ಚಿಕ್ಕಮಗಳೂರು : ಜಿಲ್ಲೆಯಲ್ಲಿ ಭೂಪರಿವರ್ತನೆ (ಸೈಟ್) ಮಾಡಿಸಲು ಕಂದಾಯ ಇಲಾಖೆ,ಯೋಜನಾ ಇಲಾಖೆ ಎನ್,ಒ,ಸಿ ( no due certificate) ಪಡೆದರೆ ಸಾಕಿತ್ತು. ಇತ್ತೀಚೆಗೆ ಅರಣ್ಯ ಇಲಾಖೆಯ ಎನ್, ಒ,ಸಿ ಕೂಡಾ ಪಡೆಯಬೇಕು ಎಂದು ಅರಣ್ಯ ಸಚಿವರ ಸೂಚನೆ ಮೇರೆಗೆ ಭೂಪರಿವರ್ತನೆಗೆ ರೈತರು ಮತ್ತು ಬಡ ಜನರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಜನತೆ ದೂರ ತೊಡಗಿದ್ದಾರೆ.
ಕೇರಳದ ವೈನಾಡಿನಲ್ಲಿ ಮತ್ತು ರಾಜ್ಯದ ಕೆಲವು ಕಡೆ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ಅರಣ್ಯ ಸಚಿವರ ಸೂಚನೆ ಮೂಗಿಗಿಂತ ಮೂಗುತಿ ಭಾರ ಎನ್ನುವಂತಾಗಿದೆ. ಅಧಿಕಾರ ವಿಕೇಂದ್ರೀಕರಣ ಮಾಡುವ ಬದಲು ರೈತರು ಅದರಲ್ಲೂ ಬಡವರು ಇಲಾಖೆಯ ಕಛೇರಿ ಅಲೆದು ಅವರ ಬೇಕು ಬೇಡಗಳನ್ನು ಪುರೈಸುವುದರಲ್ಲಿ ಮನೆ ಕಟ್ಟುವುದಿರಲಿ ಗುಡಿಸಲಿನ್ನು ಕಟ್ಟಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಕಂದಾಯ ಇಲಾಖೆ ಮಾತೃ ಇಲಾಖೆ ಇಲ್ಲಿಯೇ ಎಲ್ಲಾ ಮಾಹಿತಿ ಸಿಗುತ್ತದೆ ಮತ್ತೆ ಅರಣ್ಯ ಇಲಾಖೆಯ ಎನ್,ಒ,ಸಿ ಪಡೆಯುವುದು ಏಕೆ ? ಸ್ಥಳೀಯ ಗಾರ್ಡ್ ಬಳಿ ನಂತರ ವಲಯ ಅರಣ್ಯಾಧಿಕಾರಿ, ಉಪ ವಲಯ ಅರಣ್ಯಧಿಕಾರಿ ಬಳಿ ಎನ್,ಒ,ಸಿ ಪಡೆಯಲು ಐದಾರು ಜೊತೆ ಚಪ್ಪಲಿ ಸವೆದು ಹೋಗುತ್ತವೆ ಅಂಗಿ ಜೇಬು ಅರಿದು ಹೋಗುತ್ತವೆ ಮತ್ತು ಇದರ ಸಹವಾಸ ಬೇಡ ಎನ್ನುವ ಪರಿಸ್ಥಿತಿ ಬರುತ್ತದೆ ಎಂದು ರೈತ ಮುಖಂಡರಾದ ಗುರುಶಾಂತಪ್ಪ ದೂರಿದ್ದಾರೆ ಅಲ್ಲದೇ ಇಂತಹ ಸೂಚನೆ ಕೂಡಲೇ ವಾಪಸ್ ಪಡೆಯಲು ಒತ್ತಯಿಸಿದ್ದಾರೆ.
ಸಾಮಾನ್ಯ ಜನ ಒಂದು ಅಥವಾ ಎರಡು ಗುಂಟೆ ಮತ್ತು ರೈತರು ತೋಟ ಹೊಲಗಳಲ್ಲಿ ಶೆಡ್ ನಿರ್ಮಾಣ ಮಾಡಲು ಸರ್ಕಾರ ಸಹಾಯ ಧನ ನೀಡುತ್ತದೆ ಇಂತಹ ಸಂದರ್ಭಗಳಲ್ಲಿ ಭೂಪರಿವರ್ತನೆ ಅರ್ಜಿ ಹಿಡಿದು ಬರಲು ತೊಡಕಾಗಿದ್ದು ಜಿಲ್ಲಾಡಳಿತ ಮತ್ತು ಅರಣ್ಯ ಸಚಿವರು ಗಮನಹರಿಸಿ ಕ್ರಮ ಕೈಗೊಳ್ಳದಿದ್ದರೆ ರೈತರಿಗೆ ಮತ್ತು ಬಡಜನರಿಗೆ ಕಷ್ಟ ವಿಕೇಂದ್ರೀಕರಣದ ಜೊತೆಗೆ ಜೇಬು ಹರಿದು ಕೊಳ್ಳುವ ಸ್ಥಿತಿ ನಿರ್ಮಾಣ ಮಾಡಿದಂತೆ ಆಗುತ್ತದೆ .ಜಿಲ್ಲೆಯ ಶಾಸಕರುಗಳು ವಿರೋಧ ಪಕ್ಷದವರು ಮತ್ತು ಹೋರಾಟಗಾರರು ರೈತರ ಮತ್ತು ಬಡ ಜನರ ನೆರವಿಗೆ ಬರಬೇಕಾಗಿದೆ.
Leave a comment