ಚಿಕ್ಕಮಗಳೂರು: ಪಿಯುಸಿ ಫಲಿತಾಂಶದಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಶೇಕಡವಾರು ಉತ್ತಮ ಸಾಧನೆ ಮಾಡಿದೆ, ಕಳೆದ ವರ್ಷ ಶೇಕಡ 79.56ರಷ್ಟು ಫಲಿತಾಂಶ ಪಡೆದು ಚಿಕ್ಕಮಗಳೂರು ಈ ಬಾರಿ ಶೇಕಡ 90.80ರಷ್ಟು ಫಲಿತಾಂಶ ಬಂದಿದೆ
ಜಿಲ್ಲೆಯಲ್ಲಿ ಒಟ್ಟು 8,149 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 7,399 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಜಿಲ್ಲೆಗೆ ಶೇ. 90.80ರಷ್ಟು ಫಲಿತಾಂಶ ಬಂದಿದೆ. ಶೇಕಡವಾರು ಉತ್ತಮ ಫಲಿತಾಂಶ ಬಂದಿದ್ದರೂ ಜಿಲ್ಲಾ ಮಟ್ಟದ ಫಲಿತಾಂಶದಲ್ಲಿ ಕಾಫಿನಾಡು ಒಂದು ಸ್ಥಾನ ಕುಸಿತಗೊಂಡು ಹತ್ತನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಈ ಬಾರಿ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ 2,044 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು ಇದರಲ್ಲಿ 1,682 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ಕಲಾ ವಿಭಾಗದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಶೇ. 82.29 ರಷ್ಟು ಫಲಿತಾಂಶ ಬಂದಿದೆ. ಇನ್ನು ವಾಣಿಜ್ಯ ವಿಭಾಗದಲ್ಲಿ 2,688 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು ಇದರಲ್ಲಿ 2,486 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಶೇಕಡ 92.49 ರಷ್ಟು ಫಲಿತಾಂಶ ಬಂದಿದೆ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ, ಇಂತಿನಿಂದಲೂ ವಿಜ್ಞಾನ ವಿಭಾಗದಲ್ಲಿ ತನ್ನ ಪ್ರಾಬಲ್ಯ ತೋರುತ್ತಲೇ ಬಂದಿದೆ. ಈ ಬಾರಿ ಪಿಯುಸಿ ಫಲಿತಾಂಶದಲ್ಲಿಯೂ ಸಹ ವಿಜ್ಞಾನ ವಿಭಾಗದಲ್ಲಿ ಚಿಕ್ಕಮಗಳೂರು ಜಿಲ್ಲೆ ಶೇ.94.56ರಷ್ಟು ಫಲಿತಾಂಶ ಪಡೆದಿರುವುದು ವಿಶೇಷ. ವಿಜ್ಞಾನ ವಿಭಾಗದಲ್ಲಿ 3,417 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇವರಲ್ಲಿ 3,231 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಮೊದಲ ಬಾರಿಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಶೇಕಡವಾರು ಆಧಾರದ ಮೇಲೆ ಚಿಕ್ಕಮಗಳೂರು ಜಿಲ್ಲೆ ಹತ್ತನೇ ಸ್ಥಾನದಲ್ಲಿದ್ದರೂ, ಪುನರಾವರ್ತಿತ ಹಾಗೂ ಖಾಸಗಿಯಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ ಪರಿಗಣಿಸಿದರೆ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿಯೇ 7ನೇ ಸ್ಥಾನದಲ್ಲಿದೆ.
Chikmagalur district scores 90.80% in second PUC
Leave a comment