Home namma chikmagalur ಶಾಸಕ ಜಿ.ಹೆಚ್. ಶ್ರೀನಿವಾಸ್ ವಿರುದ್ಧ ತೇಜೋವಧೆಗಾಗಿ ಬಿಜೆಪಿ ಆರೋಪ
namma chikmagalurHomeLatest NewsTarikere

ಶಾಸಕ ಜಿ.ಹೆಚ್. ಶ್ರೀನಿವಾಸ್ ವಿರುದ್ಧ ತೇಜೋವಧೆಗಾಗಿ ಬಿಜೆಪಿ ಆರೋಪ

Share
Share

ತರೀಕೆರೆ : ಕ್ಷೇತ್ರದ ನೋವು-ನಲಿವುಗಳನ್ನು ಅರ್ಥಮಾಡಿಕೊಂಡು ಎಲ್ಲಾ ವರ್ಗದವರ ವಿಶ್ವಾಸದೊಂದಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಿರುವ ಶಾಸಕ ಜಿ.ಹೆಚ್. ಶ್ರೀನಿವಾಸ್ ವಿರುದ್ಧ ಅವರ ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳಲಾಗದೆ ಅನಾವಶ್ಯಕವಾಗಿ ಅವರ ವರ್ಚಸ್ಸನ್ನು ತೇಜೋವಧೆ ಮಾಡುವ ಉದ್ದೇಶದಿಂದ ತಾಲ್ಲೂಕು ಬಿಜೆಪಿಯ ಕೆಲವು ಮುಖಂಡರು ಮಾಡಿರುವ ಆರೋಪ ಶುದ್ಧ ಸುಳ್ಳಿನಿಂದ ಕೂಡಿದೆ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎನ್.ಜಿ. ರಮೇಶ್ ಹೇಳಿದರು.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಆರೋಪ ಮಾಡಿರುವ ೭೯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ನಮ್ಮ ಜಿಲ್ಲೆಗಳಲ್ಲಿ ಬರುವ ೩೬೭ ಸಣ್ಣ ನೀರಾವರಿ ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ. ೫೦ ರಷ್ಟು ನೀರು ತುಂಬಿಸುವ ಸಮಗ್ರ ಪರಿಷ್ಕುತ ಯೋಜನಾ ವರದಿಗೆ ಸರ್ಕಾರವು ರೂ. ೧೨,೩೪೦ ಕೋಟಿ ಮೊತ್ತಕ್ಕೆ ದಿನಾಂಕ : ೦೬.೦೩.೨೦೧೫ ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ದಿನಾಂಕ ೦೫.೦೧.೨೦೧೮ ರಂದು ಅಜ್ಜಂಪುರದಲ್ಲಿ ಗುದ್ದಲಿ ಪೂಜೆ ನೇರವೇರಿಸಿ ಈ ಏತಾ ನೀರಾವರಿ ಯೋಜನೆಯನ್ನು ಎರಡು ಪ್ಯಾಕೇಜ್ಗಳಾಗಿ ವಿಂಗಡಿಸಿ, ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು ಎಂದರು.

ತರೀಕೆರೆ ಏತ ನೀರಾವರಿ ಯೋಜನೆ ಪ್ಯಾಕೇಜ್-೦೨ ರ ಕಾಮಗಾರಿಯನ್ನು ದಿನಾಂಕ : ೨೪.೦೮.೨೦೧೭ ರಂದು ಟೆಂಡರ್ ಆಹ್ವಾನಿಸಿ, ಟರ್ನ್ ಕೀ ಆಧಾರದ ಮೇಲೆ ಟೆಂಡರಿಗಿಟ್ಟ ಮೊತ್ತ ರೂ. ೪೮೧.೦೬ ಕೋಟಿಗಳಿಗೆ ಶೇ. ೯.೦೦ ರಷ್ಟು ಹೆಚ್ಚು ಅಂದರೆ ರೂ. ೫೨೪.೩೬ ಕೋಟಿಗಳಿಗೆ ಮೆಘಾ ಇಂಜಿನಿಯರಿಂಗ್-ನೆಟಾಫೀಮ್ ಇರಿಗೇ?ನ್ (ಜೆವಿ) ಬೆಂಗಳೂರು ಇವರಿಗೆ ವಿಭಾಗ ಕಛೇರಿ ಒಪ್ಪಂದ ಪತ್ರ ಸಂಖ್ಯೆ ೨೮/೨೦೧೭-೧೮, ದಿನಾಂಕ ೧೫.೦೩.೨೦೧೮ ರಂದು ಕಾಮಗಾರಿಯನ್ನು ವಹಿಸಿರುವುದು ನಮ್ಮ ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದ್ದಾಗ ಎಂದರು.

ವಾಹನ ಸಂಚಾರವೇ ಮಾಡಲಾಗದೆ ಸಂಪೂರ್ಣ ಹದಗೆಟ್ಟಿದ್ದ ತರೀಕೆರೆ ಪಟ್ಟಣದ ರಾ.ಹೆ. ೨೦೬ ರ ರಸ್ತೆಯನ್ನು ಚತು?ಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಲೋಕೋಪಯೋಗಿ ಇಲಾಖೆ ಒಳಗೊಂಡಂತೆ ವಿವಿಧ ೬ ಮೂಲಗಳಿಂದ ಒಟ್ಟು ರೂ. ೫೧.೬೪ ಮಂಜೂರಿ ಮಾಡಿಸಿದ್ದು ಕಾಮಗಾರಿ ಪ್ರಗತಿಯಲ್ಲಿರುವುದು ಎಲ್ಲರಿಗೂ ತಿಳಿಸಿದ ವಿ?ಯ ಎಂದರು.

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವನ್ನು ಮರು ನಿರ್ಮಾಣ ಮಾಡಲು ರೂ. ೯.೦೦ ಕೋಟಿ, ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ರೂ. ೧೦.೦೦ ಕೋಟಿ., ತರೀಕೆರೆ ಪಟ್ಟಣದ ಅಭಿವೃದ್ಧಿಗೆ ರೂ. ೫.೦೦ ಕೋಟಿಯನ್ನು ಮುಖ್ಯಮಂತ್ರಿಗಳ ವಿಶೇ? ಅನುದಾನ, ಅಲ್ಪ ಸಂಖ್ಯಾತರ ಕಾಲೋನಿಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ರೂ. ೩.೦೦ ಕೋಟಿ‌ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ ರೂ. ೬೦ ಲಕ್ಷ ಅನುದಾನವನ್ನು ಮಂಜೂರು ಮಾಡಿಸಿದ್ದಾರೆ ಎಂದು ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಾಸಕರ ಪತ್ನಿ ಮತ್ತು ಮಗಳು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿ?ಚಾರ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವುದು ಸುಳ್ಳು. ಯಾವುದೇ ಕಾರ್ಯಕ್ರಮವಿದ್ದರೂ ಆಯಾ ಭಾಗದ ಜನಪ್ರತಿನಿಧಿಗಳಿಂದಲೇ ಕಾರ್ಯಕ್ರಮ ನಿರ್ವಹಿಸಿದ್ದಾರೆ. ಇವರು ಸಾರ್ವಜನಿಕರ ಜೊತೆ ಪಾಲ್ಗೊಳ್ಳುತ್ತಿದ್ದಾರೆ ವಿನಃ ಯಾವುದೇ ಸರ್ಕಾರಿ ಶಿ?ಚಾರಕ್ಕೆ ಧಕ್ಕೆ ತಂದಿರುವುದಿಲ್ಲ. ಕ್ಷೇತ್ರದ ಜನರ ಸೇವೆಗೆಂದೆ ಜಿ.ಎಚ್. ಶ್ರೀನಿವಾಸ್ ಜನಹಿತ ಸೇವಾಟ್ರಸ್ಟ್ ನಿಂದ ಹಲವಾರು ಜನಪರ ಸೇವೆಗಳನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೇಸ್ ಮಹಿಳಾ ಘಟಕದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀಬಾಯಿ ಹೇಳಿದರು.

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಕಳೆದ ಸಾಲಿನಲ್ಲಿಯೇ ಶಾಸಕ ಜಿ.ಎಚ್. ಶ್ರೀನಿವಾಸ್ ರವರು ಮೊದಲನೆ ಬಾರಿಗೆ ಕೆರೆಗಳಿಗೆ ಭದ್ರಾ ಚಾನಲ್ ನಿಂದ ತುಂಬಿಸಿದ್ದಾರೆ. ಕಳೆದ ತಿಂಗಳು ಭದ್ರಾ ಮೇಲ್ದಂಡೆ ಚಾನ?? ನಲ್ಲಿ ನೀರು ಇಲ್ಲದ ಸಂದರ್ಭದಲ್ಲಿ ಜನ-ಜಾನುವಾರುಗಳಿಗೆ ನೀರಿನ ತೊಂದರೆಯಾಗದಂತೆ ನೀರನ್ನು ಹಾಯಿಸಿದ್ದರು ಎಂದು ತಾಲ್ಲೂಕು ಗ್ಯಾರಂಟಿ ಯೋಜನೆ ಸಮಿತಿ ಮತ್ತು ಕೆಡಿಪಿ ಸದಸ್ಯ ಮೆಹಬೂಬ್ ಹೇಳಿದರು.

ಶಾಲಾ ಕಾಲೇಜು ಅಭಿವೃದ್ಧಿ ಸಮಿತಿಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಶ್ರಮಿಸುವವರನ್ನು ಸಹ ಸದಸ್ಯರನ್ನಾಗಿ ಮಾಡುವಿದ್ದು, ಅದರಂತೆ ಶಾಸಕರ ಮಗಳು ಸದಸ್ಯರಾಗಿ ಶಾಲಾ-ಕಾಲೇಜುಗಳ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಶ್ರೀಧರ್, ಸಂತೋ?ನಾಯ್ಕ, ಸಂತೋ? ಮಾರ್, ಹರೀಶ್, ಕುಡ್ಲೂರು ಶಿವು, ಪ್ರಸನ್ನ, ಮಹಾಂತೇಶ ಮೊದಲಾದವರಿದ್ದರು.

BJP alleges against MLA G.H. Srinivas

 

 

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...