ಚಿಕ್ಕಮಗಳೂರು : ಎಸ್.ಎಂ ಕೃಷ್ಣ ನಿಧನಕ್ಕೆ ಬಾಳೆಹೊನ್ನೂರು ರಂಭಾಪುರಿ ಶ್ರೀಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಎಸ್ಎಂ ಕೃಷ್ಣ ಅವರ ಕೊಡುಗೆ ಅಪಾರವಾಗಿದ್ದು, ಅವರ ಕೊಡುಗೆಗಳು ಅವಿಸ್ಮರಣೀಯ. ರಂಭಾಪುರಿ ಮಠದ ಗುರು ವಿರಕ್ತರ ಸಮಾವೇಶಕ್ಕೆ ಎಸ್ಎಮ್ ಕೃಷ್ಣ ಆಗಮಿಸಿದ್ದರು. ಅವರ ಆಗಮನ ತೀವ್ರ ಸಂತೋಷ ತರಿಸಿತ್ತು. ಮಠದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದ ನೆನಪು ಇನ್ನೂ ಹಸಿರಾಗಿದೆ. ಅವರ ಸರಳ, ಸಜ್ಜನಿಕೆ, ಸೌಜನ್ಯದ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿತ್ತು. ಕೇಂದ್ರದ ಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಅವರ ಕಾರ್ಯ ಎಂದಿಗೂ ಸ್ಮರಣೀಯ. ಅವರ ಅಗಲಿಕೆಯ ದುಃಖವನ್ನು ತಡೆಯುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದೇವರು ಕರುಣಿಸಲಿ ಎಂದು ರಂಭಾಪುರಿ ಜಗದ್ಗುರು ಸಂತಾಪ ಸಲ್ಲಿಸಿದ್ದಾರೆ.
Leave a comment