ಚಿಕ್ಕಮಗಳೂರು : ಜಿಲ್ಲಾ ಒಕ್ಕಲಿಗರ ಸಂಘವು 25 ವರ್ಷಗಳ ಹಿಂದೆ ವಿಜಯಪುರದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಿದ್ದ ಸವಿನೆನಪಿಗಾಗಿ “ಬೆಳ್ಳಿ ಭವನ ” ವನ್ನು ಬಾಲಗಂಗಾಧರ ಸ್ವಾಮೀಜಿ ವೃತ್ತದಲ್ಲಿ ವಾಣಿಜ್ಯ ಸಂಕೀರ್ಣ (ಮಾಲ್ )ನಿರ್ಮಿಸಿ ಹಿರಿಯರನ್ನು ಸ್ಮರಿಸುವ ಕೆಲಸ ಎಲ್ಲರೂ ಮೆಚ್ಚುವಂತದ್ದು.
1937 ರಲ್ಲಿ ತಾಲ್ಲೂಕು ಒಕ್ಕಲಿಗರ ಸಂಘ ಪ್ರಾರಂಭವಾಗಿ 80_90 ರ ದಶಕದಲ್ಲಿ ಹಿರಿಯರ ದೂರದೃಷ್ಟಿ ದಾನ ಮತ್ತು ಶ್ರಮದಿಂದ ಜಿಲ್ಲೆಯಲ್ಲಿ ಬೃಹತ್ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಯಿತು.
ಪ್ರಸ್ತುತ ಟಿ.ರಾಜಶೇಖರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳು ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಹತ್ತು ಕೋಟಿ ವೆಚ್ಚದ ಕಟ್ಟಡ ನಾಳೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಯವರ ಸಾನಿಧ್ಯದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಲಿದ್ದಾರೆ.
1937 ರಲ್ಲಿ ಒಕ್ಕಲಿಗರ ವಿದ್ಯಾರ್ಥಿಗಳು ಬಾಳೆಹಳ್ಳಿ ನಾಗಮ್ಮ ಹೆಗ್ಗಡತಿಯವರ ನಿವಾಸದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಮಾತನಾಡಿಸಲು ಉಳಿಕೆರೆ ದೇವೇಗೌಡ ಸೇರಿದಂತೆ ಹಲವು ಹಿರಿಯರು ಬಂದು ಹೋಗುತ್ತಿದ್ದರು ಅಲ್ಲಿದ್ದ ಒಕ್ಕಲಿಗರ ವಿದ್ಯಾರ್ಥಿ ನಿಲಯ ಎಂಬ ಬೋರ್ಡ್ ತಾಲ್ಲೂಕು ಒಕ್ಕಲಿಗರ ಸಂಘ ಪ್ರಾರಂಭವಾಗಲು ಕಾರಣವಾಯಿತು ಉಳಿಕೆರೆ ದೇವೇಗೌಡ ಅಧ್ಯಕ್ಷರಾದರೆ ಕಾರ್ಯದರ್ಶಿಯಾಗಿ ಕಳವಾಸೆ ಅಣ್ಣೇಗೌಡರಾಗಿದ್ದರು ಮುಂದೆ 1962 ರಲ್ಲಿಜಿಲ್ಲಾಒಕ್ಕಲಿಗರ ಸಂಘವಾಗಿ ಇಂದು ಬೃಹತ್ ಒಕ್ಕಲಿಗರ ಸಂಘವಾಗಿ ಬೆಳೆದಿರುವುದು ದಾಖಲೆ.ಸಣ್ಣ ಸಿದ್ದೇಗೌಡ ಅಧ್ಯಕ್ಷರಾಗಿ ಸಣ್ಣ ತಮ್ಮೇಗೌಡರು ಕಾರ್ಯದರ್ಶಿ ಯಾಗಿ ಹಲವು ಹಿರಿಯರ ಶ್ರಮದಿಂದ 1999 ರಲ್ಲಿ ವಿಜಯಪುರದಲ್ಲಿ ನಿರ್ಮಾಣ ಮಾಡಿದ ಕಲ್ಯಾಣ ಮಂಟಪ ಸ್ಮರಣೀಯ.
ಒಕ್ಕಲಿಗರ ಸಂಘಕ್ಕೆ ಜಾಗ ಪಡೆದ ಹೋರಾಟ ಕೂಡ ಮರೆಯುವಂತಿಲ್ಲ ಜಾನಪದ ವಿದ್ವಾಂಸ ಜಿಲ್ಲಾಧಿಕಾರಿ ಹೆಚ್.ಎಲ್.ನಾಗೇಗೌಡ ಸಹಕಾರವನ್ನು ಸ್ಮರಿಸುತ್ತಾರೆ.
1962 ರಲ್ಲಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ವಿದ್ಯಾರ್ಥಿ ನಿಲಯಕ್ಕೆ ಅಡಿಗಲ್ಲು ಹಾಕಿ ಅವರೇ ಉದ್ಘಾಟಿಸಿದ್ದು ಮತ್ತು 1999 ರಲ್ಲಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲರು ಕಲ್ಯಾಣ ಮಂಟಪ ಉದ್ಘಟಿಸಿದ್ದು ಕೂಡ ವಿಶೇಷ ಎನ್ನುತ್ತಾರೆ ನಿರ್ದೇಶಕ ಚಂದ್ರಪ್ಪ.
ಜನಪರ ಮತ್ತು ವಿಧ್ಯಾರ್ಥಿಗಳ ಹಿತಕಾಯುವಲ್ಲಿ ಒಕ್ಕಲಿಗರ ಸಂಘ ಶ್ರಮಿಸುತ್ತಿರುವುದನ್ನು ಅಭಿನಂದಿಸಲೇ ಬೇಕು ಸಂಘವು ಇನ್ನಷ್ಟು ಮತ್ತಷ್ಟು ಉನ್ನತವಾಗಿ ಬೆಳೆಯಲಿ ಬೆಳಗಲಿ.
Leave a comment