ಚಿಕ್ಕಮಗಳೂರು : ಪದವಿಧರ ಪತ್ತಿನ ಸಹಕಾರ ಸಂಘದಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಅವ್ಯವಹಾರ ಆಗಿದ್ದು, ಇದಕ್ಕೆಲ್ಲ ಹಿಂದಿನ ಬ್ಯಾಂಕಿನ ಅಧ್ಯಕ್ಷ ಲೋಕಪ್ಪ ಗೌಡ ಕಾರಣ ಎಂದು ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಿ.ಟಿ ಗೋಪಾಲಗೌಡ ಆರೋಪಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು ನೂತನವಾಗಿ ನಿರ್ಮಾಣವಾಗಿರುವ ಸಂಘದ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆದಿರುವುದಿಲ್ಲ, ತಾವೇ ಕಾನೂನು ಬಾಹಿರವಾಗಿ ವಸ್ತುಗಳನ್ನು ಖರೀದಿಸಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. 92 ಲಕ್ಷ ಹಣ ಮಂಜೂರಾಗಿದ್ದರು ಒಂದು ಕೋಟಿ 22 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಅಕ್ರಮ ಎಸಗಿದ್ದಾರೆ. ಈ ಮೂಲಕ 33 ಲಕ್ಷ ದುರುಪಯೋಗ ಆಗಿದೆ ಅಷ್ಟೇ ಅಲ್ಲದೆ ಸಂಘದ ಹಳೆಯ ಪೀಠೋಪಕರಣಗಳ ಹರಾಜು ಪ್ರಕ್ರಿಯೆಯಲ್ಲೂ ಕೂಡಾ ಅವ್ಯವಹಾರ ನಡೆದಿದೆ. ಇನ್ನೇನು ಸಂಘದ ಚುನಾವಣೆ ಸಮೀಪಿಸುತ್ತಿದ್ದು, ಅಧ್ಯಕ್ಷರು ಮತ್ತು ಅವರ ತಂಡ ಸಾವಿರಾರು ಜನರನ್ನು ಅನರ್ಹಗೊಳಿಸಿದೆ ಕೇವಲ 354 ಸದಸ್ಯರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ನೀಡಿದ್ದಾರೆ . ವಿವಿಧ ಕಾರಣಗಳನ್ನು ನೀಡಿ ಬೈಲಾದಲ್ಲಿರುವ ಮಾನದಂಡಗಳನ್ನು ಗಾಳಿಗೆ ತೂರಿದ್ದಾರೆ. ಬ್ಯಾಂಕಿನ ಮ್ಯಾನೇಜರ್ ನಾರಾಯಣಸ್ವಾಮಿ ಕೂಡ ಈ ಎಲ್ಲಾ ಅಕ್ರಮಗಳಲ್ಲಿ ಪಾತ್ರಧಾರಿಯಾಗಿದ್ದು ಸಹಕಾರಿ ಕಾನೂನನ್ನು ಸಂಪೂರ್ಣ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಈ ಕುರಿತು ಒಂದು ವರ್ಷದ ಹಿಂದೆ ಸಹಕಾರ ಸಂಘಗಳ ರಿಜಿಸ್ಟರ್ ಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ, ಸ್ಥಳೀಯ ಡಿಎಆರ್ ಕಳೆದ ಹಲವು ವರ್ಷಗಳಿಂದ ಒಂದೇ ಒಂದು ಬಾರಿಯೂ ಬ್ಯಾಂಕಿನ ಲೆಕ್ಕಪತ್ರಗಳ ಪರಿಶೀಲನೆ ನಡೆಸಿಲ್ಲ ಎನ್ನುವ ಮಾಹಿತಿ ತಿಳಿದು ಬಂದಿದೆ. ಹೀಗೆ ಅಕ್ರಮಗಳು ನಡೆದರೆ ಸಂಘದ ಗತಿ ಮುಂದೇನು ಎನ್ನುವ ಆತಂಕ ಮನೆ ಮಾಡಿದೆ ಎಂದು ಗೋಪಾಲ ಗೌಡ ಹೇಳಿದ್ದಾರೆ.
Leave a comment