ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಸ್ಥಾನಕ್ಕೆ ಸಿ.ಟಿ.ರವಿ ಮತ್ತು ಡಿ.ಎಸ್.ಸುರೇಶ್ ಕಣ್ಣಿಟ್ಟು ಕಾಯುತ್ತಿದ್ದಾರೆ.ಫೆಬ್ರವರಿ ಒಂದನೇ ತಾರೀಖು ಚುನಾವಣೆ ನಡೆಯಲಿದ್ದು ಇದು ಬಿಜೆಪಿಯ ಏರಿಳಿತಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಯಾರಿಗೆ ಅಧ್ಯಕ್ಷ ಸ್ಥಾನ ದೊರೆಯಲಿದೆ ಎಂಬ ಕುತೂಹಲ ಕೆರಳಿಸಿದೆ.
ಈಗಾಗಲೇ ನಿರಂಜನ್ ಸೋಲಿಸಿರುವ ಸಿ.ಟಿ.ರವಿ ವಿರುದ್ಧ ಕೊತ,ಕೊತ ಎನ್ನುತ್ತಿರುವ ಜನರಿಗೆ ಮತ್ತಷ್ಟು ಸಿಟ್ಟು ತರುವಂತೆ ಅಧ್ಯಕ್ಷ ಪಟ್ಟಕ್ಕೆ ಬಂದು ಕುಳಿತರೆ ಮುಂದಿನ ಚುನಾವಣೆಗೆ ಪೆಟ್ಟು ಖಚಿತ ಎನ್ನಲಾಗುತ್ತದೆ. ಇವರಿಗೆ ಎಲ್ಲಾ ಸ್ಥಾನಮಾನ ಬೇಕಾ ಆಗದರೆ ರಾಜಕೀಯ ಹೊಸ ದಿಕ್ಕಿಗೆ ಹೊರಳಲಿದೆ.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಚುನಾವಣೆಯಲ್ಲಿ ಜಾತಿ ಭೂತ ಎದ್ದು ನಿಂತಿತ್ತು.ಮತ್ತೊಮ್ಮೆ ಈ ಭೂತ ಸ್ಪಷ್ಟವಾಗಿ ಒಕ್ಕಲಿಗರು ಮತ್ತು ಲಿಂಗಾಯತರ ಮಧ್ಯೆ ಬಿಜೆಪಿಯಲ್ಲಿ ತಲೆ ಎತ್ತಿರುವುದು ಲಾಭ,ನಷ್ಟದ ಲೆಕ್ಕಾಚಾರಗಳು ನಡೆಯುತ್ತಿವೆ.
ಕಾಂಗ್ರೆಸ್ ಸರ್ಕಾರ ಡಿ.ಸಿ.ಸಿ ಬ್ಯಾಂಕ್ ಚುನಾವಣೆ ನಡೆಸದಂತೆ ತಡೆ ಒಡ್ಡಿದಾಗ ಬಂಡವಾಳ ಸುರಿದವರು ಬೆಳ್ಳಿ ಪ್ರಕಾಶ್ ಹೇಗೂ ಅಧಿಕಾರ ಉಳಿಸಿಕೊಂಡು ಹುಳುಗಳನ್ನು ಬಿಟ್ಟುಕೊಂಡಂತೆ ಆಗಿದೆ ಎಂದು ನಿರ್ದೇಶಕರೊಬ್ಬರ ಅಳಲು ಈಗ ನೋಡಿದರೆ ನಾನು,ನಾನು ಎಂದು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮತ್ತು ಹಾಲಿ ಅಧ್ಯಕ್ಷ ಡಿ.ಎಸ್.ಸುರೇಶ್ ಮಧ್ಯೆ ಜಟಾಪಟಿ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇವರುಗಳ ಹಗ್ಗ ಜಗ್ಗಾಟದಿಂದ ಬಿಜೆಪಿಯಲ್ಲಿ ಒಡಕಿನ ವಾತವರಣ ಉಂಟಾಗಿದ್ದು ಜೀವರಾಜ್ ಕಡೆ ನಾಲ್ಕು ಸದಸ್ಯರು ಇದ್ದು ಇವರ ನಿರ್ಣಯ ಮುಖ್ಯವಾಗುತ್ತದೆ.
ಜೀವರಾಜ್ ಎಂದು ಸಿ.ಟಿ.ರವಿ ಪರ ಇಲ್ಲ ಎಂಬುದು ಎಲ್ಲರಿಗೂ ಗೊತ್ತು ಹೀಗಾಗಿ ಡಿ.ಎಸ್.ಸುರೇಶ್ ಆಟ ಆಡುತ್ತಿದ್ದಾರೆ. ಚುನಾವಣೆ ಇಷ್ಟು ಕಾವೇರಲು ಮುಖ್ಯ ಕಾರಣ ಬ್ಯಾಂಕ್ ಸಿಬ್ಬಂದಿ ನೇಮಕಾತಿ ನೆನೆಗುದಿಗೆ ಬಿದ್ದಿದೆ. ಇದರ ಮೇಲೆ ಎಲ್ಲರ ಕಣ್ಣು.
ನೇಮಕಾತಿಗೆ ಈಗಾಗಲೇ ಬಂಡವಾಳ ಸುರಿದವರು ಬಾಯಿಗೆ ಕೋಲು ತುರುಕಲು ಬಂದರೆ ಬಿಡುವ ಪ್ರಶ್ನೆ ಇಲ್ಲ ಎಂದು ಸೆಡ್ಡು ಹೊಡೆಯುವ ಅಂಕಣದಲ್ಲಿ ಸಿ.ಟಿ.ಜಾಣ್ಮೆ ಅಟ ಆಡಿದರೆ ಬಾಚವ್ ಇಲ್ಲದಿದ್ದರೆ ಮುಂದಿನ ರಾಜಕೀಯ ಲೆಕ್ಕಾಚಾರಗಳು ತಲೆ ಕೆಳಗೆ ಆಗಬಹುದು ಎಂದು ವಿಶ್ಲೇಷಣೆ ನಡೆಯುತ್ತಿವೆ.
C.T.Ravi V/S D.S.Suresh
Leave a comment