ಚಿಕ್ಕಮಗಳೂರು: ರಾಜ್ಯ ಸಭೆ ಅಥವಾ ವಿಧಾನ ಪರಿಷತ್ ಸ್ಥಾನಗಳಿಗೆ ಆಯ್ಕೆ ಮಾಡುವಾಗ ಬಿ.ಎಲ್.ಶಂಕರ್ ಹೆಸರು ಎವರೆಸ್ಟ್ ಶಿಖರದ ತುದಿ ಮುಟ್ಟಿರುತ್ತದೆ ಇನ್ನೂ ಖಚಿತ ಎನ್ನುವಾಗ ಶಂಕರ್ ಹೆಸರು ತೆರೆಮರೆಗೆ ಸರಿದು ಮಾಯಾವಾಗುತ್ತದೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಶಂಕರ್ ಪರ ಪ್ರಬಲವಾಗಿ ನಿಂತು ವಿಧಾನ ಪರಿಷತ್ ಗೆ ಕಳುಹಿಸಿ ಸಭಾಪತಿ ಮಾಡುವ ಲೆಕ್ಕಾಚಾರವನ್ನು ಹೈಕಮ್ಯಾಂಡ್ ಎಳ್ಳುನೀರು ಬಿಟ್ಟಿದೆ.ಇದರಿಂದಾಗಿ ಶಂಕರ್ ಗೆ ಮತ್ತೆ ಮತ್ತೆ ಮಿಸ್ ಹೊಡೆಯುತ್ತಿರುವುದು ಏಕೆ .
ಶಂಕರ್ ಸದಾಕಾಲವೂ ಚಟುವಟಿಕೆಯಲ್ಲಿ ಇರುತ್ತಾರೆ.ಕಾಲೇಜು ದಿನಗಳಿಂದ ಸಂಘಟನೆ,ಹೋರಾಟ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಇಪ್ಪತ್ತೈದನೇ ವಯಸ್ಸಿನಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಯುವಜನ ಸೇವಾ ಮಂತ್ರಿಯಾಗಿ ದೇವೇಗೌಡರ ನೀಲಿ ಕಣ್ಣಿನ ಹುಡುಗನಾಗಿ ಸಕ್ರಿಯವಾಗಿದ್ದರು.ಬೆಳಗ್ಗೆ ವಿಧಾನ ಪರಿಷತ್ ಸದಸ್ಯರಾಗಿ ಸಂಜೆ ಮಂತ್ರಿಯಾದ ಶಂಕರ್ ಎಷ್ಟು ಗಟ್ಟಿಯಾಗಿದ್ದರು ಎಂಬುದಕ್ಕೆ ಸಾಕ್ಷಿ.
ದೇವೇಗೌಡರ ಜೊತೆಗೆ ಸಂಬಂಧ ಹಳಸಿದ ಮೇಲೆ ರಾಜಕೀಯವಾಗಿ ಮೂಲೆ ಗುಂಪಾಗಿ ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿ ಚಿಕ್ಕಮಗಳೂರು ರಾಜಕಾರಣದ ಸೂತ್ರಧಾರರಾಗಿದ್ದಾರೆ.
ಸ್ಪರ್ಧೆ ಮಾಡಿದ ಚುನಾವಣೆಯಲ್ಲಿ ಸೋಲು ಖಚಿತ ಎನ್ನುವ ಪರಿಸ್ಥಿತಿ ಕಳೆದ ಇಪ್ಪತ್ತೈದು ವರ್ಷಗಳಿಂದ ದೇವೇಗೌಡರ ಶಾಪದಿಂದ ಮುಕ್ತರಾಗಿಲ್ಲ.ಇನ್ನೂ ಕಾಂಗ್ರೆಸ್ ನ ಹಲವರು ಒಳಗೆ ಬತ್ತಿ ಇಡುತ್ತಿದ್ದಾರೆ ಎನ್ನುವವರು ಇದ್ದಾರೆ ಜಿಲ್ಲೆಯ ಶಾಸಕರುಗಳು ಶಂಕರ್ ಬರದಂತೆ ತಡೆದಿದ್ದಾರೆ ಎನ್ನುವವರು ಇದ್ದಾರೆ.ಶಂಕರ್ ಪವರ್ ಸೆಂಟರ್ ನಲ್ಲಿ ಇದ್ದರೆ ಜನರಿಂದ ಚುನಾಯಿತರಾದ ನಾವು ಇವರ ಬಳಿ ಹೋಗಬೇಕು ಎಂಬ ಲೆಕ್ಕಾಚಾರದಲ್ಲಿ ಮುಖ್ಯ ಮಂತ್ರಿ ಬಳಿ ಅಲವತ್ತು ಕೊಂಡು ಕಾಲು ಎಳೆದಿದ್ದಾರೆ ಎನ್ನುತ್ತಾರೆ.
ಕಳೆದ ಎರಡು ತಿಂಗಳಿಂದ ಶಂಕರ್ ಗೆ ಶುಭಾಶಯ ಕೇಳಿ,ಕೇಳಿ ಸಾಕಾಗಿದೆ ಅಂತೂ ಇಂತೂ ಶಂಕರ್ ಗೆ ವಿಧಾನ ಪರಿಷತ್ ಗೆ ಹೋಗುವ ಭಾಗ್ಯ ಬರಲಿಲ್ಲ. ಜಿಲ್ಲೆಯ ಮಾಜಿ ಮಂತ್ರಿ ಬೇಗಾನೆ ರಾಮಯ್ಯನವರ ಮಗಳು ಅನಿವಾಸಿ ಭಾರತೀಯ ಉಪಾಧ್ಯಕ್ಷೆ ಆರತಿಕೃಷ್ಣರನ್ನು ವಿಧಾನ ಪರಿಷತ್ ಗೆ ಕಳುಹಿಸಲು ಹೈಕಮ್ಯಾಂಡ್ ತೀರ್ಮಾನ ಮಾಡಿರುವುದರಿಂದ ಶಂಕರ್ ಗೆ ಮತ್ತೆ,ಮತ್ತೆ ಪ್ರಯತ್ನ ಮಾಡುವುದು ಬಿಟ್ಟು ಬೇರೆ ಯಾವ ಗ್ಯಾರಂಟಿ ಇಲ್ಲ.
B.L. Shankar misses again and again…?
Leave a comment