Home namma chikmagalur chikamagalur ಏಕಲವ್ಯ ವಸತಿಶಾಲೆ ಪ್ರಿನ್ಸಿಪಾಲ್ ಮೇಲೆ ಜಾತಿನಿಂದನೆ ಪ್ರಕರಣ ದಾಖಲು
chikamagalurHomeLatest Newsnamma chikmagalur

ಏಕಲವ್ಯ ವಸತಿಶಾಲೆ ಪ್ರಿನ್ಸಿಪಾಲ್ ಮೇಲೆ ಜಾತಿನಿಂದನೆ ಪ್ರಕರಣ ದಾಖಲು

Share
Share

ಚಿಕ್ಕಮಗಳೂರು: ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿ ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ
ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ನಿವಾಸಿ ರಮೇಶ್ ನಾಯ್ಕ ಎಂಬುವವರ ಮಗ ಏಕಲವ್ಯ ಮಾದರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇತರೆ ವಿದ್ಯಾರ್ಥಿಗಳ ನಡುವೆ ನಡೆದ ಸಣ್ಣ ಜಗಳದ ಹಿನ್ನೆಲೆಯಲ್ಲಿ ಶಾಲೆಯ ಸಿಬ್ಬಂದಿಯಿಂದಲೇ ಕ್ರೂರ ಹಲ್ಲೆ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಶಾಲೆಯ ಲ್ಯಾಬ್ ಆಟೆಂಡರ್ ಶುಭಂ ಚೋದರಿ ಹಾಗೂ ಪ್ರಿನ್ಸಿಪಾಲ್ ಸತೀಶ್ ಪ್ರಸಾದ್ ಜೈಸ್ವಾಲ್ ಅವರು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿರುವುದಲ್ಲದೆ ಜಾತಿನಿಂದನೆ ಮಾಡಿದ್ದಾರೆ ಎಂದು ಪೋಷಕರು ದೂರಿದ್ದಾರೆ.

ಈ ಹಲ್ಲೆಯ ತೀವ್ರತೆಗೆ ಬಾಲಕನ ಬಲಗೈ ಮುಷ್ಟಿಯ ಮೂಳೆಗಳು ಮುರಿದು ಹೋಗಿದ್ದು, ಪ್ರಸ್ತುತ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಣಕಲ್‌ನ ಸಾಯಿ ಕೃಷ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಎಕ್ಸರೇ ಪರೀಕ್ಷೆಯ ಮೂಲಕ ಮೂಳೆ ಮುರಿತವನ್ನು ಖಚಿತಪಡಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಮಾರ್ಚ್ ತಿಂಗಳಲ್ಲಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿರುವುದರಿಂದ, ಬಲಗೈಗೆ ತೀವ್ರ ಪೆಟ್ಟಾಗಿರುವ ಕಾರಣ ಬಾಲಕನಿಗೆ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ. ಈ ಘಟನೆಯಿಂದ ಮಗನ ಭವಿಷ್ಯಕ್ಕೆ ತೊಂದರೆಯಾಗಿದ್ದು, ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಉಳಿದ ಪರೀಕ್ಷೆಗಳನ್ನು ಬರೆಯಲು ಮಗನಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ರಮೇಶ್ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Caste abuse case registered against Eklavya Residential School Principal

Share

Leave a comment

Leave a Reply

Your email address will not be published. Required fields are marked *

Don't Miss

ಟ್ರಾಫಿಕ್ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ನ್ಯಾಯಾಲಯ ಕಮ್ಯುನಿಟಿ ಸೇವೆ ಶಿಕ್ಷೆ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ವಿಶಿಷ್ಟ ರೀತಿಯ ಶಿಕ್ಷೆ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಟ್ರಾಫಿಕ್ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ್ದ ವ್ಯಕ್ತಿಗೆ ನ್ಯಾಯಾಲಯ ಕಮ್ಯುನಿಟಿ ಸೇವೆ ಶಿಕ್ಷೆ ನೀಡಿದೆ. ಕಡೂರು...

ಕಾಂಗ್ರೆಸ್ ಮುಖಂಡ ರಾಹಿಲ್ ಷರೀಫ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಧಾನಿಗೆ ಪತ್ರ

ಚಿಕ್ಕಮಗಳೂರು: ಕಾಂಗ್ರೆಸ್ ಮುಖಂಡನಿಂದಲೇ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಕಾಂಗ್ರೆಸ್‌ನ ದಲಿತ ಮಹಿಳಾ ನಾಯಕಿ ಮತ್ತು ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಚೇತನಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇ-ಮೇಲ್ ಮೂಲಕ...

Related Articles

ಅಪ್ರಾಪ್ತ ಪ್ರೇಮಿಗಳ ಪ್ರಕರಣ-ಲವ್ ಜಿಹಾದ್’ ಆರೋಪ

ಚಿಕ್ಕಮಗಳೂರು:  ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಈಗ ಅನ್ಯಕೋಮಿನ ಅಪ್ರಾಪ್ತ ಪ್ರೇಮಿಗಳ ಪ್ರಕರಣವೊಂದು ಭಾರೀ ಸದ್ದು...

ವಿಮಾನ ಬಂತು ವಿಮಾನ ಅಚ್ಚರಿ ! ಆತಂಕ !! ಅನುಮಾನ ?

ಚಿಕ್ಕಮಗಳೂರು: ವಿಮಾನ ಹಾರಾಟ ನೋಡಿ ಮಕ್ಕಳಿಗೆ ಖುಷಿಯೋ ಖಷಿ, ಕೆಲವರಿಗೆ ಆತಂಕ ,ಹಿರಿಯರಿಗೆ ಅನುಮಾನ ಕಳೆದ...

ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ತಿದ್ದುಪಡಿ ಮಸೂದೆ ಹಿಂದಕ್ಕೆ ಪಡೆಯಲು ಮನವಿ

ಚಿಕ್ಕಮಗಳೂರು: ಲೋಕಸಭೆಯಲ್ಲಿ ಇತ್ತೀಚೆಗೆ ಮಂಡಿಸಲಾದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ತಿದ್ದುಪಡಿ ಮಸೂದೆಯನ್ನು ಕ್ವಿಯರ್ ಹಕ್ಕುಗಳ ಸಂಸ್ಥೆ ಹಾಗೂ...

ಜಿಲ್ಲಾ ಅಗ್ನಿಶಾಮಕ ಅಧಿಕಾರಿಗೆ ಸಿಎಂ ಪದಕ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಎನ್. ಪ್ರವೀಣ್ ಅವರು ಈ ಬಾರಿಯ ಮುಖ್ಯಮಂತ್ರಿ ಚಿನ್ನದ...