ಚಿಕ್ಕಮಗಳೂರು: ಜಿಲ್ಲಾಸ್ಪತ್ರೆ ಅಮಾಯಕ ರೋಗಿಗಳ ಆರೋಗ್ಯ ವಿಚಾರಿಸದೇ ಸಾವಿಗೆ ಕಾರಣರಾದ ಆಸ್ಪತ್ರೆಯ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಯುವ ಜನ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಮುಖಂಡರುಗಳು ಗುರುವಾರ ಅಪರ ಜಿಲ್ಲಾಧಿಕಾರಿ ನಾರಾಯಣಕನಕ ರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಯು.ಎಸ್.ಹೇಮಂತ್‌ಕುಮಾರ್ ಬಡ ರೋಗಿಗಳ ಸಾವಿಗೆ ಕಾ ರಣರಾದ ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕು. ಸ್ವತಂತ್ರ ತನಿಖೆಯನ್ನು ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆಗೆ ದಾಖಲಾದ ಅಮಾಯಕ ವ್ಯಕ್ತಿಗೆ ಸರಿಯಾದ ಸಮಯದಲ್ಲಿ ವೈದ್ಯರು ಹಾಗೂ ಸಿಬ್ಬ ಂದಿ ವರ್ಗ ಸೂಕ್ತ ಚಿಕಿತ್ಸೆ ನೀಡದಿರುವ ಪರಿಣಾಮ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿ ಸಾವು ಸಂಭವಿಸಿ ರುವುದು ಅತ್ಯಂತ ವಿಷಾನೀಯ ಘಟನೆ. ಈ ಸಾವಿನ ನೇರ ಹೊಣೆಗಾರಿಕೆ ಆಸ್ಪತ್ರೆಯ ಸಿಬ್ಬಂದಿಗಳದ್ದು ಎಂ ದು ಹೇಳಿದರು.
ಈಗಾಗಲೇ ಅನೇಕ ಸಂಘಟನೆಗಳ ಜಿಲ್ಲಾಸ್ಪತ್ರೆ ಮೂಲಸೌಕರ್ಯ ಕೊರತೆ ನೀಗಿಸಲು ಹಾಗೂ ರೋಗಿ ಗಳಿಗೆ ಸಮಗ್ರ ಸೌಲಭ್ಯ ಕಲ್ಪಿಸಲು ಜಿಲ್ಲಾ ಸರ್ಜನ್‌ಗೆ ಅವರಿಗೆ ದೂರು ಸಲ್ಲಿಸಲಾಗಿತ್ತು. ಆದರೆ ಆ ದೂರುಗ ಳಿಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಇಂಥ ಬಡಜನರ ಸಾವಿಗೆ ಕಾರಣವಾಗಿದೆ ಎಂದು ದೂರಿದರು.
ಜಿಲ್ಲಾಸ್ಪತ್ರೆಯ ಮೂಲಸೌಕರ್ಯ, ಸಿಬ್ಬಂದಿಗಳ ಕಾರ್ಯನೈಫುಣ್ಯ ಹಾಗೂ ಸೇವಾಗುಣಮಟ್ಟವನ್ನು ತ ಕ್ಷಣದಿಂದ ಸುಧಾರಿಸಬೇಕು. ಭವಿಷ್ಯದಲ್ಲಿ ಈ ದುರ್ಘಟನೆಗಳು ಮರುಕಳಿಸದಂತೆ ಕಠಿಣ ಮಾರ್ಗಸೂಚಿ ಗಳನ್ನು ರಾಜ್ಯಸರ್ಕಾರ ಜಾರಿಗೊಳಿಸಬೇಕು ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆ ಜನಸಾಮಾನ್ಯರ ಆಶ್ರಯತಾಣವಾಗಬೇಕಾದ ಕೇಂದ್ರ. ಇಲ್ಲಿ ನಡೆಯುತ್ತಿರುವ ನಿರ್ಲ ಕ್ಷ್ಯ, ಬೇಜವಾಬ್ದಾರಿತನದಿಂದ ಬಡ ಜನರು ತಮ್ಮ ಅಮೂಲ್ಯ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವುದು ಆತಂ ಕಾರಿ ಬೆಳವಣಿಗೆ. ಆದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿ ರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಡಿ.ಕೆ.ಸುನೀಲ್, ಪ್ರಧಾನ ಕಾರ್ಯದರ್ಶಿ ಎಂ.ಬಿ. ನಿತಿನ್, ಕಾರ್ಯದರ್ಶಿಗಳಾದ ಪುನೀತ್, ಅಕ್ಷಯ್, ಸುಜಯ್ ಹಾಜರಿದ್ದರು.
Appeal to the district administration to take action against government hospital staff
Leave a comment