ಚಿಕ್ಕಮಗಳೂರು : ತರೀಕೆರೆ ತಾಲ್ಲೂಕಿನ ಅಮೃತಾಪುರ ಹೋಬಳಿಯ ಕಂದಾಯ ಅಧಿಕಾರಿ ಕಾಂತರಾಜ್ ಇಂದು ಲಂಚ ಸ್ವೀಕರಿಸುವಾಗ ಲೋಕಯುಕ್ತ ಪೊಲೀಸ್ ರ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಹೊಸಹಳ್ಳಿ ತಾಂಡ್ಯದ ಕುಮಾರನಾಯ್ಕ ಎಂಬ ರೈತರ ಆರ್,ಟಿ,ಸಿ ತಿದ್ದುಪಡಿ ಮಾಡಲು ಕಳೆದ ಒಂದು ವರ್ಷದಿಂದ ಸತಾಯಿಸುತ್ತಿದ್ದು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಾಂತರಾಜ್ ಇಂದು ತರೀಕೆರೆ ತಾಲ್ಲೂಕು ಕಛೇರಿಯಲ್ಲಿ ಐದು ಸಾವಿರ ಲಂಚ ಪಡೆಯುವಾಗ ಲೋಕಯುಕ್ತ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ಹಾಗೂ ಚಂದ್ರಶೇಖರ್ ನೇತೃತ್ವದ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ. ಲೋಕಯುಕ್ತ ಪೊಲೀಸ್ ರು ಕಾಂತರಾಜ್ ನನ್ನು ಬಂಧಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಕಾಂತರಾಜ್ ಅಮೃತಾಪುರ ಹೋಬಳಿಯ ಆರ್,ಐ ಆಗಿ ಹಲವು ರೈತರಿಗೆ ಹಿಂಸೆ ನೀಡಿ ಹಣ ವಸೂಲಿ ಮಾಡುತ್ತಿದ್ದ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದ್ದವು ಇದೇ ಜಾಗದಲ್ಲಿ ಮುಂದುವರೆಯಲು ಆರು ಲಕ್ಷಕ್ಕೂ ಹೆಚ್ಚು ಹಣ ನೀಡಿದ್ದಾನೆ ಎಂದು ರೈತರು ದೂರುತ್ತಿದ್ದರು ಹಾವು ಹೊಡೆದು ಹದ್ದಿಗೆ ಹಾಕಿದ ಕಾಂತರಾಜ್ ನಂತಹ ನೌಕರರು ತಾಲ್ಲೂಕಿನಲ್ಲಿ ಹೆಚ್ಚಿದ್ದಾರೆ ಎಂದು ಜನರ ದೂರಿಗೆ ಲೋಕಯುಕ್ತ ಪೋಲಿಸ್ ರ ಕಾರ್ಯಕ್ಕೆ ಜನ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆ ಯಲ್ಲಿ ಲೋಕಾಯುಕ್ತ ಪೊಲೀಸರಾದ ಲೋಕೇಶ್ ಗಿರೀಶ್ ಸವಿನಯ್ ಇತರರು ಇದ್ದರು
Leave a comment