ಬಾಳೆಹೊನ್ನೂರು: ಆನೆ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಪುಂಡಾನೆ ಸೆರೆಹಿಡಿಯುವಂತೆ ಒತ್ತಾಯಿಸಿ ವರ್ತಕರು ಸ್ವಯಂ ಪ್ರೇರಿತವಾಗಿ ಬಾಳೆಹೊನ್ನೂರು-ಖಾಂಡ್ಯವನ್ನು ಸಂಪೂರ್ಣ ಬಂದ್‌ಮಾಡಲಾಗಿದೆ.
ನಾಲ್ಕು ದಿನದ ಅಂತರದಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದರಿಂದ ಸ್ವಯಂಪ್ರೇರಿತವಾಗಿ ಬಾಳೆಹೊನ್ನೂರು ಬಂದ್‌ಗೆ ಸ್ಥಳೀಯರು ಕರೆನೀಡಿದ್ದು, ಬಂದ್ ಯಶಸ್ವಿಯಾಗಿದೆ.ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಂದ್ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಿಗೂ ರಜೆ ಘೋಷಿಸಲಾಗಿದೆ.
ಬಾಳೆಹೊನ್ನೂರಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಸಾವಪ್ಪಿದ್ದು, ಸರ್ವ ಪಕ್ಷಗಳ ನೇತೃತ್ವದಲ್ಲಿ ಖಾಂಡ್ಯದಲ್ಲಿ ರಾಜ್ಯಹೆದ್ದಾರಿ ರಸ್ತೆ ತಡೆನಡೆಸಿ ಪ್ರತಿಭಟನೆ ನಡೆಸಿದ್ದು, ಕಿ.ಮೀ.ಗಟ್ಟಲೆ ವಾಹನ ಸಂಚಾರ ಸ್ಥಗಿತಗೊಂಡಿತು.ಪ್ರತಿಭಟನಾಕಾರರು ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದರು.
ಬಾಳೆಹೊನ್ನೂರು ಅರಣ್ಯ ವಲಯ ಕಚೇರಿ ಮುಂದೆ ಸ್ಥಳೀಯರ ಪ್ರತಿಭಟನೆ ನಡೆಸಿದ್ದು, ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಸಂಸದ ಕೋಟಶ್ರೀನಿವಾಸಪೂಜಾರಿ ಅವರುಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟುಹಿಡಿದರು.
ಮೃತದೇಹವನ್ನು ಅರಣ್ಯ ಇಲಾಖೆ ಮುಂದಿಟ್ಟು ಪ್ರತಿಭಟನೆ ನಡೆಸಲು ಸಾರ್ವಜನಿಕರು ತೀರ್ಮಾನಿಸಿದರು. ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್.ಜೀವರಾಜ್, ಜೆಡಿಎಸ್ ರಾಜ್ಯ ಉಪಾದ್ಯಕ್ಷ ಸುಧಾಕರ್ ಸೇರಿ ಹಲವರು ಉಪಸ್ಥಿತರಿದ್ದು, ಸರ್ವ ಪಕ್ಷ ಮತ್ತು ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು.
ಜಿಲ್ಲೆಯ ಎನ್.ಆರ್.ಪುರ ತಾಲೂಕು ಬಾಳೆಹೊನ್ನೂರಲ್ಲಿ ರೈತರ ಉಗ್ರ ಹೋರಾಟ ಹಿನ್ನೆಲೆಯಲ್ಲಿ ರೈತರು ಬೀದಿಗಿಳಿಯುತ್ತಿದ್ದಂತೆ ಆನೆ ಸೆರೆಗೆ ಮುಂದಾದ ಸರ್ಕಾರ ರೈತರ ಪ್ರತಿಭಟನೆ ಮುಗಿಯುವ ಮೊದಲೇ ಕುಮ್ಕಿ ಆನೆಗಳ ಆಗಮನವಾಗಿದೆ.
ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಬಿಡಾರದಿಂದ ನಾಲ್ಕು ಆನೆಗಳ ಬಂದಿದ್ದು, ತಕ್ಷಣ ಆನೆ ಸೆರೆಗೆ ಮುಂದಾಗು ವುದಾಗಿ ಹೇಳಿಕೆ ನೀಡಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸೋಮವಾರ ಮಧ್ಯಾಹ್ನದಿಂದಲೇ ಆನೆ ಕಾರ್ಯಾಚರಣೆ ಆರಂಭಗೊಂಡಿದೆ.
ರೈತರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿರುವುದು ಇದೇ ಮೊದಲು ಅನ್ನಿಸುತ್ತಿದೆ.ಬಾಳೆಹೊನ್ನೂರಿನಲ್ಲಿ ಇಂದು ಮಧ್ಯಾಹ್ನ ಪುಂಡಾನೆ ಸೆರೆಹಿಡಿಯಲು ಸಾಕು ಆನೆಗಳಿಂದ ಕಾರ್ಯಾಚರಣೆ ಆರಂಭಗೊಂಡಿದ್ದು, ಕೊಡಗು, ಮೈಸೂರು, ಶಿವಮೊಗ್ಗದಿಂದ ವೈದ್ಯರ ತಂಡ ಆಗಮಿಸಿದೆ. ಆನೆ ಸೆರೆಗೆ ಅರಣ್ಯ ಇಲಾಖೆ, ಇಟಿಎಫ್ ಸಿಬ್ಬಂದಿ ಸನ್ಮದ್ಧವಾಗಿದ್ದಾರೆ.
Complete shutdown in Balehonnur-Khandya to condemn wild elephant attack
Leave a comment