ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಸಾಲು ಸಾಲು ಅನಾಹುತಗಳ ಸರಣಿಗೆ ಕಾರಣವಾಗುತ್ತಿದೆ. ಒಂದೇ ವಾರದ ಅಂತರದಲ್ಲಿ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಭದ್ರಾ ನದಿಯಲ್ಲಿ ಇಬ್ಬರು ಯುವಕರು ಸೇರಿ ನಾಲ್ಕು ಮೃತದೇಹ ಪತ್ತೆಯಾಗಿದೆ.
ಮೂರ್ನಾಲ್ಕು ದಿನಗಳ ದಿನಗಳ ಹಿಂದೆ ಅದೇ ಭದ್ರಾ ನದಿಯಲ್ಲಿ 10ನೇ ತರಗತಿ ಬಾಲಕನ ಮೃತದೇಹ ಪತ್ತೆಯಾಗಿತ್ತು. ವಾರದ ಹಿಂದೆ ಇದೇ ನದಿಯಲ್ಲಿ ರಾಜಸ್ಥಾನದ ಇಬ್ಬರು ಸಾವನ್ನಪ್ಪಿರು. ಇಂದು ಮತ್ತದೇ ಭದ್ರಾ ನದಿಯಲ್ಲಿ 33 ವರ್ಷದ ಸುಹಾನ್ ಎಂಬ ಯುವಕನ ಶವ ಕೂಡ ಪತ್ತೆಯಾಗಿದೆ.
ಕಳಸ ತಾಲೂಕಿನ ರುದ್ರಪಾದ ಗ್ರಾಮದ ಬಳಿ ನದಿಯಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಕಳಸ ಠಾಣೆಯ ಪೊಲೀಸರಿಗೆ ಹಾಗೂ ಶೌರ್ಯ ವಿಪತ್ತು ತಂಡದ ಸದಸ್ಯರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಶೌರ್ಯ ವಿಪತ್ತು ಸದಸ್ಯರು ಹಾಗೂ ಕಳಸ ಪೊಲೀಸರು ಮೃತದೇಹವನ್ನು ಮೇಲೆತ್ತಿದಾಗ ಮೃತ ಯುವಕ ಮೂಡಿಗೆರೆ ತಾಲೂಕಿನ ಬಣಕಲ್ ನಿವಾಸಿ ಸುಹಾಸ್ (33) ಎಂದು ತಿಳಿದು ಬಂದಿದೆ.
ಸುಹಾಸ್ ನಾಪತ್ತೆಯಾಗಿರುವ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಪತ್ತೆಯಾದ ಬಳಿಕ ಈತನ ಮೊಬೈಲ್ ಕಳಸ ಟವರ್ ವ್ಯಾಪ್ತಿಯಲ್ಲಿ ಸ್ವೀಚ್ ಆಫ್ ಆಗಿತ್ತು. ಇದೀಗ ಯುವಕ ಸುಹಾಸ್ ಶವ ಭದ್ರಾ ನದಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಭದ್ರಾನದಿಯಲ್ಲಿ ಪತ್ತೆಯಾದ ಸುಹಾಸ್ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.ಆತ್ಮಹತ್ಯೆಯೋ ಅಥವ ಕೊಲೆಯೋ ಎಂಬ ಅನುಮಾನ ಉಂಟಾಗಿದೆ.
ಕಳೆದ ವಾರ ಕೂಡ ಭದ್ರಾ ನದಿಯ ವಸಿಷ್ಠ ತೀರ್ಥದಲ್ಲಿ ರಾಜಸ್ಥಾನ್ ಮೂಲದ ಇಬ್ಬರು ಪ್ರವಾಸಿಗರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅಲ್ಲದೇ ಐದು ದಿನದ ಹಿಂದಷ್ಟೇ ಇದೇ ಭದ್ರಾ ನದಿಯಲ್ಲಿ ಶ್ರೇಯಸ್ ಎಂಬ 10ನೇ ತರಗತಿ ವಿದ್ಯಾರ್ಥಿಯ ಶವವೂ ಪತ್ತೆಯಾಗಿತ್ತು.
ಒಂದು ವಾರದ ಅಂತರದಲ್ಲಿ ಇಬ್ಬರು ಮುಳುಗಿ ಜೀವ ಕಳೆದು ಕೊಂಡರೆ, ಮತ್ತಿಬ್ಬರು ಅನುಮಾನಸ್ಪದವಾಗಿ ಭದ್ರಾ ನದಿಯಲ್ಲಿ ಶವಗಳು ಪತ್ತೆಯಾಗಿರುವುದು ಸ್ಥಳೀಯರನ್ನ ಬೆಚ್ಚಿ ಬೀಳಿಸಿದೆ. ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.
Body of a young man found in a river near Rudrapada village
Leave a comment