ಚಿಕ್ಕಮಗಳೂರು : ಭದ್ರಾ ಮೇಲ್ದಂಡೆ ನೀರಿನ ರಭಸಕ್ಕೆ ಅಬ್ಬಿನಹೊಳಲು ಗ್ರಾಮದ ಸೇತುವೆ ಕುಸಿತದಿಂದ ಐದಾರು ಹಳ್ಳಿಯವರು ದ್ವೀಪದ ಒಳಗೆ ಸೇರಿಕೊಂಡಿದ್ದಾರೆ ಎಂದು ಅ ಭಾಗದ ಜನ ದೂರುತ್ತಿದ್ದಾರೆ.
ಇಂದು ಸಂಜೆ ಏಳು ಗಂಟೆಗೆ ಸೇತುವೆ ಕುಸಿದಿದೆ ಯಾವುದೋ ಕಾಲದಲ್ಲಿ ಕಟ್ಟಿರುವ ಸೇತುವೆ ಬಗ್ಗೆ ಗಮನ ಹರಿಸದ ಬೇಜವಾಬ್ದಾರಿ ಇಂಜಿನಿಯರ್ ಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಳೆಯ ಸೇತುವೆಯಲ್ಲಿ ನೀರು ಹರಿಸುತ್ತಿರುವ ಪರಿಣಾಮದಿಂದಾಗಿ ಜನರು ಪರುದಾಡುವಂತಾಗಿದೆ.
ಅಬ್ಬಿನಹೊಳಲು ,ಮೆಣಸಿನಕಾಯಿ ಹೊಸಳ್ಳಿ, ಬಂಗನಗಟ್ಟೆ ಮತ್ತು ಶಿವನಿ ಸುತ್ತಮುತ್ತಲಿನ ಜನ, ಜಾನುವಾರು ಮತ್ತು ವಾಹನಗಳು ಸಂಚಾರ ಮಾಡಲು ಸಾಧ್ಯವಿಲ್ಲ.
ಬಯಲು ಸೀಮೆಯಲ್ಲೂ ದ್ವೀಪ ನಿರ್ಮಾಣ ಮಾಡಿರುವ ಬೃಹಸ್ಪತಿ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರಿಗೆ ಜನ ಥೂ ಎಂತ ಉಗಿಯುತ್ತಿದ್ದಾರೆ. ಬೆಳಗ್ಗೆ ಮಕ್ಕಳು ಮತ್ತು ಕಾಲೇಜ್ ಗೆ ಹೋಗಲು ಆಗದೆ ಮತ್ತು ರೈತರು ಹೊಲ ಮನೆಗಳಿಗೆ ಹೋಗಿ ಬರದಂತೆ ಆಗಿದೆ ಉಪಮುಖ್ಯಮಂತ್ರಿ ಶಿವಕುಮಾರ್ ಈ ಸ್ಥಳಕ್ಕೆ ಭೇಟಿ ಕೊಟ್ಟು ಒಂದು ವರ್ಷ ತುಂಬಿಲ್ಲ ಇಂತಹ ಅನಾಹುತ ನಡೆದಿದೆ.ಮಾನಮರ್ಯಾದೆ ಇದ್ದರೆ ತಕ್ಷಣವೇ ಕ್ರಮ ಕೈಗೊಂಡು ಜನರಿಗೆ ಆಗಿರುವ ತೊಂದರೆ ನಿವಾರಿಸಲಿ.
Leave a comment