ಚಿಕ್ಕಮಗಳೂರು : ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ// ಅಶ್ವಥ್ ಬಾಬು ಕಲ್ಯಾಣ ಗುಣಗಳ ಬಗ್ಗೆ ಕಾದಂಬರಿ ಬರೆಯಬಹುದು ಎಂದು ವೈದ್ಯರುಗಳು ಮಾತನಾಡಿಕೊಳ್ಳುತ್ತಿದ್ದಾರೆ.ಇವರಿಗೆ ಹೆಗಲಿಗೆ ಹೆಗಲು ಕೊಟ್ಟು ಪಾಲುದಾರರಾಗಿರುವ ಜಿಲ್ಲಾ ಆಸ್ಪತ್ರೆಯ ಡಾ//ಮೋಹನ್ ಕುಮಾರ್ ಡಾ//ಮಂಜುನಾಥ್ ಮತ್ತು ಶೃಂಗೇರಿಯಲ್ಲಿರುವ ಡಾ// ಶ್ರೀನಿವಾಸ್ ಇವರುಗಳ ಹೆಸರಿನಲ್ಲೇ ಎಲ್ಲಾ ಅಡಗಿವೆ ಎಂತಹ ಮೈತ್ರಿ ಎಂದರೆ ಮಹಾರಾಷ್ಟ್ರ ಸರ್ಕಾರದ ರೀತಿಯ ಹೊಂದಾಣಿಕೆ ಇದೆ.
ಇಲಾಖೆಯಿಂದ ನೇಮಕಾತಿ ಮಾಡುವಾಗ ನಡೆದಿರುವ ಅಕ್ರಮಗಳಿಗೆ ಮೈತ್ರಿ ಎಂಬ ಅಭ್ಯರ್ಥಿ ಅಯ್ಕೆ ರೋಚಕವಾಗಿದೆ. ಮೈತ್ರಿ ಎಂಬ ಅಭ್ಯರ್ಥಿ ಒಂದೇ ವರ್ಷದಲ್ಲಿ ಮೂರು ಬಾರಿ ಅಯ್ಕೆಯಾಗಿದ್ದು ಹೇಗೆ ಎಂಬುದಕ್ಕೆ ಅಶ್ವಥ್ ಬಾಬು ರಂಗೀನಾಟ ಎದ್ದು ಕಾಣುತ್ತಿದೆ. ಗುತ್ತಿಗೆ ಅಧಾರದ ಮೇಲೆ 18_1_24 ಮೈತ್ರಿ ಎಂಬುವರಿಗೆ ಆದೇಶ ನೀಡಿ ಶೃಂಗೇರಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿರುತ್ತಾರೆ.ಅದರಲ್ಲೂ ಹಿಂದಿನ ದಿನ ಅರ್ಜಿ ಪಡೆದಿರುವುದು ಮಾಹಿತಿ ಹಕ್ಕಿನಡಿ ತಿಳಿಯುತ್ತದೆ. ಮಾಹಿತಿ ಹಕ್ಕುಗಳ ಅರ್ಜಿ ಸಲ್ಲಿಸಿದವರಿಗೆ ಕಿರುಕುಳ ನೀಡಿ ಸತಾಯಿಸಿದ್ದು ಬೇರೆ. ಶೃಂಗೇರಿಗೆ ಹೋದ ಮೈತ್ರಿಗಾಗಿ ಖಾಯಂ ಇದ್ದ ನೌಕರರ ವಸತಿ ಗೃಹ ಖಾಲಿ ಮಾಡಿಸಿ ನೀಡಿದ್ದು ಇನ್ನೂ ರೋಚಕವಾಗಿದೆ.ಇದಕ್ಕೆ ಅಲ್ಲಿನ ವೈದ್ಯ ಶ್ರೀನಿವಾಸ್ ಜಗಲ್ ಬಂದಿ ಇದೆ. ವಿಷಯ ಗೊತ್ತದ ಮೇಲೆ 22_7_24 ರಲ್ಲಿ ಮತ್ತೊಮ್ಮೆ ಮೈತ್ರಿ ಅಯ್ಕೆ ಮಾಡಿ ಜಿಲ್ಲಾ ಆಸ್ಪತ್ರೆಯ ಅಯಾಕಟ್ಟಿನ ಸ್ಥಳ ನೀಡಿರುವುದು ವೈದ್ಯ ಮೋಹನ್ ಕುಮಾರ್ ನಗು ನಗುತ್ತಲೇ ಸ್ವಾಗತಿಸಿ ಸತ್ಕರಿಸಿರುವ ಉದ್ದೇಶವನ್ನು ಆಸ್ಪತ್ರೆ ವೈದ್ಯರು ಆಪರೇಶನ್ ರೂಮ್ ನಲ್ಲಿ ಮಾತಾಡುವ ಗುಟ್ಟು ಗುಟ್ಟಾಗಿ ಉಳಿದಿಲ್ಲ. ಕಳೆದ ಐದು ವರ್ಷಗಳಿಂದ ಎಕ್ಕಮಕ್ಕ ಮಾಡಿ ಸೈ ಅನ್ನಿಸಿಕೊಂಡವರ ಕಹಾನಿ ಮಾತ್ರ ವಿಶೇಷ.
ಇದೇ ಮೈತ್ರಿಗೆ 31_1_24 ರಲ್ಲಿ ಚಿಕ್ಕಮಗಳೂರು ವೈದ್ಯಕೀಯ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ಡ್ಯೂಟಿ ನೀಡಿರುವುದು ಮೋಹನ್ ಕುಮಾರ್ ದುರಾಸೆ ಎನ್ನುತ್ತಾರೆ. 35 ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದಿದ್ದು 39 ಜನ ಅರ್ಜಿ ಸಲ್ಲಸಿದ್ದಾರೆ ಆದರೆ ಕೇವಲ 22 ಜನರನ್ನು ಅಯ್ಕೆ ಮಾಡಿದ್ದು ಮೈತ್ರಿ 22ನೆಯವರು ಇದು ಆನೇಕ ಅನುಮಾನ ಹುಟ್ಟಿಸುತ್ತಿದೆ. ಇದರ ಮಧ್ಯೆ ಇವರುಗಳು ಶೃಂಗೇರಿಯಲ್ಲಿ ನಡೆಸಿದ ಶ್ರೀಮಂತಕೆಯ ಕೂಟ ಕೂಡ ಸುದ್ದಿಯಾಗಿದೆ. ಡಾ//ಅಶ್ವಥ್ ಬಾಬು ಕಳೆದ ಇಪ್ಪತೈದು ವರ್ಷಗಳಿಂದ ಚಿಕ್ಕಮಗಳೂರಿನಲ್ಲಿದ್ದು ಶಾಸಕರನ್ನು ಅಫೀಸರ್ ಕ್ಲಬ್ ಗೆ ಕರೆಯಿಸಿ ಪಾರ್ಟಿ ಕೊಡಿಸುವಷ್ಟು ಪ್ರಭಾವಿಯಂತೆ
ಒಂದೇ ವರ್ಷದಲ್ಲಿ ಮೂರು ಬಾರಿ ಅಯ್ಕೆ ಮಾಡಿರುವ ಗೋಲ್ ಮಾಲ್ ಕತೆಯ ಹಿಂದೆ ಸ್ವಾರಸ್ಯಕರ ಕತೆಯಿದೆ ಇದಕ್ಕಾಗಿ ಗುಂಪಿನಾಟ ನಡೆದಿದೆ ಎಂದು ಆಸ್ಪತ್ರೆ ನೌಕರರು ಮತ್ತು ಸಿಬ್ಬಂದಿ ಅಷ್ಟೇ ಅಲ್ಲ ಬಾಗಿಲು ಕಿಟಕಿಗಳು ಸಾರಿ,ಸಾರಿ ಹೇಳುತ್ತವೆ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆದರೆ ಇವರುಗಳ ಇನ್ನಷ್ಟು ಮತ್ತಷ್ಟು ರೋಚಕ ಕತೆ ಹೊರ ಬರುತ್ತವೆ ಇದಕ್ಕಾಗಿ ಮಾಹಿತಿ ಹಕ್ಕುಗಳ ಕಾರ್ಯಕರ್ತರು ಹಿಂದೆ ಬಿದ್ದಿದ್ದಾರೆ.
Leave a comment