ಚಿಕ್ಕಮಗಳೂರು ಅಂಬಳೆ ಬೆಣ್ಣೂರು ಮಾರ್ಗವಾಗಿ ಸರಿಯಾದ ಸಮಯಕ್ಕೆ ಬಸ್ ಸಂಚರಿಸಲು ಸೂಚನೆ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರುಗಳು ಕೆ.ಎಸ್.ಆರ್. ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್ ಅಂಬಳೆ ಮಾ ರ್ಗವಾಗಿ ಬೆಣ್ಣೂರು ಗ್ರಾಮಕ್ಕೆ ಹೋಗಿ ವಾಪಸ್ ಹಿಂದಿರುವ ಬಸ್ ಸಿರಗಾಪುರ, ಅಂಬಳೆ, ಬೆಣ್ಣೂರು, ಹಾದಿಹಳ್ಳಿ ಗ್ರಾಮಕ್ಕೆ ತಡವಾಗಿ ಬರುತ್ತಿದೆ ಎಂದು ಹೇಳಿದರು.
ಸಿರಗಾಪುರ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಗೊಳಿಸುತ್ತಿಲ್ಲ. ಇದರಿಂದ ಶಾಲಾ ಕಾಲೇಜಿಗೆ ತೆರಳು ವ ವಿದ್ಯಾರ್ಥಿಗಳು, ಜನಸಾಮಾನ್ಯರಿಗೆ ಬಹಳಷ್ಟ ತೊಂದರೆಯಾಗಿದೆ. ಅಲ್ಲದೇ ಬೆಳಿಗ್ಗೆ ಹಾಗೂ ಸಂಜೆ ಸಮಯಕ್ಕೆ ಬಸ್ ಸರಿಯಾಗಿ ಬರುತ್ತಿಲ್ಲ ಎಂದು ದೂರಿದರು.
ಕೂಡಲೇ ಕೆ.ಎಸ್.ಆರ್.ಟಿ.ಸಿ. ಇಲಾಖೆ ಈ ಭಾಗಕ್ಕೆ ಬೆಳಿಗ್ಗೆ ಬಸ್ ಸಂಚರಿಸಲು ಅನುವು ಮಾಡಿಕೊಡ ಬೇಕು. ಸಿರಗಾಪುರ ನಿಲ್ದಾಣದಲ್ಲಿ ಬಸ್ ನಿಲುಗಡೆಗೊಳಿಸಲು ಬಸ್ ನಿರ್ವಾಹಕರಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ನಗರಾಧ್ಯಕ್ಷ ಪ್ರವೀಣ್, ಜಿಲ್ಲಾ ಸಂಘಟನಾ ಸಂಚಾಲಕ ಟಿ.ಎಲ್. ಗಣೇಶ್, ಗ್ರಾಮಸ್ಥರಾದ ಅಣ್ಣಪ್ಪ, ಚಿಕ್ಕೇಗೌಡ ಮತ್ತಿತರಿದ್ದರು.
Appeal to run bus on Ambale-Bennur route
Leave a comment