ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಕಾಟ ನಿಲ್ಲುವ ಲಕ್ಷಣ ಕಾಣುತ್ತಿಲ್ಲ…. ಬೀಟಮ್ಮ ಆನೆಗಳ ಹಿಂಡು ಚಿಕ್ಕಮಗಳೂರು ಜಿಲ್ಲೆ ತೊರೆದು ಹಾಸನ ಜಿಲ್ಲೆಗೆ ಎಂಟ್ರಿ ಆಗುತ್ತಿದ್ದಂತೆ ಇನ್ನೇನು ಆನೆಗಳ ಕಾಟಕ್ಕೆ ಸದ್ಯಕ್ಕೆ ಮುಕ್ತಿ ಸಿಕ್ಕಿತು ಎನ್ನುವ ನೆಮ್ಮದಿಯಲ್ಲಿದ್ದ ಮಲೆನಾಡಿನ ಜನರಿಗೆ ಮತ್ತೆ ಆನೆಯ ಕಾಟ ಎದುರಾಗಿದೆ. ಚಿಕ್ಕಮಗಳೂರು ತಾಲೂಕಿನ ಕೆಆರ್ ಪೇಟೆ ಬಿಕ್ಕಿಮನೆ ಗ್ರಾಮಗಳಲ್ಲಿ ಒಂಟಿ ಸಲಗ ಭೀಮ ಕಳೆದ ರಾತ್ರಿ ಇಡಿ ಗ್ರಾಮ ಸುತ್ತಮುತ್ತ ಓಡಾಡಿ ಆತಂಕ ಸೃಷ್ಟಿಸಿದೆ.
ಒಂಟಿ ಸಲಗದ ಗ್ರಾಮದ ಓಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸರಿಯಾಗಿದ್ದು, ದೃಶ್ಯಗಳನ್ನು ನೋಡಿದ ಬಳಿಕ ಒಂಟಿ ಸಲಗ ಗ್ರಾಮಕ್ಕೆ ಬಂದಿರುವುದು ಗೊತ್ತಾಗಿದೆ. ಹಾಸನ ಜಿಲ್ಲೆಯ ಗಡಿ ಭಾಗದಿಂದ ನಿರಂತರವಾಗಿ ಕಾಡಾನೆಗಳು ಚಿಕ್ಕಮಗಳೂರು ತಾಲೂಕಿನ ಗ್ರಾಮಗಳಿಗೆ ಲಗ್ಗೆ ಇಡುತ್ತಿರುವುದು ಸ್ಥಳೀಯ ಕಾಫಿ ತೋಟದ ಮಾಲೀಕರಲ್ಲಿ ಬೆಳೆ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕೂಡಲೇ ಪದೇ ಪದೇ ಸುತ್ತಮುತ್ತಲಿನ ಗ್ರಾಮಗಳಿಗೆ ಎಂಟ್ರಿ ಕೊಡುತ್ತಿರುವ ಕಾಡಾನೆಗಳನ್ನು ಸ್ಥಳಾಂತರ ಮಾಡುವಂತೆ ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಸಿ.ಸಿ ಕ್ಯಾಮೆರಾದಲ್ಲಿ ಆನೆ ಸೆರಾಗಿರುವ ಆದಾರದಲ್ಲಿ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ ಎಂಬಂತೆ ಜಿಲ್ಲೆಯ ಮಲೆನಾಡು ಭಾಗದ ಜನರ ನಿದ್ದೆ ಕೆಡಿಸಿದ್ದ ಬೀಟಮ್ಮ ಗ್ಯಾಂಗ್ ನ ಭೀಮ ಆನೆ ಮತ್ತೆ ಗಡಿ ಭಾಗಕ್ಕೆ ಎಂಟ್ರಿ ಕೊಟ್ಟಿದ್ದು ಅಪಾಯಕಾರಿ ಎಂದೇ ಬಿಂಬಿತ ಆಗಿರುವ ಕಾಡಾನೆ ಬೇಲೂರು ಬಿಕ್ಕೊಡು ಕಡೆಯಿಂದ ಚಿಕ್ಕಗಳೂರು ಕಡೆಗೆ ಪುನರ್ ಆಗಮನ ಮಾಡಿದೆ
Leave a comment