾಯಕಿ ಬಗ್ಗೆ ಸಿ.ಟಿ.ರವಿ ಆಡಿರುವ ಮಾತಿಗೆ ತಕ್ಕ ಸಾಕ್ಷಿಯಾಗಲೇಬೇಕು, ವಿಧಾನ ಪರಿಷತ್ ಸಭಾಧ್ಯಕ್ಷರು ಸಿ.ಟಿ.ರವಿ ಅವರ ಸದಸ್ಯತ್ವವನ್ನು ಕೂಡಲೇ ರದ್ದು ಮಾಡಬೇಕು. ಬಿಜೆಪಿ ಹೈಕಮಾಂಡ್ ಸಿ.ಟಿ.ರವಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ತಾಲೂಕು ವೀರಶೈವ ಮಹಾಸಭಾ ಉಪಾಧ್ಯಕ್ಷ ಎಚ್.ಎಂ.ರೇಣುಕಾರಾಧ್ಯ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಶಾಸನ ಸಭೆಗಳ ಗೌರವಕ್ಕೆ ಕೆಲ ಶಾಸಕರಿಂದಾಗಿ ಧಕ್ಕೆ ಬರುತ್ತಿದೆ. ಜನರ ಸಮಸ್ಯೆಗಳು, ರಾಜ್ಯದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕಾದ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಸದನಗಳಲ್ಲಿ ಕೀಳುಮಟ್ಟದ ರಾಜಕೀಯ ನಡೆಗಳು ನಡೆಯುತ್ತಿರುವುದು ಜನರಲ್ಲಿ ರಾಜಕಾರಣಗಳ ಬಗ್ಗೆ ಅಸಹ್ಯ ಭಾವನೆ ಮೂಡಲು ಕಾರಣವಾಗುತ್ತಿದೆ. ಇತ್ತೀಚಿಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಚಿಕ್ಕಮಗಳೂರು ಕ್ಷೇತ್ರದ ಮಾಜಿ ಶಾಸಕ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷೆ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿ ಅವಮಾನ ಮಾಡಿದ್ದಾರೆ. ಈ ಮೂಲಕ ಅವರು ಚಿಕ್ಕಮಗಳೂರು ಜಿಲ್ಲೆ ಹಾಗೂ ಕ್ಷೇತ್ರದ ಮತದಾರರ ಗೌರವಕ್ಕೂ ಮಸಿ ಬಳಿದಿದ್ದಾರೆ ಎಂದು ದೂರಿದರು.
ರಾಜಕೀಯ ಪಕ್ಷಗಳ ನಡುವೆ ವಾಗ್ವಾದ, ಚರ್ಚೆ, ಆರೋಪ, ಪ್ರತ್ಯಾಪರೋದ ಸಹಜ, ಇದು ರಾಜಕೀಯಲಕ್ಕೆ ಸೀಮಿತವಾಗಿದ್ದರೇ ಯಾರದ್ದೂ ತಕರಾರಿಲ್ಲ. ಆದರೆ ಸಮುದಾಯದ ನಾಯಕಿಯಾಗಿರುವ ಮಹಿಳೆಯನ್ನು ಸಾರ್ವಜನಿಕವಾಗಿ ತೇಜೋವಧೆ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದ ಅವರು, ಸಿ.ಟಿ.ರವಿ ಇಂತಹ ವಿವಾದ ಸೃಷ್ಟಿಸುವಂತಹ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ, ಈ ಹಿಂದೆ ಅವರು ವಿಧಾನಪರಿಷತ್‌ನಲ್ಲೇ ನಿತ್ಯ ಸುಮಂಗಲಿಯರು ಎಂಬ ಪದ ಬಳಕೆ ಮಾಡಿ ಮಹಿಳೆಯರಿಗೆ ಅವಮಾನ ಮಾಡಿದ್ದರು. ಮಾತೆತ್ತಿದರೇ ಹಿಂದುತ್ವ, ಹಿಂದೂ ಸಂಸ್ಕೃತಿ ಎನ್ನುವ ಸಿ.ಟಿ.ರವಿ ಅವರಿಗೆ ಆರೆಸೆಸ್, ಸಂಘಪರಿವಾರ ಕಲಿಸಿರುವ ಪಾಠ ಏನೆಂಬುದು ಅವರ ಮಾತಿನಿಂದ ಅರ್ಥವಾಗುತ್ತಿದೆ. ಹಿಂದುತ್ವದ ಹೆಸರಿನಲ್ಲಿ ಆರೆಸೆಸ್, ಬಿಜೆಪಿ, ಸಂಘಪರಿವಾರ ತಮ್ಮ ಕಾರ್ಯಕರ್ತರಿಗೆ ಇಂತಹ ಸಂಸ್ಕೃತಿಹೀನರನ್ನಾಗಿ ಬೆಳೆಸುತ್ತಿರುವುದು ವಿಪರ್ಯಾಸ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಪಕ್ಷದವರು ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ರಾಹುಲ್‌ಗಾಂಧಿ ಬಗ್ಗೆ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಲಕ್ಷಿö್ಮÃ ಹೆಬ್ಬಾಳ್ಕರ್, ಅಪಘಾತ ಮಾಡಿ ಇಬ್ಬರನ್ನು ಕೊಂದಿರುವ ನಿಮ್ಮನ್ನು ಕೊಲೆಗಡುಕರು ಎಂದು ಸಿ.ಟಿ.ರವಿಗೆ ತಿರುಗೇಟು ನೀಡಿದ್ದಾರೆ. ಇಷ್ಟಕ್ಕೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಸಿ.ಟಿ.ರವಿ, ಅವಾಚ್ಯ ಶಬ್ಧ ಬಳಿಸಿ ನಿಂದಿಸಿದ್ದಾರೆ. ವಿಧಾನ ಪರಿಷತ್‌ನಂತಹ ಚಿಂತಕರ ಛಾವಡಿ ಎಂಬ ಗೌರವಕ್ಕೆ ಪಾತ್ರವಾಗಿರುವ ವೇದಿಕೆಯಲ್ಲಿ ಸಿ.ಟಿ.ರವಿ ಇಂತಹ ಹೇಳಿಕೆ ನೀಡಿರುವುದು ಖಂಡಿನೀಯ, ಸಂಸ್ಕೃತಿ ಹೀನರಿಂದ ಮಾತ್ರ ಇಂತಹ ಹೇಳಿಕೆ ನೀಡಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ.ರವಿ ನೀಡಿದ್ದ ಈ ಹೇಳಿಕೆಯಿಂದಾಗಿ ಜೈಲು ಪಾಲಾಗಿದ್ದರು. ನ್ಯಾಯಾಲಯ ಸದ್ಯ ಅವರಿಗೆ ಜಾಮೀನು ನೀಡಿದೆ, ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರಬುದ್ಧತೆ ಮರೆತು, ಸಿ.ಟಿ.ರವಿ ಮಹಾನ್ ಸಾಧನೆ ಮಾಡಿ ಬಂದಿರುವAತೆ ಸಂಭ್ರಮಾಚರಣೆ ಮಾಡಿರುವುದು ನಾಚಿಗೇಡಿನ ಸಂಗತಿ ಎಂದ ಅವರು, ಸಿ.ಟಿ.ರವಿಗೆ ವಿಪ ಸದಸ್ಯನಾಗಿರಲು ಯಾವ ಅರ್ಹತೆಯೂ ಇಲ್ಲ. ಈಗಾಗಲೇ ಸಿ.ಟಿ.ರವಿ ನಡವಳಿಕೆಗೆ ಬೇಸತ್ತ ಜನ ಅವರಿಂದ ಅಧಿಕಾರ ಕಿತ್ತುಕೊಂಡಿದ್ದಾರೆ. ಇಂತಹ ನಡವಳಿಕೆಯನ್ನು ಅವರು ಮತ್ತೆ ಮುಂದುವರಿಸಿದರೇ ಸಿ.ಟಿ.ರವಿ ಹಾಗೂ ಬಿಜೆಪಿ ಪಕ್ಷಕ್ಕೆ ನಾಡಿನ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಮುಖಂಡ ರವೀಶ್ ಮಾತನಾಡಿ, ಸಿ.ಟಿ.ರವಿ ಅವರಿಗೆ ತನ್ನ ನಾಲಗೆ ಮೇಲೆ ಹಿಡಿತವಿಲ್ಲ ಎಂಬುದು ಪದೇ ಪದೇ ರುಜುವಾತ ಮಾಡುತ್ತಿದ್ದಾರೆ, ಅವರಿಗೆ ಭಾಷೆಯ ಮೇಲೂ ಹಿಡಿತವಿಲ್ಲ. ಅವರೊಬ್ಬರ ಕನ್ನಡ ದ್ರೋಹಿ, ಹಿಂದೆ ನಿತ್ಯ ಸುಮಂಗಲಿಯರು ಎಂದು ಹೇಳಿದ್ದ ಈತ ಇಡೀ ನಾಡಿನ ಮಹಿಳೆಯರನ್ನು ಅವಮಾನಿಸಿದ್ದರು. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ವೀರಶೈವ ಮಹಾಸಭಾದ ಪದಾಧಿಕಾರಿ ಆಗಿದ್ದು, ಕೂಡಲೇ ಅವರು ಸಿ.ಟಿ.ರವಿ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಬೇಕು. ವಿಪ ಸಭಾಧ್ಯಕ್ಷರು ಸಿ.ಟಿ.ರವಿ ಸದಸ್ಯತ್ವವನ್ನು ರದ್ದು ಮಾಡಬೇಕು, ಬಿಜೆಪಿ ಪಕ್ಷದ ಮುಖಂಡರು ಇನ್ನಾದರೂ ಸಿ.ಟಿ.ರವಿಗೆ ಭಾಷೆಯೊಂದಿಗೆ ವಿವೇಕವನ್ನೂ ಕಲಿಸಬೇಕು ಎಂದರು.
Leave a comment