ಚಿಕ್ಕಮಗಳೂರು : ಹೈಕೋರ್ಟ್ ಜಾಮೀನು ಪಡೆದ ನಂತರ ತವರು ಜಿಲ್ಲೆಗೆ ಆಗಮಿಸುತ್ತಿರುವ ಸಿ.ಟಿ ರವಿಗೆ ಅದ್ಧೂರಿ ಸ್ವಾಗತ ಕೋರಲು ಬಿಜೆಪಿ ತಯಾರಿ ಮಾಡಿಕೊಂಡಿದೆ,
ಬಿಜೆಪಿ ಜಿಲ್ಲಾ ಘಟಕದಿಂದ ಭರ್ಜರಿ ಸ್ವಾಗತ ಕೋರಲು ಕಾರ್ಯಕರ್ತರು ಸಜ್ಜುಗೊಂಡಿದ್ದಾರೆ.
ಹೈಕೋರ್ಟ್ ಆದೇಶದ್ವನಯ ಪೊಲೀಸರಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ
ಪಕ್ಷದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಸ್ವಾಗತಕ್ಕೆ ಕಾರ್ಯಕರ್ತರು ರೆಡಿ ಆಗಿದ್ದಾರೆ, ಗಡಿಭಾಗ ಮಾಗಡಿ ಹ್ಯಾಂಡ್ ಪೋಸ್ಟ್ ನಿಂದ ನಗರಕ್ಕೆ ಎಂಟ್ರಿ ಕೊಡುವ ಮಾರ್ಗದಲ್ಲಿ ಸ್ವಾಗತಕ್ಕೆ ತಯಾರಿ ಮಾಡಿಕೊಳ್ಳ ಲಾಗುತ್ತಿದೆ, ನಗರದಿಂದ 10 ಕಿ.ಮೀ. ದೂರದ ಮಾಗಡಿ ಹ್ಯಾಂಡ್ ಪೋಸ್ಟ್ ನಿಂದಲೇ ಸ್ವಾಗತ ಮಾಡಲಿದ್ದಾರೆ ಕಾರ್ಯಕರ್ತ ಪಡೆ,
ನಗರದ ಹಿರೇಮಗಳೂರಿನಿಂದ ಓಪನ್ ಜೀಪ್ ನಲ್ಲಿ ಸಿ.ಟಿ ರವಿ ಮನೆಗೆವರೆಗೂ ರೋಡ್ ಶೋ ಸಾಗಲಿದೆ, ಸುಮಾರು 4 ಕಿ.ಮೀ. ಓಪನ್ ಜೀಪ್ ನಲ್ಲಿ ಮೆರವಣಿಗೆ ಮೂಲಕ ಕರೆತರಲು ಪ್ಲಾನ್ ಮಾಡಿಕೊಂಡಿದ್ದಾರೆ. ಜೊತೆಗೆ ಕಾರ್ಯಕರ್ತರು ಬೈಕ್, ಕಾರುಗಳ ಮೂಲಕ ಕರೆತರಲು ಪ್ಲಾನ್ ಮಾಡಿದ್ದಾರೆ. ರಾತ್ರಿ 10 ಗಂಟೆಗೆ ಚಿಕ್ಕಮಗಳೂರು ಗಡಿಗೆ ರವಿ ಆಗಮಿಸಲಿದ್ದು, ಭವ್ಯ ಸ್ವಾಗತದ ಮೂಲಕ ಕರೆತರಲು ಬಿಜೆಪಿ ಸಿದ್ಧತೆ ನಡೆಸಿದೆ.
Leave a comment